ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ..! ತಪ್ಪಿದರೆ ಎದುರಾದೀತು ಈ ಸಮಸ್ಯೆಗಳು

ತುರ್ತು ಪರಿಸ್ಥಿತಿ ಎದುರಾದಾಗ, ನಿಮ್ಮ ಬಳಿ ಹಣವಿಲ್ಲದಿದ್ದರೆ, ಆ ಸಮಯದಲ್ಲಿ ಕ್ರೆಡಿಟ್ ಕಾರ್ಡ್ ಸಹಾಯಕ್ಕೆ ಬರುತ್ತದೆ. ಆದರೆ, ಜನರು ಯಾವುದೇ ಯೋಜನೆ ಇಲ್ಲದೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಿ ಸಮಸ್ಯೆಗೆ ಸಿಲುಕುತ್ತಾರೆ.   

Written by - Ranjitha R K | Last Updated : Jun 15, 2021, 12:40 PM IST
  • ಕ್ರೆಡಿಟ್ ಕಾರ್ಡ್ ಬಳಸುವ ಮುನ್ನ ತಿಳಿದಿರಲಿ ಈ ವಿಚಾರಗಳು
  • ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಿ ಸಮಸ್ಯೆಗೆ ಸಿಲುಕಬೇಕಾಗುತ್ತದೆ
  • ಸರಿಯಾದ ಸಮಯಕ್ಕೆ ಹಣ ಪಾವತಿಯಾಗದಿದ್ದರೆ ಎದುರಾದೀತು ಸಮಸ್ಯೆ
 ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ..! ತಪ್ಪಿದರೆ ಎದುರಾದೀತು ಈ ಸಮಸ್ಯೆಗಳು title=
ಕ್ರೆಡಿಟ್ ಕಾರ್ಡ್ ಬಳಸುವ ಮುನ್ನ ತಿಳಿದಿರಲಿ ಈ ವಿಚಾರಗಳು (file photo zee news)

ನವದೆಹಲಿ : ಇಂದಿನ ಕಾಲದಲ್ಲಿ ಕ್ರೆಡಿಟ್ ಕಾರ್ಡ್‌ (credit card) ಬಳಸುವ ಹವ್ಯಾಸ ಹೆಚ್ಚುತ್ತಿದೆ. ನಗರದಲ್ಲಿ ಮಾತ್ರವಲ್ಲ, ಈಗ ಸಣ್ಣ ಪಟ್ಟಣಗಳಲ್ಲಿನ ಜನರು ಕೂಡಾ ವಿವೇಚನೆಯಿಲ್ಲದೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ. ಕ್ರೆಡಿಟ್ ಕಾರ್ಡ್ ಎರಡು ಅಂಶಗಳಿವೆ. ಮೊದಲನೆಯದಾಗಿ, ನೀವು ಏನನ್ನಾದರೂ ಖರೀದಿಸಲು ಬಯಸುತ್ತೀರಿ. ಆದರೆ ನಿಮ್ಮ ಬಳಿ ಅಷ್ಟು ಹಣವಿರುವುದಿಲ್ಲ.  ಸಂದರ್ಭದಲ್ಲಿ ತಕ್ಷಣಕ್ಕೆ ಕ್ರೆಡಿಟ್ ಕಾರ್ಡ್ (Credit card payment) ಮೂಲಕ ಪಾವತಿಸಬಹುದು. ನಂತರ ಖರ್ಚು ಮಾಡಿದ ಅಷ್ಟೂ ಹಣವನ್ನೂ ತುಂಬಬೇಕಾಗುತ್ತದೆ. ಎರಡನೆಯದಾಗಿ, ಇದ್ದಕ್ಕಿದ್ದಂತೆ ತುರ್ತು ಪರಿಸ್ಥಿತಿ ಎದುರಾದಾಗ, ನಿಮ್ಮ ಬಳಿ ಹಣವಿಲ್ಲದಿದ್ದರೆ, ಆ ಸಮಯದಲ್ಲಿ ಕ್ರೆಡಿಟ್ ಕಾರ್ಡ್ ಸಹಾಯಕ್ಕೆ ಬರುತ್ತದೆ. ಆದರೆ, ಜನರು ಯಾವುದೇ ಯೋಜನೆ ಇಲ್ಲದೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಿ ಸಮಸ್ಯೆಗೆ ಸಿಲುಕುತ್ತಾರೆ. 

ಅಧಿಕ ಬಡ್ಡಿ ಪಾವತಿಸಬೇಕಾಗುತ್ತದೆ:
ಕ್ರೆಡಿಟ್ ಕಾರ್ಡ್‌ಗಳ (Credit card) ಮೇಲೆ ಹೆಚ್ಚಿನ ಬಡ್ಡಿಯನ್ನು ವಿಧಿಸಲಾಗುತ್ತದೆ. ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸದಿದ್ದರೆ, ಈ ಬಾಕಿ ಹಾಗೆಯೇ ಉಳಿಯುತ್ತದೆ. ಬಾಕಿ ಉಳಿದಿರುವ ಮೊತ್ತಕ್ಕೆ ಬಡ್ಡಿ (interest) ಸೇರುತ್ತಾ ಹೋಗುತ್ತದೆ. ಇದು ಮಾಸಿಕ 3 ಶೇಕಡಾದಿಂದ ವಾರ್ಷಿಕ 30-36ರವರೆಗೂ ಇರಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಬಿಲ್ (Credit card bill) ಪಾವತಿಸದಿದ್ದರೆ, ದೊಡ್ಡ ಮೊತ್ತದ ಬಡ್ಡಿಯನ್ನು ಪಾವತಿಸಲು ಸಿದ್ಧರಾಗಿರಬೇಕು.

ಇದನ್ನೂ ಓದಿ : LPG Subsidy: ನಿಮ್ಮ ಖಾತೆಯಲ್ಲಿ ಎಲ್‌ಪಿಜಿ ಸಬ್ಸಿಡಿ ಬರುತ್ತಿದೆಯೋ ಇಲ್ಲವೋ? ಕೆಲವೇ ನಿಮಿಷಗಳಲ್ಲಿ ಈ ರೀತಿ ಪರಿಶೀಲಿಸಿ

ಶಾಪಿಂಗ್ ಮಾಡುವ ಮುನ್ನ ಹಣದ ಮಿತಿ ತಿಳಿದಿರಲಿ :
ಕ್ರೆಡಿಟ್ ಕಾರ್ಡ್‌ಗಳು ಒಂದು ರೀತಿಯಲ್ಲಿ ಸಾಲವನ್ನು ಉತ್ತೇಜಿಸುತ್ತವೆ. ನೀವು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ಜೇಬಿನಲ್ಲಿ ಹಣವಿದೆಯೋ ಇಲ್ಲವೋ ಎಂಬ ಬಗ್ಗೆ ಚಿಂತೆ ಮಾಡುವುದೇ ಇಲ್ಲ. ಕ್ರೆಡಿಟ್ ಕಾರ್ಡ್ ಬಳಸಿ, ಶಾಪಿಂಗ್ ಮಾಡಿ (Shopping) ಬಿಡುತ್ತಾರೆ. ಹೀಗೆ ಅತಿಯಾಗಿ ಶಾಪಿಂಗ್ ಮಾಡಿ ಮುಂದೆ ಹಣ ಪಾವತಿಸಲು ಸಾಧ್ಯವಾಗದಿದ್ದರೆ ಅಧಿಕ ಬಡ್ಡಿ ಪಾವತಿಸಬೇಕಾಗುತ್ತದೆ. 

ಕ್ರೆಡಿಟ್ ಕಾರ್ಡ್ ನಲ್ಲಿ ವಿಧಿಸುವ ಶುಲ್ಕಗಳು :
 ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬುದ್ಧಿವಂತಿಕೆಯಿಂದ ಬಳಸದಿದ್ದರೆ, ಸಾಲದ ಬಲೆಗೆ ಬೀಳಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್‌ಗಳಲ್ಲಿ ಅನೇಕ ಬಡ್ಡಿದರಗಳು ಮತ್ತು ಶುಲ್ಕಗಳನ್ನು ವಿಧಿಸಲಾಗುತ್ತದೆ. ಈ ಶುಲ್ಕಗಳ ಬಗ್ಗೆ ನಿಮಗೆ ಮೊದಲೇ ತಿಳಿಸಲಾಗಿತರುವುದಿಲ್ಲ. ಕ್ರೆಡಿಟ್ ಕಾರ್ಡ್ ಅನ್ನು ಒಮ್ಮೆ ಬಳಸಿದ ನಂತರ, ಈ ಶುಲ್ಕಗಳ ಬಗ್ಗೆ ನೀವು ತಿಳಿದುಕೊಳ್ಳುತ್ತೀರಿ. 

ಇದನ್ನೂ ಓದಿ : Petrol price today : ಜೇಬು ಸುಡುತ್ತಿದೆ ಪೆಟ್ರೋಲ್ ಮತ್ತು ಡೀಸೆಲ್..! ಕರ್ನಾಟಕದಲ್ಲಿ ಇವತ್ತಿನ ಧಾರಣೆ ಏನು.?

ಕಾರ್ಡ್ ಪಡೆಯುವ ಮುನ್ನ ತಿಳಿದುಕೊಳ್ಳಿ ಟರ್ಮ್ ಆಂಡ್ ಕಂಡೀಷನ್:
ಸಾಮಾನ್ಯವಾಗಿ, ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವಾಗ, ಟರ್ಮ್ ಎಂಡ್ ಕಂಡೀಷನ್ (term and condition) ಬಗ್ಗೆ ಯೋಚಿಸುವುದೇ ಇಲ್ಲ. ಕ್ರೆಡಿಟ್ ಕಾರ್ಡ್ ಪಡೆಯುವ ವೇಳೆ, ಟರ್ಮ್ ಆಂಡ್ ಕಂಡೀಷನ್ ಬಗ್ಗೆ ಸರಿಯಾಗಿ ಓದಿಕೊಂಡರೆ, ಅದರಲ್ಲಿ ನಿಮಗೆ ತಿಳಿಸದ ಅನೇಕ ವಿಚಾರಗಳಿರುತ್ತವೆ. ಅಂದರೆ ಒಂದು ವಾರದ ನೋಟಿಸ್ ನೀಡುವ ಮೂಲಕ, ಬ್ಯಾಂಕ್ ಯಾವುದೇ ಸಮಯದಲ್ಲಿ ಬಡ್ಡಿದರವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. 

ಸಿಬಿಲ್ ಸ್ಕೋರ್ ಮೇಲೂ ಪರಿಣಾಮ:
ಕ್ರೆಡಿಟ್ ಕಾರ್ಡ್ ವೆಚ್ಚಗಳು ಮಿತಿಯಲ್ಲಿರದಿದ್ದರೆ, ಮರುಪಾವತಿಯೂ ಸಾಧ್ಯವಾಗದಿದ್ದರೆ, ನೀವು ಭಾರೀ ದಂಡವನ್ನು ತೆರಬೇಕಾಗುತ್ತದೆ. ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ.  ಕ್ರೆಡಿಟ್ ಕಾರ್ಡ್ ಪಾವತಿ ಸರಿಯಾದ ಸಮಯಕ್ಕೆ ಆಗದೇ ಹೋದರೆ, ಸಿಬಿಲ್ ಸ್ಕೋರ್ (cibil score) ಕೂಡಾ ಹಾಳಾಗುತ್ತದೆ.  ಸಿಬಿಲ್ ಸ್ಕೋರ್ ಹಾಳಾಗುವುದೆಂದರೆ ನಂತರ ಮುಕ್ಯವಾದ ಲೋನ್ ಗಳನ್ನು ಪಡೆಯುವುದು ಕೂಡಾ ಕಷ್ಟವಾಗುತ್ತದೆ. 

ಇದನ್ನೂ ಓದಿ : Contingency Fund: ಜೀವನದಲ್ಲಿ ಎದುರಾಗುವ ತುರ್ತು ಅಗತ್ಯತೆಗಳಿಗೆ ಇಂದಿನಿಂದಲೇ ಈ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News