ಅಮ್ಮನ ಫೋನ್ ನಿಂದ 31 ಬರ್ಗರ್ ಆರ್ಡರ್ ಮಾಡಿ, ಟಿಪ್ಸ್ ಕೂಡಾ ಕೊಟ್ಟ ಎರಡು ವರ್ಷದ ಪೋರ

ಮೊಬೈಲ್ ಬಳಕೆಯಿಂದ ಮಕ್ಕಳ ಜ್ಞಾನ ಹೆಚ್ಚುತ್ತದೆ. ಆದರೆ ಇದರಲ್ಲಿ ಅಪಾಯವೂ  ಹೆಚ್ಚು.  ಮಾತ್ರವಲ್ಲ, ಹೆತ್ತವರ ಸೆಲ್ ಫೋನ್ ಬಳಸಿ ಅವರನ್ನೇ ಆರ್ಥಿಕ ಸಂಕಷ್ಟಕ್ಕೆ ದೂಡಿರುವ ಎಷ್ಟೋ ಪ್ರಕರಣಗಳು ನಮ್ಮ ಮುಂದೆ ಇದೆ.

Written by - Ranjitha R K | Last Updated : May 18, 2022, 12:50 PM IST
  • ಇಂದಿನ ಮಕ್ಕಳಿಗೆ ಮೊಬೈಲ್ ಇದ್ದರೆ ಬೇರೇನೂ ಬೇಡ
  • ಮೊಬೈಲ್ ನಲ್ಲಿಯೇ ದಿನ ಕಳೆದು ಬಿಡುತ್ತಾರೆ
  • ಮೊಬೈಲ್ ಮೂಲಕ 31 ಚೀಸ್‌ಬರ್ಗರ್‌ ಆರ್ಡರ್ ಮಾಡಿದ ಮಗು
ಅಮ್ಮನ ಫೋನ್ ನಿಂದ 31 ಬರ್ಗರ್ ಆರ್ಡರ್ ಮಾಡಿ, ಟಿಪ್ಸ್ ಕೂಡಾ ಕೊಟ್ಟ ಎರಡು ವರ್ಷದ ಪೋರ  title=
todller orders burger

ನವದೆಹಲಿ : ಇಂದಿನ ಮಕ್ಕಳು ಮೊಬೈಲ್ ಬಿಟ್ಟರೆ ಬೇರೆ ಜಗತ್ತೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಗೆ ದಾಸರಾಗಿರುವುದನ್ನು ನೋಡಬಹುದು. ಚಿಕ್ಕ ಮಕ್ಕಳ ಕೈಗೆ ಮೊಬೈಲ್ ಸಿಕ್ಕಿದರೆ ಅವರ ಸಂತೋಷವೇ ಬೇರೆ. ಅಲ್ಲದೆ ಆ ಮೊಬೈಲ್ ಆಪರೇಟ್ ಮಾಡುವುದನ್ನು ಕೂಡಾ ಬಹಳ ಚೆನ್ನಾಗಿ ಮತ್ತು ಬೇಗನೇ ಕಲಿತುಕೊಳ್ಳುತ್ತಾರೆ ಮಕ್ಕಳು. ಮೊಬೈಲ್ ನಲ್ಲಿ ಗೇಮ್ ಆಡುವುದರಿಂದ ಹಿಡಿದು ವಿಡಿಯೋ ನೋಡುವುದರವರೆಗೆ ಇಡೀ ದಿನ ಇದರಲ್ಲಿಯೇ ಕಳೆದು ಹೋಗುತ್ತಾರೆ.  ಆದರೆ, ಕೆಲವೊಮ್ಮೆ, ಹೆತ್ತವರಿಗೆ ತಿಳಿಯದಂತೆ ಕೆಲವು ಆಘಾತಕಾರಿ ಕೆಲಸಗಳನ್ನು ಕೂಡಾ ಮಾಡುತ್ತಾರೆ. ಇದರಿಂದ ಎಷ್ಟೋ ಬಾರಿ ಅಪ್ಪ ಅಮ್ಮ ಪೇಜಿಗೆ ಸಿಲುಕಬೇಕಾಗುತ್ತದೆ. 

ಮೊಬೈಲ್ ಮೂಲಕ 31 ಚೀಸ್‌ಬರ್ಗರ್‌ ಆರ್ಡರ್ ಮಾಡಿದ ಮಗು : 
ಮೊಬೈಲ್ ಮತ್ತು ಗ್ಯಾಜೆಟ್‌ಗಳಿಂದ ಮಕ್ಕಳನ್ನು ದೂರ ಇಡಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಈ ಸಾಧನಗಳನ್ನು ಬಳಸಿಕೊಂಡು ಮಕ್ಕಳು ಅನೇಕ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಇದರಿಂದ ಮಕ್ಕಳ ಜ್ಞಾನ ಹೆಚ್ಚುತ್ತದೆ ಹೌದು. ಆದರೆ ಇದಕ್ಕಿಂತ ಹೆಚ್ಚು ಮಕ್ಕಳು ಕೆಟ್ಟ ಚಟಕ್ಕೆ ಸಿಲುಕುವ ಅಪಾಯವೂ ಇರುತ್ತದೆ. ಮಾತ್ರವಲ್ಲ, ಹೆತ್ತವರ ಸೆಲ್ ಫೋನ್ ಬಳಸಿ ಅವರನ್ನೇ ಆರ್ಥಿಕ ಸಂಕಷ್ಟಕ್ಕೆ ದೂಡಿರುವ ಎಷ್ಟೋ ಪ್ರಕರಣಗಳು ನಮ್ಮ ಮುಂದೆ ಇದೆ. ನ್ಯೂಜೆರ್ಸಿಯಲ್ಲಿ 2 ವರ್ಷದ  ಮಗುವೊಂದು ತನ್ನ ತಾಯಿಯ ಫೋನ್ ಬಳಸಿ ಆನ್‌ಲೈನ್‌ನಲ್ಲಿ  1.4 ಲಕ್ಷ ರೂಪಾಯಿ  ಮೌಲ್ಯದ ಪೀಠೋಪಕರಣಗಳನ್ನು ಆರ್ಡರ್ ಮಾಡಿದ ಘಟನೆ ಇನ್ನೂ ಮಾಸಿಲ್ಲ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 

ಇದನ್ನೂ ಓದಿ :  Sri Lanka Crisis: ಗೋಟಬಯ ರಾಜಪಕ್ಸ ವಿರುದ್ಧದ ಅವಿಶ್ವಾಸಕ್ಕೆ ಸೋಲು

ಆರ್ಡರ್ ಜೊತೆ ಟಿಪ್ಸ್ ಕೂಡಾ : 
ಅಮೇರಿಕಾದ ಟೆಕ್ಸಾಸ್‌ನಲ್ಲಿ 2 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಸ್ಮಾರ್ಟ್‌ಫೋನ್ ಬಳಸಿ ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ಗಳಿಂದ 31 ಚೀಸ್‌ಬರ್ಗರ್‌ಗಳನ್ನು ಆರ್ಡರ್ ಮಾಡಿದ್ದಾನೆ. ಡೆಲಿವರಿಗಾಗಿ 1,200) ಟಿ ಪ್ ಕೂಡ ಕೊಟ್ಟಿದ್ದಾನೆ. ಕೆಲ್ಸೆ ಬುರ್ಖಾಲ್ಟರ್ ಗೋಲ್ಡನ್ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ಅವರ ಮಗ ಬ್ಯಾರೆಟ್ ಡೋರ್‌ಡ್ಯಾಶ್ ಅಪ್ಲಿಕೇಶನ್ ಬಳಸಿ ಬರ್ಗರ್‌ಗಳನ್ನು ಆರ್ಡರ್ ಮಾಡಿರುವುದಾಗಿ ಬರೆದುಕೊಂಡಿದ್ದಾರೆ. 

ಮಗ ಫೋನ್‌ನಿಂದ ಫೋಟೋ ತೆಗೆಯುತ್ತಿದ್ದಾನೆ ಎಂದೇ ಭಾವಿಸಿದ್ದ ತಾಯಿ : 
ಮಗ ಮೊಬೈಲ್ ಫೋನ್ ಹಿಡಿದು ಆಟವಾಡುತ್ತಿದ್ದ ಈ ವೇಳೆ ಫೋಟೋ ತೆಗೆಯುತ್ತಿದ್ದಾನೆ ಎಂದು ಭಾವಿಸಿದ್ದಾಗಿ ತಾಯಿ ತನ್ನ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಮಗು ಆರ್ಡರ್ ಮಾಡಿದ 31 ಚೀಸ್ ಬರ್ಗರ್‌ಗಳ ಬೆಲೆ 61.58 ಡಾಲರ್ ಆಗಿದೆ. ಅಲ್ಲದೆ ಮಗು ಆರ್ಡರ್ ಡೆಲಿವರಿ ಮಾಡಿರುವವನಿಗೆ ಟಿಪ್ಸ್ ಕೂಡಾ ನೀಡಿದ್ದಾನೆ. 

ಇದನ್ನೂ ಓದಿ : ಚೀನಾದಲ್ಲಿ ಮತ್ತೆ ಹೆಚ್ಚುತ್ತಿರುವ ಕೊರೊನಾ: ಇಡೀ ಜಗತ್ತಿಗೆ ಕಾದಿದೆ ಗಂಡಾಂತರ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News