/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ವಿಶ್ವಸಂಸ್ಥೆ: ಪಾಕಿಸ್ತಾನದ ಜೈಶ್​​-ಎ-ಮೊಹಮ್ಮದ್​​ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್​​​ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಅಮೆರಿಕ, ಯುನೈಟೆಡ್​ ಕಿಂಗ್​ಡಮ್ ಮತ್ತು ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಒತ್ತಾಯಿಸಿದ್ದಾರೆ.

15 ರಾಷ್ಟ್ರಗಳ ಭದ್ರತಾ ಮಂಡಳಿಯ ಮೂವರು ಶಾಶ್ವತ ವೀಟೋ-ಚಾಲಿತ ಸದಸ್ಯರು ಹೊಸ ಪ್ರಸ್ತಾಪವನ್ನ ಇಂದು ಸಲ್ಲಿಸಿದ್ದಾರೆ. ಈ ಮೂವರು ಸದಸ್ಯ ರಾಷ್ಟ್ರಗಳು ಸಲ್ಲಿಸಿದ ಹೊಸ ಪ್ರಸ್ತಾಪವನ್ನು 10 ದಿನಗಳ ಒಳಗೆ ಭದ್ರತಾ ಮಂಡಳಿ ಪರಿಶೀಲನೆ ನಡೆಸಲಿದೆ. 

ಉಗ್ರ ಮಸೂದ್ ಅಜರ್​​​ನನ್ನು ಕಪ್ಪು ಪಟ್ಟಿಗೆ ಸೇರಿಸುವುದು,, ಜಾಗತಿಕ ಪ್ರವೇಶಕ್ಕೆ ನಿಷೇಧ ಹೇರುವುದು ಸೇರಿದಂತೆ ಆತನಿಗೆ ಸೇರಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕುವಂತೆ ಮಾಡಲು ಮೂರನೇ ಬಾರಿಗೆ ಪ್ರಯತ್ನ ನಡೆದಿದೆ. ಈ ಮೂಲಕ ಮಸೂದ್​ ಅಜರ್​ನನ್ನು 'ಜಾಗತಿಕ ಭಯೋತ್ಪಾದಕ' ಎಂದು ಸಾರುವಂತೆ ಒತ್ತಾಯಿಸಿ ಸಲ್ಲಿಕೆಯಾದ ಪ್ರಸ್ತಾವನೆಯಲ್ಲಿ ಇದು ನಾಲ್ಕನೇಯದಾಗಿದೆ.

ಈ ಹಿಂದೆ 2009, 2016  ಹಾಗೂ 2017ರಲ್ಲಿ ಇದೇ ಪ್ರಸ್ತಾಪವನ್ನು ಭಾರತ ಸೇರಿ ಅನೇಕ ರಾಷ್ಟ್ರಗಳು ಮುಂದಿಟ್ಟಾಗ ಚೀನಾ ಅಡ್ಡಗಾಲು ಹಾಕಿತ್ತು. ಈ ಬಾರಿಯೂ ಚೀನಾ ತಗಾದೆ ತೆಗೆಯಲಿದೆ ಎಂದು ರಾಜತಾಂತ್ರಿಕರು ಅಭಿಪ್ರಾಯ ಪಟ್ಟಿದ್ದಾರೆ.

ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​​​​​ ಯೋಧರ ಮೇಲೆ ಆತ್ಮಾಹುತಿ ಬಾಂಬ್​​​ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ನಮ್ಮ 40 ಸಿಆರ್​ಪಿಎಫ್​​​​​ ಯೋಧರು ಹುತಾತ್ಮರಾದರು. ಈ ಪೈಶಾಚಿಕ ಕೃತ್ಯಕ್ಕೆ ಕಾರಣವಾಗಿದ್ದ ಜೆಎಎಂ ಸಂಘಟನೆ ವಿರುದ್ಧ ಫೆಬ್ರವರಿ 25 ರ ಮಧ್ಯರಾತ್ರಿ ಇಂಡಿಯನ್ ಆರ್ಮಿ ಏರ್​ಸ್ಟ್ರೈಕ್ ನಡೆಸಿತ್ತು. ಈ ದಾಳಿಯಲ್ಲಿ 300 ಉಗ್ರರನ್ನು ಹತ್ಯೆಗೈಯಲಾಗಿತ್ತು. ಇದೀಗ ಮಸೂದ್​ ಅಜರ್​​ನನ್ನು ಗ್ಲೋಬಲ್​ ಟೆರರಿಸ್ಟ್​ ಎಂದು ಘೋಷಣೆ ಮಾಡುವಂತೆ ಯುಎಸ್, ಯುಕೆ ಹಾಗೂ ಫ್ರಾನ್ಸ್​ ವಿಶ್ವಸಂಸ್ಥೆಗೆ ಒತ್ತಾಯಿಸಿವೆ.

Section: 
English Title: 
US, UK, France ask UN to blacklist JeM chief Masood Azhar
News Source: 
Home Title: 

ಉಗ್ರ ಮಸೂದ್ ನಿರ್ಬಂಧಕ್ಕೆ ವಿಶ್ವಸಂಸ್ಥೆಯಲ್ಲಿ ಯುಎಸ್, ಯುಕೆ, ಫ್ರಾನ್ಸ್ ಒತ್ತಾಯ

ಉಗ್ರ ಮಸೂದ್ ನಿರ್ಬಂಧಕ್ಕೆ ವಿಶ್ವಸಂಸ್ಥೆಯಲ್ಲಿ ಯುಎಸ್, ಯುಕೆ, ಫ್ರಾನ್ಸ್ ಒತ್ತಾಯ
Yes
Is Blog?: 
No
Tags: 
Facebook Instant Article: 
Yes
Mobile Title: 
ಉಗ್ರ ಮಸೂದ್ ನಿರ್ಬಂಧಕ್ಕೆ ಯುಎಸ್, ಯುಕೆ, ಫ್ರಾನ್ಸ್ ಒತ್ತಾಯ
Publish Later: 
No
Publish At: 
Thursday, February 28, 2019 - 11:23