LPG Subsidy: ನಿಮಗೆ ಎಲ್‌ಪಿಜಿ ಮೇಲೆ ಸಬ್ಸಿಡಿ ಸಿಗುತ್ತಿದೆಯೇ ? ಹೀಗೆ ಚೆಕ್ ಮಾಡಿ

ಒಂದು ವೇಳೆ, ಯಾರಿಗಾದರೂ ಸಬ್ಸಿಡಿ ಸಿಗದಿದ್ದರೆ, ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಎಲ್‌ಪಿಜಿ ಸಿಲಿಂಡರ್‌ನ ಸಬ್ಸಿಡಿ ನಿಮ್ಮ ಖಾತೆಗೆ ಬರುತ್ತಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಸುಲಭ ಮಾರ್ಗವಿದೆ. 

Written by - Ranjitha R K | Last Updated : Aug 13, 2021, 02:33 PM IST
  • ಎಲ್‌ಪಿಜಿ ಸಿಲಿಂಡರ್‌ ಖರೀದಿ ಮೇಲೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ
  • ಸಬ್ಸಿಡಿ ಬರುತ್ತಿದೆಯೋ , ಇಲ್ಲವೋ ಸುಲಭವಾಗಿ ಚೆಕ್ ಮಾಡಿಕೊಳ್ಳಿ
  • 10 ಲಕ್ಷಕ್ಕಿಂತ ಹೆಚ್ಚು ಆದಾಯ ಇದ್ದರೆ ಸಬ್ಸಿಡಿ ಸಿಗುವುದಿಲ್ಲ
LPG Subsidy: ನಿಮಗೆ  ಎಲ್‌ಪಿಜಿ ಮೇಲೆ ಸಬ್ಸಿಡಿ ಸಿಗುತ್ತಿದೆಯೇ ? ಹೀಗೆ ಚೆಕ್ ಮಾಡಿ  title=
ಎಲ್‌ಪಿಜಿ ಸಿಲಿಂಡರ್‌ ಖರೀದಿ ಮೇಲೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ (file photo)

ನವದೆಹಲಿ : LPG Subsidy : ನಾವು ಪ್ರತಿ ಬಾರಿ ಪಡೆಯುವ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸರ್ಕಾರದಿಂದ ಸಬ್ಸಿಡಿ ಪಡೆಯುತ್ತೇವೆ. ಆದರೆ ನೀವು ನಿಜವಾಗಿಯೂ ಆ ಸಬ್ಸಿಡಿ ನಿಮ್ಮ ಖಾತೆಗೆ ಬೀಳುತ್ತದೆಯೋ ಇಲ್ಲವೋ ಎನ್ನುವುದನ್ನು ಎಂದಾದರು ಪರಿಶೀಲಿಸಿದ್ದಿರಾ? ಜುಲೈನಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ ದುಬಾರಿಯಾಗಿದೆ. ಹೀಗಿರುವಾಗ ಸರ್ಕಾರದಿಂದ ಸಿಗುವ ಸಬ್ಸಿಡಿಯಿಂದಾಗಿ, ಸ್ವಲ್ಪ ಮಟ್ಟಿಗಾದರೂ ಸಮಾಧಾನ ಪಡಬಹುದು. 

ಒಂದು ವೇಳೆ, ಯಾರಿಗಾದರೂ ಸಬ್ಸಿಡಿ (LPG Subsidy) ಸಿಗದಿದ್ದರೆ, ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಎಲ್‌ಪಿಜಿ ಸಿಲಿಂಡರ್‌ನ ಸಬ್ಸಿಡಿ ನಿಮ್ಮ ಖಾತೆಗೆ ಬರುತ್ತಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಸುಲಭ ಮಾರ್ಗವಿದೆ. ಆನ್‌ಲೈನ್‌ನಲ್ಲಿಯೇ (Online) ಇದನ್ನು ಕಂಡು ಹಿಡಿಯಬಹುದು. 

ಇದನ್ನೂ ಓದಿ : Retirement Age: ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸಲಿದೆಯೇ, ಪ್ರಧಾನಿಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?

ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಸಿಗುತ್ತಿದೆಯೋ ಇಲ್ಲವೋ ಎನ್ನುವುದನ್ನು ಹೀಗೆ ಚೆಕ್ ಮಾಡಿ :
1. ಮೊದಲಿಗೆ www.mylpg.in ವೆಬ್‌ಸೈಟ್‌ಗೆ ಭೇಟಿ ನೀಡಿ
2. ಬಲಭಾಗದಲ್ಲಿ ಮೂರು ಕಂಪನಿಗಳ ಗ್ಯಾಸ್ ಸಿಲಿಂಡರ್‌ಗಳ ಫೋಟೋ ಕಾಣಿಸುತ್ತದೆ. 
3- ನಿಮ್ಮ ಸೇವಾ ಪೂರೈಕೆದಾರರು ಯಾರು ಅದರ ಮೇಲೆ ಕ್ಲಿಕ್ ಮಾಡಿ
4. ಇದರ ನಂತರ ಹೊಸ ವಿಂಡೋ ತೆರೆಯುತ್ತದೆ ಇದರಲ್ಲಿ ನಿಮ್ಮ ಗ್ಯಾಸ್ ಸರ್ವೀಸ್ ಪ್ರೊವೈಡರ್ ಮಾಹಿತಿ ಇರುತ್ತದೆ
5- ಮೇಲೆ ಬಲಭಾಗದಲ್ಲಿ ಸೈನ್ ಇನ್ ಮತ್ತು New User ಆಯ್ಕೆ ಇರುತ್ತದೆ, ಅದನ್ನು ಆಯ್ಕೆ ಮಾಡಿ
6. ನಿಮ್ಮ ID ಈಗಾಗಲೇ ರಚಿಸಿದ್ದರೆ ನೀವು ಸೈನ್ ಇನ್ ಮಾಡಬೇಕಾಗುತ್ತದೆ
7-ಐಡಿ ಇಲ್ಲದಿದ್ದರೆ  New User ಆಯ್ಕೆ ಮಾಡಬೇಕು
8. ಇದರ ನಂತರ, ತೆರೆಯುವ ವಿಂಡೋದಲ್ಲಿ, ಬಲಭಾಗದಲ್ಲಿ ಸಿಲಿಂಡರ್ ಬುಕಿಂಗ್ ಹಿಸ್ಟರಿ ಆಯ್ಕೆಮಾಡಿ
9. ನೀವು ಸಬ್ಸಿಡಿ ಪಡೆಯುತ್ತೀರೋ ಇಲ್ಲವೋ ಎಂದು ನಿಮಗೆ ತಿಳಿಯುತ್ತದೆ
10. ಸಬ್ಸಿಡಿ ಇಲ್ಲದಿದ್ದಲ್ಲಿ, ನೀವು 18002333555 ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಬಹುದು

ಇದನ್ನೂ ಓದಿ : Retirement Age: ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸಲಿದೆಯೇ, ಪ್ರಧಾನಿಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?
 
ಸಬ್ಸಿಡಿ ನಿಲ್ಲುವುದಕ್ಕೆ ಏನು ಕಾರಣ ? : 
ಸರ್ಕಾರವು ಅನೇಕ ಜನರಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ನೀಡುವುದಿಲ್ಲ. ಇದಕ್ಕೆ ಕಾರಣ ನಿಮ್ಮ ಆಧಾರ್ ಲಿಂಕ್ (Aadhaar link) ಮಾಡದಿರಬಹುದು. ಎರಡನೆಯದ್ದು, 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರಿಗೆ  ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಸಿಗುವುದಿಲ್ಲ. 

ಎಷ್ಟು ಸಬ್ಸಿಡಿ ಸಿಗುತ್ತದೆ ? :
ಪ್ರಸ್ತುತ ಅಡುಗೆ ಅನಿಲದ ಮೇಲಿನ ಸಬ್ಸಿಡಿ ತುಂಬಾ ಕಡಿಮೆಯಾಗಿದೆ. ಕರೋನಾ (Coronavirus) ಅವಧಿಯಲ್ಲಿ, ಗ್ರಾಹಕರ ಖಾತೆಯಲ್ಲಿ ಕೇವಲ 10-12 ರೂ ಮಾತ್ರ ಸಬ್ಸಿಡಿ ಸಿಗುತ್ತಿದೆ. ,ಮೊದಲು ಸಿಲಿಂಡರ್‌ಗಳ ಮೇಲೆ 200 ರೂಗಳವರೆಗೆ ಸಬ್ಸಿಡಿ ಸಿಗುತ್ತಿತ್ತು. ಈಗ ಗ್ರಾಹಕರು ಸಿಲಿಂಡರ್‌ಗಳ ಮೇಲೆ ಅತ್ಯಲ್ಪ ಸಬ್ಸಿಡಿ ಪಡೆಯುತ್ತಿದ್ದಾರೆ. ಮತ್ತೊಂದೆಡೆ, ಸಿಲಿಂಡರ್‌ಗಳ ಬೆಲೆಯೂ ಗಣನೀಯವಾಗಿ ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News