I.N.D.I.A ಮೈತ್ರಿಕೂಟಕ್ಕೆ ನಾಲ್ಕು ರಾಜ್ಯಗಳ ಫಲಿತಾಂಶಗಳು ಎಷ್ಟು ಮುಖ್ಯ?

Assembly Election Results 2023: ವಿಪಕ್ಷಗಳ ಮೈತ್ರಿಕೂಟ 'I.N.D.I.A' ಭಾನುವಾರ ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣಾ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. 

Written by - Chetana Devarmani | Last Updated : Dec 3, 2023, 08:41 AM IST
  • ವಿಪಕ್ಷಗಳ ಮೈತ್ರಿಕೂಟ 'I.N.D.I.A'
  • ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ
  • ಕಾಂಗ್ರೆಸ್‌ನ ಗೆಲುವು ಪ್ರತಿಪಕ್ಷಗಳ ಮೈತ್ರಿಯ ಮೇಲೆ ಪರಿಣಾಮ
I.N.D.I.A ಮೈತ್ರಿಕೂಟಕ್ಕೆ ನಾಲ್ಕು ರಾಜ್ಯಗಳ ಫಲಿತಾಂಶಗಳು ಎಷ್ಟು ಮುಖ್ಯ?  title=

ನವದೆಹಲಿ : ವಿಪಕ್ಷಗಳ ಮೈತ್ರಿಕೂಟ 'I.N.D.I.A' ಭಾನುವಾರ ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣಾ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಏಕೆಂದರೆ ಕಾಂಗ್ರೆಸ್‌ನ ಗೆಲುವು ಪ್ರತಿಪಕ್ಷಗಳ ಮೈತ್ರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಚುನಾವಣಾ ಫಲಿತಾಂಶದ ನಂತರ, ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಮೈತ್ರಿ ಸಿದ್ಧತೆಗಳನ್ನು ವೇಗಗೊಳಿಸಲಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ಕೆಲವು ಪಕ್ಷಗಳು ಸೀಟು ಹಂಚಿಕೆ ಕುರಿತು ಆರಂಭಿಕ ಮಾತುಕತೆ ನಡೆಸಲು ಉತ್ಸುಕವಾಗಿವೆ, ಆದರೆ ಕಾಂಗ್ರೆಸ್ ವಿಧಾನಸಭಾ ಚುನಾವಣೆಯ ಫಲಿತಾಂಶದವರೆಗೆ ಚರ್ಚೆಯನ್ನು ಮುಂದೂಡಿವೆ.

ಇದನ್ನೂ ಓದಿ: Assembly Election Results 2023 : ಇಂದು 4 ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ 

ಮಾಹಿತಿಯ ಪ್ರಕಾರ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸೀಟು ಗೆದ್ದರೆ ಪ್ಲಸ್‌ ಪಾಐಿಂಟ್‌ ಆಗಲಿದೆ. ಆಸ ಕಾಂಗ್ರೆಸ್‌ ಲೋಕಸಭೆಯಲ್ಲಿ ಸೀಟು ಹಂಚಿಕೆಯಲ್ಲಿ ಹೆಚ್ಚಿನ ಚೌಕಾಶಿ ಮಾಡಲು ಅವಕಾಶ ಪಡೆಯುತ್ತದೆ. ಭಾನುವಾರದ ಫಲಿತಾಂಶಗಳೊಂದಿಗೆ, 2024 ರಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನ ಮಂತ್ರ ಶುರುವಾಗಲಿದೆ. 

ಸೀಟು ಹಂಚಿಕೆ ಕುರಿತು ಆತುರದ ಮಾತುಕತೆ?

ಮತ್ತೊಂದೆಡೆ, ಬಿಜೆಪಿಯನ್ನು ಸೋಲಿಸಲು 'I.N.D.I.A' ಮೈತ್ರಿಯನ್ನು ಬಲಪಡಿಸಲು ಎಲ್ಲರನ್ನು ಒಗ್ಗೂಡಿಸುವ ಮೂಲಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುನ್ನಡೆಯಬೇಕು ಎಂದು ವಿರೋಧ ಪಕ್ಷಗಳ ನಾಯಕರು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ. ಆಗಸ್ಟ್ ಅಂತ್ಯದಲ್ಲಿ ಮುಂಬೈನಲ್ಲಿ ನಡೆದ ವಿಪಕ್ಷಗಳ ಮೈತ್ರಿಕೂಟದ ಕೊನೆಯ ಸಭೆಯಲ್ಲಿ ಪ್ರಾದೇಶಿಕ ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಶೀಘ್ರ ಮಾತುಕತೆ ನಡೆಸುವ ನಿರೀಕ್ಷೆ ಇತ್ತು. ಈ ವಿಚಾರವನ್ನು ಪಕ್ಷದೊಳಗೆ ಚರ್ಚಿಸಿದ ನಂತರ, ತಕ್ಷಣವೇ ಮಾತುಕತೆ ನಡೆಸದಿರಲು ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ. 

ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ, ಹಲವು ನಾಯಕರು ಪ್ರಾದೇಶಿಕ ಪಕ್ಷಗಳೊಂದಿಗೆ ಸೀಟು ಹಂಚಿಕೆ ಕುರಿತು ಕಾಂಗ್ರೆಸ್ ತರಾತುರಿಯಲ್ಲಿ ಮಾತುಕತೆ ನಡೆಸಬಾರದು ಎಂದು ವಾದಿಸಿದರು ಎಂದು ಮೂಲಗಳು ತಿಳಿಸಿವೆ. ಪಕ್ಷದ ಉತ್ತಮ ಕಾರ್ಯನಿರ್ವಹಣೆಯ ನಂತರ, ಬಲವಾದ ಸ್ಥಾನದಿಂದ ಚರ್ಚೆಗಳು ನಡೆಯಬೇಕು.

ಇದನ್ನೂ ಓದಿ: ಕರೆ ಬಂದ್ರೆ ಏನಾಯ್ತು, ಬಾಂಬ್‌ ಸ್ಫೋಟ ಆಗಿದೆಯಾ? - ಸತೀಶ್‌ ಜಾರಕಿಹೊಳಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News