ರಷ್ಯಾ ಹಿಮ್ಮೆಟ್ಟಿಸಲು ಉಕ್ರೇನ್‌ಗೆ ಯುಎಸ್‌ ಸಾಥ್:‌ ಅತ್ಯಾಧುನಿಕ ರಾಕೆಟ್‌ ವ್ಯವಸ್ಥೆಯ ಸಹಕಾರ

Russia Ukraine War: ಅಮೆರಿಕ ಇತ್ತೀಚೆಗೆ ಉಕ್ರೇನ್‌ಗೆ ಸುಮಾರು 54 ಬಿಲಿಯನ್ ಡಾಲರ್‌ಗಳ ನೆರವನ್ನು ನೀಡಿದ್ದು, ದೇಶವನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡಿದೆ. ಇದೀಗ ರಷ್ಯಾ ಹಿಮ್ಮೆಟ್ಟಿಸಲು ಮತ್ತೊಂದು ಸಹಕಾರ ನೀಡಿದೆ. 

Written by - Chetana Devarmani | Last Updated : Jun 1, 2022, 10:31 AM IST
  • ರಷ್ಯಾ ಉಕ್ರೇನ್‌ ಯುದ್ಧ
  • ರಷ್ಯಾ ಹಿಮ್ಮೆಟ್ಟಿಸಲು ಉಕ್ರೇನ್‌ಗೆ ಯುಎಸ್‌ ಸಾಥ್
  • ಅತ್ಯಾಧುನಿಕ ರಾಕೆಟ್‌ ವ್ಯವಸ್ಥೆಯ ಸಹಕಾರ
ರಷ್ಯಾ ಹಿಮ್ಮೆಟ್ಟಿಸಲು ಉಕ್ರೇನ್‌ಗೆ ಯುಎಸ್‌ ಸಾಥ್:‌  ಅತ್ಯಾಧುನಿಕ ರಾಕೆಟ್‌ ವ್ಯವಸ್ಥೆಯ ಸಹಕಾರ  title=
ರಷ್ಯಾ ಉಕ್ರೇನ್‌ ಯುದ್ಧ

Russia Ukraine War:  ರಷ್ಯಾ ಉಕ್ರೇನ್‌ನ ಮೇಲೆ ಯುದ್ಧವನ್ನು ಮುಂದುವರೆಸುತ್ತಿರುವಾಗ, ಯುಎಸ್ ಅಧ್ಯಕ್ಷ ಜೋ ಬೈಡನ್ ಕೀವ್‌ಗೆ ಸುಧಾರಿತ ರಾಕೆಟ್ ವ್ಯವಸ್ಥೆಗಳನ್ನು ಒದಗಿಸಲು ಸಿದ್ಧರಾಗಿದ್ದಾರೆ. 700 ಮಿಲಿಯನ್ ಡಾಲರ್‌ ಶಸ್ತ್ರಾಸ್ತ್ರಗಳ ಪ್ಯಾಕೇಜ್ ಇದಾಗಿದೆ. ಉಕ್ರೇನ್‌ಗೆ ಅತ್ಯಾಧುನಿಕ ರಾಕೆಟ್‌ ವ್ಯವಸ್ಥೆಯ ಸಹಕಾರ ನೀಡುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮಂಗಳವಾರ ಖಚಿತಪಡಿಸಿದ್ದಾರೆ. ರಷ್ಯಾದ ಆಕ್ರಮಣ ಪಡೆಗಳ ಪ್ರಮುಖ ಗುರಿಗಳತ್ತ ನುಗ್ಗುವ ಸಾಮರ್ಥ್ಯವನ್ನು ಅಮೆರಿಕದ ಈ ರಾಕೆಟ್‌ ಲಾಂಚರ್‌ಗಳು ಹೊಂದಿವೆ. ಇದು ಉಕ್ರೇನ್‌ಗೆ ರಷ್ಯಾವನ್ನು ಹಿಮ್ಮೆಟ್ಟಿಸುವಲ್ಲಿ ಸಹಕರಿಸಬಹುದು. 

ಹೈಮರ್ಸ್‌ಗಳನ್ನು ಅಥವಾ ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್‌ ಸಿಸ್ಟಮ್‌ ಅನ್ನು ಉಕ್ರೇನ್‌ಗೆ ಕಳುಹಿಸುತ್ತಿರುವುದಾಗಿ ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಚಲನಶೀಲ ಫಿರಂಗಿ ರಾಕೆಟ್ ವ್ಯವಸ್ಥೆಗಳನ್ನು ಹೊಂದಿದ್ದು ಅದು 80 ಕಿಮೀ (50 ಮೈಲುಗಳಷ್ಟು) ದೂರದಲ್ಲಿರುವ ಗುರಿಗಳನ್ನು ಹೊಡೆಯಬಲ್ಲದು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಇದನ್ನೂ ಓದಿ: ನಿಶ್ಚಿತಾರ್ಥ ಮುಗಿಸಿ ಬರುವಾಗ ಭೀಕರ ಅಪಘಾತ: ಸ್ಥಳದಲ್ಲೇ 7 ಮಂದಿ ದುರ್ಮರಣ

ಶಸ್ತ್ರಾಸ್ತ್ರಗಳ ಪ್ಯಾಕೇಜ್‌ನಲ್ಲಿ ಮದ್ದುಗುಂಡುಗಳು, ಕೌಂಟರ್‌ಫೈರ್ ರಾಡಾರ್‌ಗಳು, ಹಲವಾರು ವಾಯು ಕಣ್ಗಾವಲು ರಾಡಾರ್‌ಗಳು, ಹೆಚ್ಚುವರಿ ಜಾವೆಲಿನ್ ಆಂಟಿ-ಟ್ಯಾಂಕ್ ಕ್ಷಿಪಣಿಗಳು ಮತ್ತು ಆಂಟಿ-ಆರ್ಮರ್ ಶಸ್ತ್ರಾಸ್ತ್ರಗಳೂ ಸೇರಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಉಕ್ರೇನ್‌ನ ಪೂರ್ವ ಭಾಗದಲ್ಲಿ ರಷ್ಯಾ ಪಡೆಗಳ ವಿರುದ್ಧದ ಹೋರಾಟದಲ್ಲಿ ಹೆಚ್ಚು ವ್ಯಾಪ್ತಿಯ ಗುರಿಯನ್ನು ತಲುಪಬಹುದಾದ ಈ ಶಸ್ತ್ರಾಸ್ತ್ರಗಳು ಪ್ರಮುಖ ಪಾತ್ರವಹಿಸಲಿವೆ. 

ಯು.ಎಸ್ ಇತ್ತೀಚೆಗೆ ಉಕ್ರೇನ್‌ಗೆ ಸುಮಾರು 54 ಬಿಲಿಯನ್ ಡಾಲರ್‌ಗಳ ನೆರವನ್ನು ನೀಡಿದ್ದು, ದೇಶವನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡಿತು.

ಮಂಗಳವಾರ ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್ ಆಪ್-ಎಡ್ ನಲ್ಲಿ ಬೈಡನ್, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು "ರಾಜತಾಂತ್ರಿಕತೆಯ ಮೂಲಕ ಕೊನೆಗೊಳ್ಳುತ್ತದೆ" ಎಂದು ಹೇಳಿದರು. ಆದಾಗ್ಯೂ, ಯುಎಸ್ "ಉಕ್ರೇನಿಯನ್ನರಿಗೆ ಹೆಚ್ಚು ಸುಧಾರಿತ ರಾಕೆಟ್ ವ್ಯವಸ್ಥೆಗಳು ಮತ್ತು ಮದ್ದುಗುಂಡುಗಳನ್ನು ಒದಗಿಸುತ್ತದೆ, ಅದು ಉಕ್ರೇನ್‌ನಲ್ಲಿನ ಯುದ್ಧಭೂಮಿಯಲ್ಲಿ ಪ್ರಮುಖ ಗುರಿಗಳನ್ನು ಹೆಚ್ಚು ನಿಖರವಾಗಿ ಹೊಡೆಯಲು ಅನುವು ಮಾಡಿಕೊಡುತ್ತದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಈ ತಿಂಗಳು ಮಾರುಕಟ್ಟೆಗೆ ಬರಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಫೆಬ್ರವರಿ 24 ರಂದು ಉಕ್ರೇನ್‌ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ಉಕ್ರೇನ್ ವ್ಯಾಪಕವಾದ US ಮಿಲಿಟರಿ ನೆರವನ್ನು ಪಡೆದುಕೊಂಡಿದೆ. ರಷ್ಯಾದ ನಿರಂತರ ಶೆಲ್ ದಾಳಿ ಮತ್ತು ಬಾಂಬ್ ದಾಳಿಯಿಂದಾಗಿ ಯುದ್ಧ ಪೀಡಿತ ದೇಶದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News