ಜನವರಿ 1 ರಿಂದ ಬ್ಯಾಂಕಿನ ನಿಯಮಗಳಲ್ಲಿ ಬದಲಾವಣೆ , 10 ಸಾವಿರಕ್ಕಿಂತ ಹೆಚ್ಚು ಠೇವಣಿ ಇಟ್ಟರೆ ವಿಧಿಸಲಾಗುತ್ತದೆ ಶುಲ್ಕ

ವರ್ಷದ ಕೊನೆಯ ತಿಂಗಳು ನಡೆಯುತ್ತಿದೆ. ಕೆಲವು ದಿನಗಳ ನಂತರ, ಹೊಸ ವರ್ಷ 2022 ಪ್ರಾರಂಭವಾಗುತ್ತದೆ. ಇದರೊಂದಿಗೆ ಕೆಲವು ನಿಯಮಗಳು ಕೂಡಾ ಬದಲಾಗಲಿವೆ.

Written by - Ranjitha R K | Last Updated : Dec 30, 2021, 02:14 PM IST
  • ಜನವರಿ 1 ರಿಂದ ಬದಲಾಗುತ್ತಿವೆ ಬ್ಯಾಂಕಿನ ನಿಯಮಗಳು
  • ಗ್ರಾಹಕರು ಪಾವತಿಸಬೇಕಾಗುತ್ತದೆ ಹೆಚ್ಚುವರಿ ಶುಲ್ಕ
  • ಎಷ್ಟು ಶುಲ್ಕ ವಿಧಿಸಲಾಗುತ್ತದೆ?
ಜನವರಿ 1 ರಿಂದ ಬ್ಯಾಂಕಿನ ನಿಯಮಗಳಲ್ಲಿ ಬದಲಾವಣೆ , 10 ಸಾವಿರಕ್ಕಿಂತ ಹೆಚ್ಚು ಠೇವಣಿ ಇಟ್ಟರೆ ವಿಧಿಸಲಾಗುತ್ತದೆ ಶುಲ್ಕ  title=
ಜನವರಿ 1 ರಿಂದ ಬದಲಾಗುತ್ತಿವೆ ಬ್ಯಾಂಕಿನ ನಿಯಮಗಳು (file photo)

ನವದೆಹಲಿ :  ವರ್ಷದ ಕೊನೆಯ ತಿಂಗಳು ನಡೆಯುತ್ತಿದೆ. ಕೆಲವು ದಿನಗಳ ನಂತರ, ಹೊಸ ವರ್ಷ 2022 ಪ್ರಾರಂಭವಾಗುತ್ತದೆ. ಇದರೊಂದಿಗೆ ಕೆಲವು ನಿಯಮಗಳು ಕೂಡಾ ಬದಲಾಗಲಿವೆ. ಈ ಅನುಕ್ರಮದಲ್ಲಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (India Post Payments Bank -IPPB) ಗ್ರಾಹಕರೂ ಶಾಕ್ ಆಗಲಿದ್ದಾರೆ. ಈ ಬ್ಯಾಂಕಿನ ಖಾತೆದಾರರು ಮಿತಿಗಿಂತ ಹೆಚ್ಚು ಹಣವನ್ನು ಹಿಂಪಡೆಯಲು ಮತ್ತು ಠೇವಣಿ ಮಾಡಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ನಿಯಮವು ಜನವರಿ 1 ರಿಂದ ಜಾರಿಗೆ ಬರಲಿದೆ. 

ಮಾಹಿತಿ ನೀಡಿರುವ ಬ್ಯಾಂಕ್  : 
ಐಪಿಪಿಬಿಯಲ್ಲಿ (IPPB) ಮೂರು ರೀತಿಯ ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಈ ಬ್ಯಾಂಕಿನಲ್ಲಿ (Bank) ಇನ್ನೂ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (India Post Payments Bank) ನೀಡಿದ ಮಾಹಿತಿಯ ಪ್ರಕಾರ, ಮೂಲ ಉಳಿತಾಯ ಖಾತೆಯಿಂದ ಪ್ರತಿ ತಿಂಗಳು ನಾಲ್ಕು ಬಾರಿ ಉಚಿತವಾಗಿ ನಗದು ಹಿಂಪಡೆಯಬಹುದು. ನಂತರ, ಗ್ರಾಹಕರು ಪ್ರತಿ ಹಿಂಪಡೆಯುವಿಕೆಯ ಮೇಲೆ ಕನಿಷ್ಠ 25 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಬೇಸಿಂಗ್ ಉಳಿತಾಯ ಖಾತೆಯಲ್ಲಿ (Basic Saving account) ಹಣವನ್ನು ಠೇವಣಿ ಮಾಡಲು ಯಾವುದೇ ಶುಲ್ಕವಿರುವುದಿಲ್ಲ . 

ಇದನ್ನೂ ಓದಿ : Cooking Oil : 2022 ರಲ್ಲಿ ಭಾರಿ ಇಳಿಕೆಯಾಗಲಿದೆ ಅಡುಗೆ ಎಣ್ಣೆ ಬೆಲೆ!

ಎಷ್ಟು ಶುಲ್ಕ ವಿಧಿಸಲಾಗುತ್ತದೆ?
ಈ ಬ್ಯಾಂಕ್‌ನಲ್ಲಿ ಉಳಿತಾಯ (Saving Bank Account) ಮತ್ತು ಚಾಲ್ತಿ ಖಾತೆಗಳಲ್ಲಿ ಒಂದು ತಿಂಗಳಲ್ಲಿ 10,000 ರೂ.ಗಳನ್ನು ಠೇವಣಿ ಮಾಡಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಈ ಮಿತಿಗಿಂತ ಹೆಚ್ಚು ಠೇವಣಿ ಇಟ್ಟರೆ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ. ಮೂಲ ಉಳಿತಾಯ ಖಾತೆಯನ್ನು ಹೊರತುಪಡಿಸಿ ಇತರ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಯಿಂದ ಪ್ರತಿ ತಿಂಗಳು 25,000 ರೂ.ಗಳವರೆಗೆ ಹಿಂಪಡೆಯಲು ಯಾವುದೇ ಶುಲ್ಕವಿರುವುದಿಲ್ಲ. ಉಚಿತ ಮಿತಿಯ ನಂತರ ಪ್ರತಿ ಬಾರಿ ಹಣವನ್ನು ಹಿಂಪಡೆಯಲು ಕನಿಷ್ಠ 25 ರೂಪಾಯಿಗಳನ್ನು ವಿಧಿಸಲಾಗುತ್ತದೆ. 

IPPB ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಎಲ್ಲಾ ನಿಯಮಗಳು ಜನವರಿ 1, 2022 ರಿಂದ ಅನ್ವಯವಾಗುತ್ತವೆ. ಅಂದರೆ ಜನವರಿ 1ರಿಂದ ಗ್ರಾಹಕರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. GST/CESS ಅನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. 

ಇದನ್ನೂ ಓದಿ : Wedding : ಕೊರೋನಾ ಸಮಯದಲ್ಲಿ ಮದುವೆ ಕ್ಯಾನ್ಸಲ್ ಮಾಡಿದ್ರೆ ಸಿಗಲಿದೆ ₹10 ಲಕ್ಷ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News