Atal Pension Scheme: ಚಿಕ್ಕ ವಯಸ್ಸಿನಿಂದಲೇ ಸಣ್ಣ ಮೊತ್ತವನ್ನು ಉಳಿಸಿದರೆ ನಿಮ್ಮ ವೃದ್ಧಾಪ್ಯವನ್ನು ಸಂತೋಷದಿಂದ ಕಳೆಯಬಹುದು. ಅಟಲ್ ಪಿಂಚಣಿ ಯೋಜನೆಯಲ್ಲಿ ಪ್ರತಿದಿನ 7 ರೂಪಾಯಿ ಹೂಡಿಕೆ ಮಾಡಿದರೆ, ವೃದ್ಧಾಪ್ಯದಲ್ಲಿ 5 ಸಾವಿರದವರೆಗೆ ಪಿಂಚಣಿ ಪಡೆಯಬಹುದು.
ಇದನ್ನೂ ಓದಿ : ಶೀಘ್ರವೇ ಹೊಸ Mercedes-Benz GLS ಫೇಸ್‌ಲಿಫ್ಟ್ ಬಿಡುಗಡೆ; ಈ ದಿನ ಮಾರುಕಟ್ಟೆಗೆ ಎಂಟ್ರಿ!
2015 ರಲ್ಲಿ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿತು. ಇದುವರೆಗೆ 6 ಕೋಟಿಗೂ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ದೇಶದ ಪ್ರತಿಯೊಂದು ವರ್ಗಕ್ಕೂ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಮೋದಿ ಸರ್ಕಾರ ಈ ಯೋಜನೆಯನ್ನು ತಂದಿತು. ಇನ್ನು ಮುಂದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ಪ್ರತಿ ತಿಂಗಳು ರೂ.1000 ರಿಂದ ರೂ.5000 ವರೆಗೆ ಪಿಂಚಣಿ ಪಡೆಯಬಹುದು. ಪಿಂಚಣಿ ಮೊತ್ತವು ನಿಮ್ಮ ಹೂಡಿಕೆಯನ್ನು ಅವಲಂಬಿಸಿರುತ್ತದೆ.
ಯಾರು ಹೂಡಿಕೆ ಮಾಡಬಹುದು..?
ಈ ಯೋಜನೆಯಲ್ಲಿ ಯಾವುದೇ ಭಾರತೀಯರು ಹೂಡಿಕೆ ಮಾಡಬಹುದು.
18 ರಿಂದ 40 ವರ್ಷದೊಳಗಿನವರು ಹೂಡಿಕೆ ಮಾಡಬಹುದು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
ಆದಾಯ ತೆರಿಗೆ ಪಾವತಿದಾರರು ಅಟಲ್ ಪಿಂಚಣಿ ಯೋಜನೆ ಪ್ರಯೋಜನಗಳಿಗೆ ಅರ್ಹರಲ್ಲ.
ಗಂಡ ಮತ್ತು ಹೆಂಡತಿ ಇಬ್ಬರೂ ಈ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಗಂಡ ತೀರಿ ಹೋದ ಬಳಿಕ ಹೆಂಡತಿಗೆ ಈ ಪಿಂಚಣಿ ಸಿಗುತ್ತದೆ.
ನೀವು 60 ವರ್ಷ ತಲುಪುವವರೆಗೆ ಹೂಡಿಕೆ ಮಾಡಬೇಕು.
ಚಂದಾದಾರರು ಮರಣ ಹೊಂದಿದರೆ, ಸಂಪೂರ್ಣ ಪಿಂಚಣಿಯನ್ನು ನಾಮಿನಿಗೆ ನೀಡಲಾಗುತ್ತದೆ.
ಹೂಡಿಕೆ ಮಾಡುವುದು ಹೇಗೆ..?
ನೀವು ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಹೊಂದಿದ್ದರೆ ನೀವು ಈ ಯೋಜನೆಯಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಬ್ಯಾಂಕ್‌ಗೆ ಹೋಗಿ ಅಟಲ್ ಪಿಂಚಣಿ ಯೋಜನೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಫಾರ್ಮ್‌ನೊಂದಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ. KYC ನವೀಕರಣದ ನಂತರ ಪಿಂಚಣಿ ಖಾತೆಯನ್ನು ತೆರೆಯಲಾಗುತ್ತದೆ.
ಇದನ್ನೂ ಓದಿ : ರೈಲ್ವೆ ಹೊಸ ನಿಯಮ: ಈಗ ಆರ್‌ಎಸಿ ಟಿಕೆಟ್ ಹೊಂದಿರುವವರಿಗೂ ಸಿಗುತ್ತೆ ಈ ಸರ್ವಿಸ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.