Bank Holidays in August 2021: ಮುಂದಿನ ತಿಂಗಳು 15 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ

Bank Holidays in August 2021: ಮುಂದಿನ ತಿಂಗಳು ಆಗಸ್ಟ್‌ನಲ್ಲಿ, ಬ್ಯಾಂಕುಗಳು 15 ದಿನಗಳವರೆಗೆ, ಅಂದರೆ ಸುಮಾರು ಅರ್ಧ ತಿಂಗಳವರೆಗೆ ಬಂದ್ ಇರಲಿವೆ. ಇಂತಹ ಪರಿಸ್ಥಿತಿಯಲ್ಲಿ, ಸಮಯ ಇರುವಾಗಲೇ ಬ್ಯಾಂಕುಗಳಿಗೆ ಸಂಬಂಧಿಸಿದ ನಿಮ್ಮ ಕೆಲಸವನ್ನು ಇತ್ಯರ್ಥಪಡಿಸಿಕೊಳ್ಳಿ.

Written by - Nitin Tabib | Last Updated : Jul 26, 2021, 01:57 PM IST
  • ಆಗಸ್ಟ್ ತಿಂಗಳು ಆರಂಭಗೊಳ್ಳಲು ಒಂದು ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ.
  • ಮುಂದಿನ ತಿಂಗಳು ಆಗಸ್ಟ್‌ನಲ್ಲಿ, ಬ್ಯಾಂಕುಗಳು 15 ದಿನಗಳವರೆಗೆ ಬಂದ್ ಇರಲಿವೆ.
  • ಇಂತಹ ಪರಿಸ್ಥಿತಿಯಲ್ಲಿ, ಸಮಯ ಇರುವಾಗಲೇ ನಿಮ್ಮ ಬ್ಯಾಂಕ್ ಕೆಲಸವನ್ನು ಇತ್ಯರ್ಥಪಡಿಸಿಕೊಳ್ಳಿ.
Bank Holidays in August 2021: ಮುಂದಿನ ತಿಂಗಳು 15 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ title=
Bank Holidays in August 2021 (File Photo)

Bank Holidays in August 2021: ಆಗಸ್ಟ್ ತಿಂಗಳು (August 2021) ಆರಂಭಗೊಳ್ಳಲು ಒಂದು ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ. ಮುಂದಿನ ತಿಂಗಳು ಆಗಸ್ಟ್‌ನಲ್ಲಿ, ಬ್ಯಾಂಕುಗಳು 15 ದಿನಗಳವರೆಗೆ, ಅಂದರೆ ಸುಮಾರು ಅರ್ಧ ತಿಂಗಳವರೆಗೆ ಬಂದ್ ಇರಲಿವೆ. ಇಂತಹ  ಪರಿಸ್ಥಿತಿಯಲ್ಲಿ, ಸಮಯ ಸಿಕ್ಕ ಕೂಡಲೇ ಬ್ಯಾಂಕುಗಳಿಗೆ ಸಂಬಂಧಿಸಿದ ನಿಮ್ಮ ಕೆಲಸವನ್ನು ಇತ್ಯರ್ಥಪಡಿಸಿಕೊಳ್ಳಿ. ಆದರೆ,ಸೆಂಟ್ರಲ್ ಬ್ಯಾಂಕ್ ಆರ್‌ಬಿಐ (Reserve Bank Of India) ನಿಗದಿಪಡಿಸಿದ ಕೆಲ ರಜಾದಿನಗಳು ಪ್ರಾದೇಶಿಕವಾದ್ದರಿಂದ (Regional Holidays) ದೇಶದಾದ್ಯಂತದ ಎಲ್ಲಾ ಬ್ಯಾಂಕುಗಳು 15 ದಿನಗಳವರೆಗೆ ಬಂದ್ ಇರುವದಿಲ್ಲ. 

ಇದರರ್ಥ ಕೆಲವು ದಿನಗಳವರೆಗೆ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳು ಮಾತ್ರ ಮುಚ್ಚಲ್ಪಡುತ್ತವೆ ಮತ್ತು ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ಎಂದಿನಂತ ಕಾರ್ಯನಿರ್ವಹಿಸಲಿವೆ. ಕೆಲವು ಸ್ಥಳಗಳಲ್ಲಿ ಸತತ ಮೂರು ದಿನಗಳವರೆಗೆ ಬ್ಯಾಂಕುಗಳು ಬಂದ್ ಇರಲಿವೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಭಾನುವಾರಗಳನ್ನು ಹೊರತುಪಡಿಸಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳನ್ನು ಬಂದ್ ಇರುತ್ತವೆ. 

ಕೆಳಗೆ, ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದ್ದು, ಇದರೊಂದಿಗೆ ಬ್ಯಾಂಕುಗಳು (Bank) ಯಾವ ರಾಜ್ಯದಲ್ಲಿ ಮುಚ್ಚಲ್ಪಡುತ್ತವೆ ಮತ್ತು ನಿರ್ದಿಷ್ಟ ದಿನದಂದು ಅವು ಎಲ್ಲಿ ತೆರೆದಿರುತ್ತವೆ ಎಂಬುದರ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಅವುಗಳ ಆಧಾರದ ಮೇಲೆ, ನಿಮ್ಮ ಬ್ಯಾಂಕ್‌ಗೆ ಸಂಬಂಧಿಸಿದ ವ್ಯವಹಾರವನ್ನು ಇತ್ಯರ್ಥಗೊಳಿಸಿ ಇದರಿಂದ ಯಾವುದೇ ಸಮಸ್ಯೆ ಇರುವುದುಲ್ಲ ಮತ್ತು ನಿಮ್ಮ ಯಾವುದೇ ಕೆಲಸದಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ.

ಆಗಸ್ಟ್ 2021 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ (List Of Bank Holidays 2021)
>> ಆಗಸ್ಟ್ 1 - ಭಾನುವಾರ
>> ಆಗಸ್ಟ್ 8 - ಭಾನುವಾರ
>> ಆಗಸ್ಟ್ 13 - ಪೇಟ್ರಿಯಾಟ್ ಟೇ - ಇಂಫಾಲ್‌ನಲ್ಲಿ ಬ್ಯಾಂಕ್ ಬಂದ್ ಇರಲಿದೆ.
>> ಆಗಸ್ಟ್ 14 - ತಿಂಗಳ ಎರಡನೇ ಶನಿವಾರ

ಇದನ್ನೂ ಓದಿ-UIDAI Aadhaar Alert: ನಿಮ್ಮ ಆಧಾರ್ ಸಂಖ್ಯೆಯಿಂದ ಬ್ಯಾಂಕ್ ಖಾತೆ ಹ್ಯಾಕ್ ಆಗುವ ಅಪಾಯವಿದೆಯೇ? ಯುಐಡಿಎಐ ಹೇಳಿದ್ದೇನು?

>> ಆಗಸ್ಟ್ 15 - ಭಾನುವಾರ
>> ಆಗಸ್ಟ್ 16 - ಪಾರ್ಸಿ ಹೊಸ ವರ್ಷ (ಶಹನ್‌ಶಾಹಿ) - ಬೆಲಾಪುರ, ಮುಂಬೈ ಮತ್ತು >> ನಾಗ್ಪುರದಲ್ಲಿ ಬ್ಯಾಂಕುಗಳು ಬಂದ್ ಇರಲಿವೆ.
>> ಆಗಸ್ಟ್ 19 - ಮೊಹರಂ (ಅಶುರಾ) - ಅಗರ್ತಲಾ, ಅಹಮದಾಬಾದ್, ಬೆಲಾಪುರ, ಭೋಪಾಲ್, >> ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತಾ, ಲಕ್ನೋ, ಮುಂಬೈ, ನಾಗ್ಪುರ, >> ನವದೆಹಲಿ, ಪಾಟ್ನಾ, ರಾಯ್ಪುರ, ರಾಂಚಿ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ಬಂದ್ ಇರಲಿವೆ.
>> ಆಗಸ್ಟ್ 20 - ಮೊಹರಂ / ಮೊದಲ ಓಣಂ - ಬೆಂಗಳೂರು, ಚೆನ್ನೈ, ಕೊಚ್ಚಿ ಮತ್ತು >> ತಿರುವನಂತಪುರಂನಲ್ಲಿ ಬ್ಯಾಂಕುಗಳು ಬಂದ್ ಇರಲಿವೆ.
>> ಆಗಸ್ಟ್ 21- ತಿರುವನಂ - ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳು ಬಂದ್ ಇರಲಿವೆ.
>> 22 ಆಗಸ್ಟ್ - ಭಾನುವಾರ

ಇದನ್ನೂ ಓದಿ-SBI ಆನ್‌ಲೈನ್ ಬ್ಯಾಂಕಿಂಗ್ ಈಗ ಇನ್ನೂ ಸುರಕ್ಷಿತ, YONO App ಹೊಸ ಭದ್ರತಾ ವೈಶಿಷ್ಟ್ಯ

>> ಆಗಸ್ಟ್ 23 - ಶ್ರೀ ನಾರಾಯಣ ಗುರು ಜಯಂತಿ - ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳು ಬಂದ್ ಇರಲಿವೆ.
>> ಆಗಸ್ಟ್ 28 - ತಿಂಗಳ ನಾಲ್ಕನೇ ಶನಿವಾರ
>> ಆಗಸ್ಟ್ 29 - ಭಾನುವಾರ
>> ಆಗಸ್ಟ್ 30 - ಜನ್ಮಾಷ್ಟಮಿ / ಕೃಷ್ಣ ಜಯಂತಿ - ಅಹಮದಾಬಾದ್, ಚಂಡಿಗಡ್, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಾಕ್, ಜೈಪುರ, ಜಮ್ಮು, ಕಾನ್ಪುರ್, ಲಕ್ನೋ, ಪಾಟ್ನಾ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ಬಂದ್ ಇರಲಿವೆ.
>> ಆಗಸ್ಟ್ 31 - ಶ್ರೀ ಕೃಷ್ಣ ಅಷ್ಟಮಿ - ಹೈದರಾಬಾದ್‌ನಲ್ಲಿ ಬ್ಯಾಂಕ್ ಬಂದ್ ಇರಲಿವೆ.

ಇದನ್ನೂ ಓದಿ-Passport in Post Office: ಈಗ ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲೂ ಪಾಸ್‌ಪೋರ್ಟ್ ಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News