Banking Alert: ಈ ಬ್ಯಾಂಕಿನಲ್ಲಿ ನೀವೂ ಖಾತೆ ಹೊಂದಿರುವಿರಾ? 9 ಗಂಟೆ ಸೇವೆಗಳು ಬಂದ್ ಇರಲಿವೆ

Banking Alert: ಸೇವೆಯ ಮೇಲೆ ಪರಿಣಾಮ ಬೀರುವ ಮೊದಲು ಗ್ರಾಹಕರು ತಮ್ಮ ಎಲ್ಲಾ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಬ್ಯಾಂಕ್‌ನಿಂದ ತಿಳಿಸಲಾಗಿದೆ.

Written by - Nitin Tabib | Last Updated : Oct 16, 2021, 08:20 PM IST
  • ನೀವೂ ಕೂಡ ಈ ಬ್ಯಾಂಕಿನಲ್ಲಿ ಖಾತೆ ಹೊಂದಿರುವಿರಾ?
  • ಖಾತೆ ಹೊಂದಿದ್ದರೆ ಬ್ಯಾಂಕಿಗೆ ಸಂಬಂಧಿಸಿದ ಸೇವೆಗಳನ್ನು ಬೇಗನೆ ಪೂರ್ಣಗೊಳಿಸಿ
  • 9 ಗಂಟೆಗಳ ಕಾಲ ಬ್ಯಾಂಕಿಂಗ್ ಸೇವೆ ಸ್ಥಗಿತಗೊಳ್ಳಲಿದೆ.
Banking Alert: ಈ ಬ್ಯಾಂಕಿನಲ್ಲಿ ನೀವೂ ಖಾತೆ ಹೊಂದಿರುವಿರಾ? 9 ಗಂಟೆ ಸೇವೆಗಳು ಬಂದ್ ಇರಲಿವೆ title=
Citibank Services To Be Down Check Details (Representational Image)

Citibank Services To Be Down Check Details: ನಿಮ್ಮ ಬ್ಯಾಂಕ್ ಖಾತೆ ಸಿಟಿ ಬ್ಯಾಂಕ್‌ನಲ್ಲಿದ್ದರೆ, ಈ ಸುದ್ದಿಯು ನಿಮಗಾಗಿ. ಏಕೆಂದರೆ,  ಬ್ಯಾಂಕಿನ ನೆಟ್ ಬ್ಯಾಂಕಿಂಗ್ (Online Banking), ಡಿಜಿಟಲ್ ಬ್ಯಾಂಕ್ ಸೇವೆಗಳನ್ನು (Banking Services) 9 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುವುದು. ಆದ್ದರಿಂದ, ಈ ಸಮಯದಲ್ಲಿ ಈ ಬ್ಯಾಂಕಿನ ಗ್ರಾಹಕರು ಯಾವುದೇ ರೀತಿಯ ಆನ್ಲೈನ್ ​​ಬ್ಯಾಂಕಿಂಗ್ ಸಂಬಂಧಿತ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಸೇವೆಯ ಮೇಲೆ ಪರಿಣಾಮ ಬೀರುವ ಮೊದಲು ಗ್ರಾಹಕರು ತಮ್ಮ ಎಲ್ಲಾ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಬ್ಯಾಂಕ್‌ ವತಿಯಿಂದ ತಿಳಿಸಲಾಗಿದೆ.

ಬ್ಯಾಂಕ್ ತನ್ನ ಗ್ರಾಹಕರಿಗೆ ನ್ಯೂಯಾರ್ಕ್ ನಲ್ಲಿರುವ ತನ್ನ ಮುಖ್ಯ ಕಚೇರಿಯಿಂದ ಇಮೇಲ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಬ್ಯಾಂಕ್ ಪ್ರಕಾರ, ನಿಗದಿತ ನಿರ್ವಹಣಾ ಕಾರ್ಯವು ಅಕ್ಟೋಬರ್ 16, 2021 ರಂದು 09:30 PM IST ಯಿಂದ ಅಕ್ಟೋಬರ್ 17, 2021 ರಂದು 6:30 AM ವರೆಗೆ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ಗ್ರಾಹಕರು ಬ್ಯಾಂಕಿಗೆ ಸಂಬಂಧಿಸಿದ ಅನೇಕ ಸೇವೆಗಳ (Bank Related Works) ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಯಾವುದೇ ವಹಿವಾಟು ನಡೆಸಲಾಗುವುದಿಲ್ಲ.

ಇದನ್ನೂ ಓದಿ-7th Pay Commission:ಸರ್ಕಾರಿ ನೌಕರರ ಮಾಸಿಕ ಮೂಲ ವೇತನದ ಕುರಿತು ಅಪ್ಡೇಟ್ ಪ್ರಕಟ, ಸರ್ಕಾರ ಹೇಳಿದ್ದೇನು?

ಯಾವಾಗ ಸೇವೆಗಳು ಪ್ರಭಾವಿತಗೊಳ್ಳಲಿವೆ
ಸಿಟಿ ಬ್ಯಾಂಕ್‌ನ (Citibank) ಆನ್‌ಲೈನ್ ಮತ್ತು ಮೊಬೈಲ್ ಸೇವೆಗಳು ಅಕ್ಟೋಬರ್ 17 ರಂದು ಮಧ್ಯರಾತ್ರಿ 1 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುವುದಿಲ್ಲ. ಇಂಟರ್‌ನೆಟ್ ಬ್ಯಾಂಕಿಂಗ್ ಹೊರತುಪಡಿಸಿ, RTGS ವಹಿವಾಟು (RTGS Services) ಸೌಲಭ್ಯವು ಅಕ್ಟೋಬರ್ 17 ರಂದು ಮುಂಜಾನೆ 2:30 ರಿಂದ 6:30 ರವರೆಗೆ ಸ್ಥಗಿತಗೊಳ್ಳಲಿದೆ. ಇದೇ ವೇಳೆ ಕ್ರೆಡಿಟ್ ಕಾರ್ಡ್‌ಗಳು ಮತ್ತು ಸ್ಯಾಮ್‌ಸಂಗ್ ಪೇ ವಾಲೆಟ್ ಅನ್ನು 16 ಅಕ್ಟೋಬರ್ 16 ರಂದು ರಾತ್ರಿ 9:30 ರಿಂದ 17 ಅಕ್ಟೋಬರ್ 1:30 ರವರೆಗೆ ಸ್ಥಗಿತಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೆಲಸವನ್ನು ಬೇರೆ ಯಾವುದೇ ವಿಧಾನದಿಂದ ಮಾಡಲು ನೀವು ಯೋಚಿಸುತ್ತಿದ್ದರೆ, ಅದನ್ನು ನಿಗದಿತ ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳಿಸಿ.

ಇದನ್ನೂ ಓದಿ-ಹಿರಿಯ ನಾಗರಿಕರೆ ಗಮನಿಸಿ : SBI ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಬಂಪರ್ ಬಡ್ಡಿ ಮತ್ತು ಪ್ರಯೋಜನ ಪಡೆಯಿರಿ!

ಎಲ್ಲಕ್ಕಿಂತ ಮೊದಲು ಭಾರತದ ಈ ನಗರದಲ್ಲಿ ಸಿಟಿ ಬ್ಯಾಂಕ್ ಆರಂಭಗೊಂಡಿತ್ತು
ಸಿಟಿ ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, ಈ ಬ್ಯಾಂಕ್ ತನ್ನ ಮೊದಲ ಕಚೇರಿಯನ್ನು 1902 ರಲ್ಲಿ ಭಾರತದ ಕೋಲ್ಕತ್ತಾದಲ್ಲಿ ಆರಂಭಗೊಂಡಿತ್ತು. 1993 ರಲ್ಲಿ 24 ಗಂಟೆಗಳ ಫೋನ್ ಬ್ಯಾಂಕಿಂಗ್ ಸೌಲಭ್ಯವನ್ನು ನೀಡಿದ ಮೊದಲ ಬ್ಯಾಂಕ್ ಇದಾಗಿದೆ. ಸಿಟಿ ಬ್ಯಾಂಕ್ 2009 ರಲ್ಲಿ ಸಿಟಿ ಟ್ಯಾಪ್ ಮತ್ತು ಪೇ ಮೂಲಕ ನಿಯರ್ ಫೀಲ್ಡ್ ಕಮ್ಯುನಿಕೇಷನ್ಸ್ (NFC) ತಂತ್ರಜ್ಞಾನವನ್ನು ಆಧರಿಸಿ ಮುಂದಿನ ಪೀಳಿಗೆಯ ಸಂಪರ್ಕವಿಲ್ಲದ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಪ್ರಾರಂಭಿಸಿತು, ಅದರ ವೆಬ್‌ಸೈಟ್ ಪ್ರಕಾರ ಭಾರತದಲ್ಲಿ ಇದು ಮೊದಲ ಉಪಕ್ರಮವಾಗಿದೆ.

ಇದನ್ನೂ ಓದಿ-PPF, ಬ್ಯಾಂಕ್, PF, SIP, ಮ್ಯೂಚುಯಲ್ ಫಂಡ್‌ಗಳಲ್ಲಿ ಕಡಿಮೆ ಅವಧಿಯಲ್ಲಿ 3 ಪಟ್ಟು ಲಾಭ ಪಡೆಯಬಹುದು! ಹೇಗೆ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News