Foreign Policy: ಮಾಡಿದ್ದುಣ್ಣೋ ಮಹರಾಯ! ಪಾಕ್ ಬಿಟ್ಟರೆ ಚೀನಾ ಬಳಿಯಿಂದ ಯಾರು ಶಸ್ತ್ರಾಸ್ತ್ರ ಖರೀದಿಸುತ್ತಿಲ್ಲವಂತೆ

Foreign Policy - ಚೀನಾ (China)ಸೂಪರ್ ಪವರ್ ಆಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಪಾಶ್ಚಿಮಾತ್ಯ ದೇಶಗಳು (Western Countries) ಯಾವಾಗಲೂ ಚೀನಾದ ಈ ಆಕ್ರಮಣಕಾರಿ ಮನೋಭಾವವನ್ನು ಗಮನಿಸುತ್ತಲೇ ಇವೆ. ಅದರಲ್ಲೂ ವಿಶೇಷವಾಗಿ ಕರೋನಾ ಸಾಂಕ್ರಾಮಿಕ ರೋಗದ ನಂತರದ ಕಾಲದಲ್ಲಿ.

Written by - Nitin Tabib | Last Updated : Jul 4, 2021, 04:50 PM IST
  • ಚೀನಾ (China)ಸೂಪರ್ ಪವರ್ ಆಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
  • ಪಾಶ್ಚಿಮಾತ್ಯ ದೇಶಗಳು ಯಾವಾಗಲೂ ಚೀನಾದ ಈ ಆಕ್ರಮಣಕಾರಿ ಮನೋಭಾವವನ್ನು ಗಮನಿಸುತ್ತಲೇ ಇವೆ.
  • ಅದರಲ್ಲೂ ವಿಶೇಷವಾಗಿ ಕರೋನಾ ಸಾಂಕ್ರಾಮಿಕ ರೋಗದ ನಂತರದ ಕಾಲದಲ್ಲಿ.
Foreign Policy: ಮಾಡಿದ್ದುಣ್ಣೋ ಮಹರಾಯ! ಪಾಕ್ ಬಿಟ್ಟರೆ ಚೀನಾ ಬಳಿಯಿಂದ ಯಾರು ಶಸ್ತ್ರಾಸ್ತ್ರ ಖರೀದಿಸುತ್ತಿಲ್ಲವಂತೆ title=
China Foreign Policy(File Photo)

ನವದೆಹಲಿ: Foreign Policy - ಚೀನಾ (China)ಸೂಪರ್ ಪವರ್ ಆಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಪಾಶ್ಚಿಮಾತ್ಯ ದೇಶಗಳು (Western Countries) ಯಾವಾಗಲೂ ಚೀನಾದ ಈ ಆಕ್ರಮಣಕಾರಿ ಮನೋಭಾವವನ್ನು ಗಮನಿಸುತ್ತಲೇ ಇವೆ. ಅದರಲ್ಲೂ ವಿಶೇಷವಾಗಿ ಕರೋನಾ ಸಾಂಕ್ರಾಮಿಕ ರೋಗದ ನಂತರದ ಕಾಲದಲ್ಲಿ. ಅಂದಿನಿಂದ, ಅನೇಕ ದೇಶಗಳು ಚೀನಾದಿಂದ ಶಸ್ತ್ರಾಸ್ತ್ರ ಮತ್ತು ಇನ್ನಿತರ ಮಿಲಿಟರಿ ಸಾಮಗ್ರಿಗಳ ಆಮದನ್ನು ಕಡಿಮೆ ಮಾಡಲು ಪ್ರಾರಂಭಿಸಿವೆ. ಪರಿಸ್ಥಿತಿ ಹೇಗಿದೆ ಎಂದರೆ, ಇದೀಗ ದೊಡ್ಡ ದೇಶಗಳು, ಪಾಕಿಸ್ತಾನವನ್ನು (Pakistan) ಹೊರತುಪಡಿಸಿ, ಇತರ ಸಣ್ಣ ದೇಶಗಳು ಸಹ ಚೀನಾದ ಶಸ್ತ್ರಾಸ್ತ್ರ (Arms) ಮತ್ತು ಯುದ್ಧ ವಿಮಾನಗಳನ್ನು (Fighter Jets) ಖರೀದಿಸುವುದರಿಂದ ದೂರ ಸರಿಯುತ್ತವೆ.

'ಫಾರೆನ್ ಪಾಲಸಿ'ಯಲ್ಲಿ (Foreign Policy) ಪ್ರಕಟಗೊಂಡ ವರದಿಯೊಂದರ ಪ್ರಕಾರ ಕಳೆದ ತಿಂಗಳು ಫಿಲಿಪೈನ್ಸ್  (Philippines)ಮೇಲೆ ಚೀನಾದ ಕ್ರಮದ ಬಳಿಕ ಚೀನಾದ ಜೊತೆಗೆ ತುಂಬಾ ಕಡಿಮೆ ದೇಶಗಳು ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರುತ್ತಿವೆ. ಕಳೆದ ತಿಂಗಳು ಚೀನಾದ ನೌಕಾಪಡೆಯ ಹಡಗುಗಳು ಯಾವುದೇ ಅನುಮತಿ ಇಲ್ಲದೆ ಫಿಲಿಪೈನ್ಸ್  ಸಾಗರ ಕ್ಷೇತ್ರಕ್ಕೆ (Philippines Water) ಪ್ರವೇಶಿಸಿದ್ದವು 

ಭಾರತ (India) ಅಷ್ಟೇ ಅಲ್ಲ ಈ ದೇಶಗಳೂ ಕೂಡ ಚೀನಾ ಬಳಿಯಿಂದ ಶಸ್ತ್ರಾಸ್ತ್ರ ಖರೀದಿಸುತ್ತಿಲ್ಲ 
ಲಡಾಖ್ ನಲ್ಲಿ ಭಾರತದೊಂದಿಗಿನ ಮುಖಾಮುಖಿಯ ಬಳಿಕ ಎರಡು ದೇಶಗಳ ದ್ವಿಪಕ್ಷೀಯ ಸಂಬಂಧಗಳು ತೀರಾ ಹದಗೆಟ್ಟಿವೆ. ಭಾರತ ಇತರೆ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದರೂ ಕೂಡ ಚೀನಾ ಬಳಿಯಿಂದ ಮಿಲಿಟರಿ ಉತ್ಪನ್ನಗಳನ್ನು ಖರೀದಿಸುತ್ತಿಲ್ಲ. ಇನ್ನೊಂದೆಡೆ  ವಿಯೆಟ್ನಾಂ (Vietnam) ಪರಿಸ್ಥಿತಿ ಕೂಡ ಇದೆ ಆಗಿದೆ. ಚೀನಾ ಜೊತೆಗಿನ ಕಡಲು ಕ್ಷೇತ್ರದ ವಿವಾದ ಅಲ್ಲಿಯೂ ಹೆಚ್ಚಾಗುತ್ತಿದೆ. ಇದರ ಜೊತೆಗೆ ಮಲೇಷ್ಯಾ (Malaysia) ಹಾಗೂ ಇಂಡೋನೇಷ್ಯಾಗಳೂ (Indonesia) ಕೂಡ ಚೀನಾ ಬಳಿಯಿಂದ ಯುದ್ಧ ವಿಮಾನಗಳನ್ನು ಖರೀದಿಸಲು ಬಯಸುತ್ತಿಲ್ಲ.

ಇದೇ ವರ್ಷ ಸ್ಟಾಕ್ ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI)ತನ್ನ ವರದಿಯಲ್ಲಿ ಭಾರತೆ 'ಆತ್ಮ ನಿರ್ಭರ್ ಭಾರತ್' (Aatma Nirbhar Bharat) ಯೋಜನೆಯ ಅಡಿ ತನ್ನ ಮೇಲಿನ ಅವಲಂಭನೆಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಹೇಳಿತ್ತು.

ಭಾರತದಲ್ಲಿ ಶಸ್ತ್ರಾಸ್ತ್ರ ಆಮದು (Weapon Import) ಕಡಿಮೆಯಾಗಿದ್ದು, ಚೀನಾದ ರಫ್ತು ಕಡಿಮೆಯಾಗಿದೆ (Weapon Export) 
2011-2015 ಮತ್ತು 2016-20ರ ನಡುವೆ ಭಾರತದ ಶಸ್ತ್ರಾಸ್ತ್ರ ಆಮದು ಶೇ 33 ರಷ್ಟು ಕುಸಿದಿದೆ. ಇದೇ ಅವಧಿಯಲ್ಲಿ ಚೀನಾದ (China) ರಫ್ತು ಕೂಡ ಶೇ 7.8 ರಷ್ಟು ಕುಸಿದಿದೆ. ನಿಮಗೆ ಸ್ನೇಹಿತರಿಲ್ಲದಿದ್ದರೆ ಈ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ಯುದ್ಧ ವಿಮಾನಗಳು ಯಾವುವು ಕೆಲಸಕ್ಕೆ ಬರುವುದಿಲ್ಲ ಮತ್ತು ಇದೆ ಕಾರಣದಿಂದ ವಿಶ್ವದ ಇತರ ರಾಷ್ಟ್ರಗಳು ಬಿಜಿಂಗ್ ನಿಂದ ಇವುಗಳನ್ನು ಖರೀದಿಸುವುದರಿಂದ ಹಿಂದೇಟು ಹಾಕುತ್ತಿವೆ ಎಂದು ಫಾರೀನ್ ಪಾಲಸಿ ವರದಿ ಹೇಳಿದೆ.

ಇದನ್ನೂ ಓದಿ- Vladimir Putin On Third World War: 'ನಿಮ್ಮಿಂದ ವಿಶ್ವದ ಮೂರನೇ ಮಹಾಯುದ್ಧ ಸಂಭವಿಸಿದರೆ...', ತೀಕ್ಷ್ಣ ಪ್ರತಿಕ್ರಿಯೆ ನೀಡಿದ Vladimir Putin

ಚೀನಾ ತಂತ್ರಜ್ಞಾನವನ್ನು ಹೆಚ್ಚಿಸುತ್ತಿದೆ, ಆದರೂ ಕೂಡ ಅಮೇರಿಕಾ ನಂ.1 ರಫ್ತು ರಾಷ್ಟ್ರವಾಗಿದೆ
ಚೀನಾ ಸತತವಾಗಿ ತನ್ನ ಯುದ್ಧ ವಿಮಾನಗಳನ್ನು ಉನ್ನತ ದರ್ಜೆಗೆ ಏರಿಸುತ್ತಿದೆ. ಚೀನಾ ಜೆ -10, ಜೆ -10 ಸಿ ಮತ್ತು ಎಫ್‌ಸಿ -31 ನಂತಹ ಯುದ್ಧ ವಿಮಾನಗಳನ್ನು ತಯಾರಿಸಿದೆ. SIPRI ವರದಿಯ ಪ್ರಕಾರ, 2000 ಮತ್ತು 2020 ರ ನಡುವೆ, ಚೀನಾ 7.2 ಬಿಲಿಯನ್ ಡಾಲರ್ ಮೊತ್ತದ ಮಿಲಿಟರಿ ವಿಮಾನಗಳನ್ನು ರಫ್ತು ಮಾಡಿದೆ. ಇದೆ ಅವಧಿಯಲ್ಲಿ ಅಮೇರಿಕಾ(US) $ 99.6 ಬಿಲಿಯನ್ ಮೊತ್ತದ ವಿಮಾನಗಳನ್ನು ರಫ್ತು ಮಾಡಿದೆ ಮತ್ತು ರಷ್ಯಾ (Russia) 61.5 ಬಿಲಿಯನ್ ಡಾಲರ್ ಮೌಲ್ಯದ ವಿಮಾನಗಳನ್ನು ಇತರ ದೇಶಗಳಿಗೆ ರಫ್ತು ಮಾಡಿ ಎರಡನೇ ಸ್ಥಾನದಲ್ಲಿದೆ. ಫ್ರಾನ್ಸ್ (France) ಕೂಡ ಚೀನಾಗಿಂತ ಎರಡುಪಟ್ಟು ಹೆಚ್ಚು ವಿಮಾನಗಳನ್ನು ರಫ್ತು ಮಾಡಿ, 14.7 ಬಿಲಿಯನ್ ಡಾಲರ್ ಗಳಿಕೆ ಮಾಡಿದೆ.

ಇದನ್ನೂ ಓದಿ- Imran Khan On Modi Government: 'ಮೋದಿ ಜಾಗದಲ್ಲಿ ಬೇರೆ ಯಾರಿದ್ದರೂ ಕೂಡ ಭಾರತದ ಜೊತೆಗೆ ಸಂಬಂಧ ಸರಿಯಾಗಿರುತ್ತಿತ್ತು'

ಚೀನಾದ ವಿದೇಶಾಂಗ ನೀತಿಯೇ ಅದರ ಅಸಫಲತೆಗೆ ಕಾರಣ
ಪಾಕಿಸ್ತಾನ ಮಾತ್ರ ಶಸ್ತ್ರಾಸ್ತ್ರಗಳಿಗಾಗಿ ಚೀನಾವನ್ನು ಅವಲಂಬಿಸಿದೆ. ಕಳೆದ ಐದು ವರ್ಷಗಳಲ್ಲಿ ಇಸ್ಲಾಮಾಬಾದ್ (Islamabad) ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಶೇಕಡಾ 74 ರಷ್ಟು ಪಾಲು ಚೀನಾ ಹೊಂದಿದೆ.. ಮಾಧ್ಯಮ ವರದಿಗಳ ಪ್ರಕಾರ ಚೀನಾದ ಈ ವೈಫಲ್ಯತೆಯ ಹಿಂದಿನ ದೊಡ್ಡ ಕಾರಣವೆಂದರೆ ಅದರ ವಿದೇಶಾಂಗ ನೀತಿ. ಯುದ್ಧ ವಿಮಾನಗಳನ್ನು ಮಾರಾಟ ಮಾಡಲು, ಯಾವುದೇ ದೇಶವು ತನ್ನ ವ್ಯಾಪಾರ ನೀತಿಯನ್ನು ಸುಲಭವಾಗಿ ಹೊಂದಿಕೊಳ್ಳಬೇಕು,  ತಂತ್ರಜ್ಞಾನವನ್ನು ವರ್ಗಾಯಿಸಬೇಕಾಗುತ್ತದೆ. ಇದೆಲ್ಲವೂ ಶಸ್ತ್ರಾಸ್ತ್ರ ಒಪ್ಪಂದದ ಭಾಗವಾಗಿದೆ. ಆದರೆ ಚೀನಾ ಇದನ್ನು ಮಾಡಲು ಅನುಮತಿಸುವುದಿಲ್ಲ. ಚೀನಾ ವಿಶ್ವದ ಅತಿದೊಡ್ಡ ರಫ್ತುದಾರನಾಗಲು ಬಯಸಿದೆ ಆದರೆ ಅದು ತನ್ನ ಆಮದನ್ನು ಹೆಚ್ಚಿಸಲು ಬಯಸುವುದಿಲ್ಲ.

ಇದನ್ನೂ ಓದಿ-Big Blow To Pakistan: ಮತ್ತೊಮ್ಮೆ FATF ಬೂದು ಪಟ್ಟಿಯಲ್ಲಿಯೇ ಉಳಿದ ಪಾಕಿಸ್ತಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News