ದೆಹಲಿ, ಪಶ್ಚಿಮ ಬಂಗಾಳ ಬಿಹಾರದಲ್ಲಿ ಕಂಪಿಸಿದ ಭೂಮಿ : ಬೆಳ್ಳಂ ಬೆಳ್ಳಗ್ಗೆ ಭಯಾನಕ ಅನುಭವ

Earthquake Today : ಭಾರತದಲ್ಲಿ, ದೆಹಲಿ NCR ಹೊರತುಪಡಿಸಿ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಕಂಪನದ ಅನುಭವವಾಗಿದೆ.   

Written by - Ranjitha R K | Last Updated : Jan 7, 2025, 10:11 AM IST
  • ದೆಹಲಿ ಎನ್‌ಸಿಆರ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭೂಕಂಪನದ ಅನುಭವ
  • ನೇಪಾಳ-ಟಿಬೆಟ್ ಗಡಿಯೇ ಕೇಂದ್ರ ಬಿಂದು
  • ಭೂಕಂಪದ ತೀವ್ರತೆ 7.1 ಎಂದು ದಾಖಲು
ದೆಹಲಿ, ಪಶ್ಚಿಮ ಬಂಗಾಳ ಬಿಹಾರದಲ್ಲಿ ಕಂಪಿಸಿದ ಭೂಮಿ : ಬೆಳ್ಳಂ ಬೆಳ್ಳಗ್ಗೆ ಭಯಾನಕ ಅನುಭವ  title=

Earthquake Today : ರಾಜಧಾನಿ ದೆಹಲಿ ಎನ್‌ಸಿಆರ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದೆ. ಇದರ ಕೇಂದ್ರವನ್ನು ನೇಪಾಳ-ಟಿಬೆಟ್ ಗಡಿ ಎಂದು ಹೇಳಲಾಗಿದ್ದು, ಭೂಕಂಪದ ತೀವ್ರತೆ 7.1 ಎಂದು ಹೇಳಲಾಗಿದೆ. ಇದುವರೆಗೆ ಬಂದಿರುವ ಮಾಹಿತಿ ಪ್ರಕಾರ 36 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿ, ದೆಹಲಿ NCR ಹೊರತುಪಡಿಸಿ, ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಕಂಪನದ ಅನುಭವವಾಗಿದೆ. 

ಮಾಧ್ಯಮ ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ಸಿಲಿಗುರಿ, ಜಲ್ಪೈಗುರಿ, ಕೂಚ್ ಬೆಹಾರ್ ನಲ್ಲಿ ಮಂಗಳವಾರ ಬೆಳಗ್ಗೆ ಭೂಮಿ ಕಂಪಿಸಿದೆ. ಬಂಗಾಳದ ಸಿಲಿಗುರಿಯಲ್ಲಿ ಬೆಳಗ್ಗೆ 6:37ಕ್ಕೆ 15 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದರೆ, ಜಲ್ಪೈಗುರಿಯಲ್ಲಿ ಬೆಳಗ್ಗೆ 6.35ಕ್ಕೆ ಭೂಕಂಪದ ಅನುಭವವಾಗಿದೆ. ಬಂಗಾಳದ ಹೊರತಾಗಿ, ಬಿಹಾರದ ರಾಜಧಾನಿ ಪಾಟ್ನಾ ಮತ್ತು ಇತರ ಕೆಲವು ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌.. ಜನವರಿ 10 ರಿಂದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಈ ರಾಜ್ಯದ ಸರ್ಕಾರ: ಕಾರಣವೇನು?

ಜನರು ಮಲಗಿದ್ದಾಗ ಅಥವಾ ಇನ್ನೇನು ಮುಂಜಾನೆ ನಿದ್ದೆಯಿಂದ ಎದ್ದೇಳಬೇಕು ಎನ್ನುವಷ್ಟರಲ್ಲಿ ಭೂಮಿ ನಡುಗಿದೆ. ಭೂಮಿ ನಡುಗುತ್ತಿರುವ ಅನುಭವವಾಗುತ್ತಿದ್ದ ಹಾಗೆ ಜನರು ಇದ್ದಕ್ಕಿದ್ದಂತೆ ಮನೆಗಳಿಂದ ಹೊರ ಬಂದಿದ್ದಾರೆ. ಇದರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 

ಈ ಹಿಂದೆ ಕೂಡಾ ಜನವರಿ 7 ರಂದು ಭಯಾನಕ ಭೂಕಂಪ ಸಂಭವಿಸಿತ್ತು. 1994 ರಲ್ಲಿ ಅಮೆರಿಕ ಮತ್ತು 1995 ರಲ್ಲಿ ಜಪಾನ್ ಮಲ್ಲಿ ಭೂಕಂಪನವಾಗಿತ್ತು.   20 ವರ್ಷಗಳ ಹಿಂದೆ ಜಪಾನ್‌ನಲ್ಲಿ ಸಂಭವಿಸಿದ ಈ ಭೂಕಂಪದಲ್ಲಿ 6000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. 1994 ರಲ್ಲಿ ಇದೇ ದಿನ, ನಾರ್ತ್‌ರಿಡ್ಜ್ ಭೂಕಂಪವು ಲಾಸ್ ಏಂಜಲೀಸ್ ಅನ್ನು ನಡುಗಿಸಿತ್ತು. 6.7 ತೀವ್ರತೆಯ ಭೂಕಂಪದಲ್ಲಿ 57 ಜನರು ಸಾವನ್ನಪ್ಪಿದ್ದರು. ಇದಲ್ಲದೆ, 9000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News