Bank Holidays November 2021: ನವೆಂಬರ್‌ನಲ್ಲಿ 17 ದಿನ ಬ್ಯಾಂಕ್ ರಜೆ, ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನವೆಂಬರ್ ತಿಂಗಳ ಅಧಿಕೃತ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ನವೆಂಬರ್ ತಿಂಗಳಲ್ಲಿ ಬ್ಯಾಂಕ್ ಗೆ 17 ರಜೆಗಳಿವೆ.  

Written by - Ranjitha R K | Last Updated : Nov 1, 2021, 09:53 AM IST
  • ಈ ತಿಂಗಳಲ್ಲಿ 17 ದಿನಗಳ ಕಾಲ ಬ್ಯಾಂಕ್‌ ರಜೆ
  • ಯಾವುದೇ ತುರ್ತು ಕೆಲಸ ಇದ್ದರೆ, ತಕ್ಷಣ ಪೂರೈಸಿಕೊಳ್ಳಿ
  • ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿದೆ
Bank Holidays November 2021: ನವೆಂಬರ್‌ನಲ್ಲಿ 17 ದಿನ ಬ್ಯಾಂಕ್ ರಜೆ,  ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ   title=
ಈ ತಿಂಗಳಲ್ಲಿ 17 ದಿನಗಳ ಕಾಲ ಬ್ಯಾಂಕ್‌ ರಜೆ (file photo)

ನವದೆಹಲಿ : Bank Holidays in November 2021 : ಈ ತಿಂಗಳಿನಲ್ಲಿ ಬ್ಯಾಂಕ್ ಸಂಬಂಧಿತ ಕೆಲಸಗಳಿದ್ದರೆ, ಈ ಸುದ್ದಿಯನ್ನು ಓದಿ. ಈ ತಿಂಗಳಲ್ಲಿ, ಒಟ್ಟು 17 ದಿನಗಳವರಗೆ ಬ್ಯಾಂಕ್ (Bank holiday) ಮುಚ್ಚಿರಲಿವೆ. ಈ ಹಿನ್ನೆಲೆಯಲ್ಲಿ ಯಾವುದೇ ತುರ್ತು ಕೆಲಸ ಇದ್ದರೆ, ತಕ್ಷಣ ಪೂರೈಸಿಕೊಳ್ಳಿ.  ಇಲ್ಲವಾದರೆ ಕಷ್ಟ ಎದುರಾಗಬಹುದು. 

17 ದಿನಗಳ ಕಾಲ ಬ್ಯಾಂಕ್‌ ರಜೆ :  
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನವೆಂಬರ್ ತಿಂಗಳ ಅಧಿಕೃತ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ನವೆಂಬರ್ ತಿಂಗಳಲ್ಲಿ ಬ್ಯಾಂಕ್ ಗೆ 17 ರಜೆಗಳಿವೆ. ಈ ಸಮಯದಲ್ಲಿ, ಭಾರತದ ಅನೇಕ ನಗರಗಳಲ್ಲಿ ಬ್ಯಾಂಕುಗಳು (bank) ನಿರಂತರವಾಗಿ ಮುಚ್ಚಲ್ಪಟ್ಟಿರುತ್ತವೆ. ಈ 17 ದಿನಗಳ ರಜೆಯಲ್ಲಿ ಸಾಪ್ತಾಹಿಕ ರಜಾದಿನಗಳನ್ನು ಸಹ ಸೇರಿಸಲಾಗಿದೆ. 

ಇದನ್ನೂ ಓದಿ  :   ದೀಪಾವಳಿಗೂ ಮುನ್ನ ಬೆಲೆ ಏರಿಕೆ ಬಿಸಿ, LPG ಬೆಲೆಯಲ್ಲಿ 265 ರೂ. ಗಳ ಹೆಚ್ಚಳ

ಆರ್‌ಬಿಐ (Reserve Bank of India) ಮಾರ್ಗಸೂಚಿಗಳ ಪ್ರಕಾರ, ಭಾನುವಾರ ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ, ಆರ್‌ಬಿಐ ನವೆಂಬರ್ 1, 3, 4, 5, 6, 10, 11, 12, 19, 22 ಮತ್ತು 23 ರಂದು ರಜಾದಿನಗಳನ್ನು ಘೋಷಿಸಿದೆ. ಇದಲ್ಲದೆ, ತಿಂಗಳಲ್ಲಿ ನಾಲ್ಕು ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸಹ ರಜಾದಿನಗಳಾಗಿವೆ.

ನವೆಂಬರ್ 2021 ರಲ್ಲಿ ಬ್ಯಾಂಕ್ ರಜಾದಿನಗಳು :
ನವೆಂಬರ್ 1 - ಕನ್ನಡ ರಾಜ್ಯೋತ್ಸವ/  Kut - (ಕರ್ನಾಟಕ  ಮತ್ತು ಇಂಫಾಲ್‌ )
ನವೆಂಬರ್ 3  - ನರಕ ಚತುರ್ದಶಿ - ಕರ್ನಾಟಕ 
ನವೆಂಬರ್ 4 - ದೀಪಾವಳಿ ಅಮವಾಸ್ಯೆ (ಲಕ್ಷ್ಮೀ ಪೂಜೆ) / ದೀಪಾವಳಿ / ಕಾಳಿ ಪೂಜೆ - ಕರ್ನಾಟಕ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕ್ ರಜೆ 
ನವೆಂಬರ್ 5 - ದೀಪಾವಳಿ /  ಗೋವರ್ಧನ ಪೂಜೆ - (ಅಹಮದಾಬಾದ್, ಬೇಲಾಪುರ್, ಕರ್ನಾಟಕ , ಡೆಹ್ರಾಡೂನ್, ಗ್ಯಾಂಗ್ಟಾಕ್, ಜೈಪುರ, ಕಾನ್ಪುರ್, ಲಕ್ನೋ, ಮುಂಬೈ ಮತ್ತು ನಾಗ್ಪುರ )
ನವೆಂಬರ್ 6 - ಭಾಯಿ ದೂಜ್ / ಚಿತ್ರಗುಪ್ತ ಜಯಂತಿ / ಲಕ್ಷ್ಮಿ ಪೂಜೆ / ದೀಪಾವಳಿ / ನಿಂಗೋಲ್ ಚಕೋಬಾ - (ಗ್ಯಾಂಗ್ಟಾಕ್, ಇಂಫಾಲ್, ಕಾನ್ಪುರ, ಲಕ್ನೋ ಮತ್ತು ಶಿಮ್ಲಾ )
7 ನವೆಂಬರ್ - ಭಾನುವಾರ (ವಾರದ ರಜೆ)
10 ನವೆಂಬರ್ - ಛತ್ ಪೂಜೆ / ಸೂರ್ಯ ಷಷ್ಠಿ ದಲಾ ಛಾತ್ - (ಪಾಟ್ನಾ ಮತ್ತು ರಾಂಚಿ) 
11 ನವೆಂಬರ್ - ಛತ್ ಪೂಜೆ - (ಪಾಟ್ನಾ)
12 ನವೆಂಬರ್ - ವಂಗ್ಲಾ ಉತ್ಸವ - (ಶಿಲ್ಲಾಂಗ್‌ ) 
13 ನವೆಂಬರ್ - ಶನಿವಾರ (ತಿಂಗಳ ಎರಡನೇ ಶನಿವಾರ)
14 ನವೆಂಬರ್ - ಭಾನುವಾರ (ವಾರದ ರಜೆ)
19 ನವೆಂಬರ್ - ಗುರುನಾನಕ್ ಜಯಂತಿ / ಕಾರ್ತಿಕ್ ಪೂರ್ಣಿಮಾ - (ಐಜ್ವಾಲ್ , ಬೇಲಾಪುರ್, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ್, ರಾಂಚಿ, ಶಿಮ್ಲಾ, ಶ್ರೀನಗರ ) 
21 ನವೆಂಬರ್ - ಭಾನುವಾರ (ವಾರದ ರಜೆ)
22 ನವೆಂಬರ್ - ಕನಕದಾಸ ಜಯಂತಿ - (ಕರ್ನಾಟಕ )
23 ನವೆಂಬರ್  -  ಸೆಂಗ್ ಕುಟ್ಸ್ ನಮ್ -( ಶಿಲ್ಲಾಂಗ್‌ ) 
 27 ನವೆಂಬರ್ - ಶನಿವಾರ (ತಿಂಗಳ ನಾಲ್ಕನೇ ಶನಿವಾರ)
28 ನವೆಂಬರ್ - ಭಾನುವಾರ (ವಾರದ ರಜೆ)

ಇದನ್ನೂ ಓದಿ  : Changes From November 1st: LPG ಬೆಲೆಗಳಿಂದ ರೈಲ್ವೆ ವೇಳಾಪಟ್ಟಿಯವರೆಗೆ ಇಂದಿನಿಂದ ಬದಲಾಗಲಿವೆ ಈ ನಿಯಮಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News