Budget- 2021: BitCoin ಸೇರಿದಂತೆ ಎಲ್ಲ ಪ್ರೈವೇಟ್ ಕರೆನ್ಸಿಗಳ ಮೇಲೆ ನಿಷೇಧ, ಬಜೆಟ್ ಅಧಿವೇಶನದಲ್ಲಿ ಬರಲಿದೆ ಬಿಲ್

Budget- 2021: ಈ ಬಾರಿಯ ಬಜೆಟ್ ಅಧಿವೇಶನದಲ್ಲಿ RBIನ ಡಿಜಿಟಲ್ ಕರೆನ್ಸಿಗಾಗಿ ಉತ್ತಮ ಫ್ರೇಮ್ ವರ್ಕ್ ಸಿದ್ಧಪಡಿಸಲಾಗುವುದು.

Written by - Nitin Tabib | Last Updated : Jan 30, 2021, 03:46 PM IST
  • ಬಿಟ್ ಕಾಯಿನ್ ಗಳಲ್ಲಿ ಹೂಡಿಕೆ ಮಾಡುವವರಿಗೆ ಶಾಕಿಂಗ್ ಸುದ್ದಿ ಪ್ರಕಟವಾಗಿದೆ.
  • ಇಂತಹ ಪ್ರೈವೇಟ್ ಕರೆನ್ಸಿಗಳ ಮೇಲೆ ನಿಷೇಧ ಬೀಳುವ ಸಾಧ್ಯತೆ ಇದೆ.
  • RBI ಡಿಜಿಟಲ್ ಕರೆನ್ಸಿಗೆ ಒತ್ತು ನೀಡಲು ಮಸೂದೆ ಅನುಮೊದನೆಯಾಗುವ ಸಾಧ್ಯತೆ
Budget- 2021: BitCoin ಸೇರಿದಂತೆ ಎಲ್ಲ ಪ್ರೈವೇಟ್ ಕರೆನ್ಸಿಗಳ ಮೇಲೆ ನಿಷೇಧ, ಬಜೆಟ್ ಅಧಿವೇಶನದಲ್ಲಿ ಬರಲಿದೆ ಬಿಲ್  title=
Budget 2021 (File Photo)

ನವದೆಹಲಿ: Budget- 2021 - ಬಿಟ್ ಕಾಯಿನ್ ರೀತಿಯ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಿರುವವರಿಗೆ ಶಾಕಿಂಗ್ ಸುದ್ದಿಯೊಂದು ಪ್ರಕಟವಾಗಿದೆ. ಬಿಟ್ ಕಾಯಿನ್ ಗಳಂತಹ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಮಸೂದೆ ಈ ಬಜೆಟ್ (Budget-2021)ಅಧಿವೇಶನದಲ್ಲಿ ಮಂಡಿಸಲಾಗುವ ಎಲ್ಲಾ ಸಾಧ್ಯತೆಗಳು ಇದೀಗ ಗೋಚರಿಸತೊಡಗಿವೆ. ಕ್ರಿಪ್ಟೋ ಕರೆನ್ಸಿಗಳನ್ನು ಸಂಪೂರ್ಣ ನಿಷೇಧಿಸುವ ಯಾವುದೇ ಯೋಜನೆ ಇಲ್ಲವಾದರೂ ಕೂಡ ಭಾರತದ ಕೇಂದ್ರೀಯ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೊಳಿಸುತ್ತಿರುವ ಅಧಿಕೃತ ಡಿಜಿಟಲ್ ಕರೆನ್ಸಿಗೆ ದಾರಿ ಸಿದ್ಧಪಡಿಸಲಾಗುತ್ತಿದೆ. ಅಧಿವೇಶನಕ್ಕೆ ನಿಗದಿಪಡಿಸಿದ ವೇಳಾಪಟ್ಟಿಯ ಪ್ರಕಾರ, ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ, 2021 ಅನ್ನು ಈ ಬಜೆಟ್ ಅಧಿವೇಶನದಲ್ಲಿ ತರಲಾಗುವುದು ಹಾಗೂ ನಂತರ ಅದನ್ನು ಅಂಗೀಕರಿಸಲಾಗುವುದು ಎನ್ನಲಾಗಿದೆ.

ಕ್ರಿಪ್ಟೋಕರೆನ್ಸಿ (Cryptcurrency) ತಂತ್ರಜ್ಞಾನ ಹಾಗೂ ಅದರ ಪ್ರಯೋಗಕ್ಕೆ ಒತ್ತು ನೀಡಲಾಗುವುದು
ಲೋಕಸಭಾ ಬುಲೆಟಿನ್ ಪ್ರಕಾರ, ಆರ್ಬಿಐನ ಅಧಿಕೃತ ಡಿಜಿಟಲ್ ಕರೆನ್ಸಿಗೆ (RBI Digital Currency) ಉತ್ತಮ ಚೌಕಟ್ಟನ್ನು ಸಿದ್ಧಪಡಿಸುವುದು ಈ ಕಾನೂನಿನ ಉದ್ದೇಶವಾಗಿದೆ. ಇದಲ್ಲದೆ, ದೇಶದ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ಮಸೂದೆಯ ಮೂಲಕ ನಿಷೇಧಿಸಲಾಗುವುದು. ಆದಾಗ್ಯೂ, ಕ್ರಿಪ್ಟೋಕರೆನ್ಸಿಯ ಆಧಾರವಾಗಿರುವ ತಂತ್ರಜ್ಞಾನ ಮತ್ತು ಅದರ ಬಳಕೆಯನ್ನು ಉತ್ತೇಜಿಸಲು ಕೆಲವು ವಿನಾಯಿತಿಗಳನ್ನು ಅನುಮೊದಿಸಲಾಗುತ್ತಿದೆ ಎನ್ನಲಾಗಿದೆ.

ಇದನ್ನುಓದಿ-

ಕ್ರಿಪ್ಟೋಕರೆನ್ಸಿ ವ್ಯವಹಾರಕ್ಕೆ ಈಗಾಗಲೇ ಸುಪ್ರೀಂ (Supreme Court Of India) ಹಸಿರು ನಿಶಾನೆ ತೋರಿದೆ
ಭಾರತದಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ನಿಶ್ಚಿತ ಮಾರ್ಗಸೂಚಿಗಳಿಲ್ಲ. ಮೂರು ವರ್ಷಗಳ ಹಿಂದೆ ಅಂದರೆ 2018 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯ ಪ್ರಕಾರ, ನಿಯಂತ್ರಿತ ಘಟಕಗಳಿಗೆ ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ಯಾವುದೇ ಸೇವೆಗಳನ್ನು ಒದಗಿಸುವುದನ್ನು ಕೇಂದ್ರ ಬ್ಯಾಂಕ್ ನಿಷೇಧಿಸಲಾಗಿದೆ. ಇದರ ನಂತರ, ಈ ಪ್ರಕರಣವು ದೇಶದ ಅತಿದೊಡ್ಡ ನ್ಯಾಯಾಲಯವಾದ ಸರ್ವೋಚ್ಚ ನ್ಯಾಯಾಲಯಕ್ಕ ವರ್ಗಾವಣೆಗೊಂಡಿತ್ತು. ಕಳೆದ ವರ್ಷ ಮಾರ್ಚ್ 2020 ರಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ಆರ್‌ಬಿಐ ವಿಧಿಸಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಅಂದಿನಿಂದ, ಭಾರತದಲ್ಲಿ ಬಿಟ್‌ಕಾಯಿನ್ (BitCoin)‌ ನಲ್ಲಿ ಹೂಡಿಕೆ ಮಾಡುವುದು ಸಂಪೂರ್ಣವಾಗಿ ಹೂಡಿಕೆದಾರರ ರಿಸ್ಕ್ ಅನ್ನು ಆಧರಿಸಿದೆ. ಏಕೆಂದರೆ ಇದುವರೆಗೆ ಅದಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಸೂಕ್ತ ನೀತಿ ನಿಯಮಗಳಿಲ್ಲ.

ಇದನ್ನು ಓದಿ-

BitCoin ನಂತೆಯೇ ಕ್ರಿಪ್ಟೋಕರೆನ್ಸಿ ಆಗಿದೆ ವರ್ಚ್ಯುವಲ್ ಕರೆನ್ಸಿ
BitCoin ನಂತಹ ಕ್ರಿಪ್ಟೋಕರೆನ್ಸಿ ಒಂದು ವರ್ಚ್ಯುವಲ್ ಕರನ್ಸಿಯಾಗಿದೆ. ಇದನ್ನು ರೂಪಾಯಿ ಹಾಗೂ ಡಾಲರ್ ಗಳಂತೆಯೇ ಯಾವುದೇ ಪ್ರಕಾರದ ವ್ಯವಹಾರಕ್ಕಾಗಿ ಬಳಕೆ ಮಾಡಬಹುದಾಗಿದೆ. ಪ್ರಸ್ತುತ ಇಂತಹ ಕರೆನ್ಸಿಯ ವೇಗ ವ್ಯಾಪಕವಾಗಿ ಬೆಳೆಯಲಾರಂಭಿಸಿದೆ. ಪೇಪಲ್ಇದೀಗ ತನ್ನ ಪ್ಲಾಟ್ ಫಾರ್ಮ್ ಮೇಲೆ ಬಿಟ್ ಕಾಯಿನ್ ಮೂಲಕ ನಡೆಸಲಾಗುವ ವ್ಯವಹಾರಕ್ಕೆ ಅನುಮತಿ ನೀಡಿದೆ. ಅಂದರೆ ಪೇಪಲ್  ಮೂಲಕ ವ್ಯವಹಾರ ನಡೆಸಲು ಬಿಟ್ ಕಾಯಿನ್ ಮೂಲಕ ನೀವು ಹಣವನ್ನು ಪಾವತಿಸಬಹುದು.

ಇದನ್ನು ಓದಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News