ನವದೆಹಲಿ: ಎಫ್‌ಡಿ ಮೇಲೆ ಅಧಿಕ ಬಡ್ಡಿ : ನೀವು ಸಹ ಹಣವನ್ನು ಬ್ಯಾಂಕಿನ ಸ್ಥಿರ ಠೇವಣಿ (ಎಫ್‌ಡಿ) ಯಲ್ಲಿ ಹೂಡಿಕೆ ಮಾಡಿದ್ದರೆ ನಿಮಗೆ ಹೆಚ್ಚು ಗಳಿಸುವ ಅವಕಾಶವಿದೆ. ಅದಕ್ಕಾಗಿ ನೀವು ಹೆಚ್ಚಾಗಿ ಏನನ್ನೂ ಮಾಡುವ ಅವಶ್ಯಕತೆ ಇಲ್ಲ. ಕರೋನಾ ಲಸಿಕೆ ಪಡೆದರೆ ಅಷ್ಟೇ ಸಾಕು. ನೀವು ಕೋವಿಡ್ -19 ಲಸಿಕೆ (Covid-19 Vaccine) ಪಡೆದರೆ, ನಿಮ್ಮ ಎಫ್‌ಡಿ ಮೇಲೆ ಅಧಿಕ ಬಡ್ಡಿ ಸಿಗಲಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೊಡುಗೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಪ್ರಸ್ತಾಪವನ್ನು ನೀಡಿದ್ದು, ಇದರಲ್ಲಿ ಕರೋನಾ ಲಸಿಕೆ (Corona Vaccine) ಪಡೆದವರಿಗೆ ನಿಗದಿತ ಠೇವಣಿಗಳ ಮೇಲೆ 25 ಬೇಸಿಸ್ ಪಾಯಿಂಟ್ ಹೆಚ್ಚಿನ ಬಡ್ಡಿ ನೀಡಲಾಗುವುದು. ಹಿರಿಯ ನಾಗರಿಕರಿಗೆ ಈ ಕುರಿತು 25 ಬೇಸಿಸ್ ಪಾಯಿಂಟ್‌ಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು, ಅಂದರೆ ಅವರಿಗೆ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿ ಲಭ್ಯವಾಗಲಿದೆ.
ಇದನ್ನೂ ಓದಿ - Post Office Scheme: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 100 ರೂ.ಗಿಂತ ಕಡಿಮೆ ಹೂಡಿಕೆಯಲ್ಲಿ ಪಡೆಯಿರಿ 14 ಲಕ್ಷ ರೂ.
ಇಮ್ಯೂನ್ ಇಂಡಿಯಾ ಠೇವಣಿ ಯೋಜನೆ (Immune India Deposit Scheme) :
ವ್ಯಾಕ್ಸಿನೇಷನ್ ಉತ್ತೇಜಿಸಲು ಬ್ಯಾಂಕ್ ವಿಶೇಷ ಠೇವಣಿ ಯೋಜನೆ 'ಇಮ್ಯೂನ್ ಇಂಡಿಯಾ ಠೇವಣಿ ಯೋಜನೆ' ತಂದಿದೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಯೋಜನೆ 1111 ದಿನಗಳವರೆಗೆ ಲಭ್ಯವಿರಲಿದೆ. ಇದರಲ್ಲಿ ಲಸಿಕೆ ಪಡೆದವರಿಗೆ ಸಾಮಾನ್ಯ ಎಫ್‌ಡಿ ದರಗಳಿಗಿಂತ 25 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿ ಸಿಗುತ್ತದೆ ಎಂದು ತಿಳಿಸಿದೆ.
कोविड 19 के अधीन वैक्सीन लगवाने हेतु प्रेरित करने के क्रम में सेन्ट्रल बैंक ऑफ इंडिया ने उन नागरिकों जिन्होंने वैक्सीन लगवायी है के लिए 25 आधार बिंदु अधिक अतिरिक्त आकर्षक ब्याज दर पर 1111 दिनों हेतु “इम्युन इंडिया डिपॉजिट योजना” नाम से विशेष जमा उत्पाद प्रारंभ किया है. pic.twitter.com/KsT5F1SqDn
— Central Bank of India (@centralbank_in) April 12, 2021
ಕರೋನಾ ಲಸಿಕೆ ಪಡೆಯಲು ನಾಗರಿಕರನ್ನು ಪ್ರೋತ್ಸಾಹಿಸುವುದು ಈ ಪ್ರಸ್ತಾಪದ ಉದ್ದೇಶ. ಜನರು ಆದಷ್ಟು ಬೇಗ ಲಸಿಕೆ ಪಡೆಯಬೇಕು ಮತ್ತು ಈ ಪ್ರಸ್ತಾಪದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಬ್ಯಾಂಕ್ ಹೇಳಿದೆ, ಏಕೆಂದರೆ ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.
ಇದನ್ನೂ ಓದಿ - Public Provident Fund: ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ, 26 ಲಕ್ಷ ರೂ. ಗಳಿಸಿ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ಎಫ್‌ಡಿ ದರಗಳು:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ 2.75% ರಿಂದ 5.1% ಬಡ್ಡಿಯನ್ನು ಪಾವತಿಸುತ್ತದೆ. ಈ ದರಗಳು 8 ಜನವರಿ 2021 ರಿಂದ ಅನ್ವಯವಾಗುತ್ತವೆ. ನೀವು ಕರೋನಾ ಲಸಿಕೆ ಪಡೆದರೆ, ಈ ಸ್ಥಿರ ಬಡ್ಡಿದರಗಳಿಗಿಂತ 25 ಬಿಎಸ್ಪಿ ಹೆಚ್ಚು ಪಡೆಯಬಹುದು.
ಟರ್ಮ್ | ಎಫ್ಡಿ ಬಡ್ಡಿದರ |
7 -14 ದಿನಗಳು | 2.75% |
15 - 30 ದಿನಗಳು | 2.90% |
31 - 45 ದಿನಗಳು | 2.90% |
46 - 59 ದಿನಗಳು | 3.25% |
60 - 90 ದಿನಗಳು | 3.25% |
91 - 179 ದಿನಗಳು | 3.90% |
180 - 270 ದಿನಗಳು | 4.25% |
271 - 364 ದಿನಗಳು | 4.25% |
1-2 ವರ್ಷಗಳು | 4.90% |
2-3 ವರ್ಷಗಳು | 5.00% |
3-5 ವರ್ಷಗಳು | 5.10% |
5 ರಿಂದ 10 ವರ್ಷಗಳು | 5.10% |
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.