ಆಫ್ಘಾನಿಸ್ತಾನದಲ್ಲಿ ಎಲ್ಲವೂ ಸರಿಯಾಗಿದೆ ಎಂದ ISI ಮುಖ್ಯಸ್ಥನ ವರ್ಗಾವಣೆ ; PAK ಸೇನೆಯ ಆಶ್ಚರ್ಯಕರ ನಡೆ

ಫೈಜ್ ಹಮೀದ್ ವರ್ಗಾವಣೆಯ ನಂತರ, ಲೆಫ್ಟಿನೆಂಟ್ ಜನರಲ್ ನದೀಮ್ ಅಹ್ಮದ್ ಅಂಜುಮ್ ಅವರನ್ನು ಹೊಸ  ISI ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

Written by - Ranjitha R K | Last Updated : Oct 6, 2021, 07:06 PM IST
  • ಹಮೀದ್, ಜನರಲ್ ಬಾಜ್ವಾ ನಿಕಟವರ್ತಿ
  • ಹಮೀದ್ ತೆರೆಮರೆಯ ನಾಯಕತ್ವದಲ್ಲಿ "ಆಪರೇಷನ್ ಅಫ್ಘಾನಿಸ್ತಾನ'
  • ನದೀಮ್ ಅಹ್ಮದ್ ಅಂಜುಮ್ ಹೊಸ ಐಎಸ್‌ಐ ಮುಖ್ಯಸ್ಥ
ಆಫ್ಘಾನಿಸ್ತಾನದಲ್ಲಿ ಎಲ್ಲವೂ ಸರಿಯಾಗಿದೆ ಎಂದ ISI ಮುಖ್ಯಸ್ಥನ ವರ್ಗಾವಣೆ ; PAK ಸೇನೆಯ ಆಶ್ಚರ್ಯಕರ ನಡೆ   title=
ನದೀಮ್ ಅಹ್ಮದ್ ಅಂಜುಮ್ ಹೊಸ ಐಎಸ್‌ಐ ಮುಖ್ಯಸ್ಥ (file photo)

ಇಸ್ಲಾಮಾಬಾದ್: ಅಚ್ಚರಿಯ ಹೆಜ್ಜೆ ಇಟ್ಟ ಪಾಕಿಸ್ತಾನದ ಸೇನೆಯು ತನ್ನ ಪ್ರಬಲ ISI ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ (Faiz Hameed) ಅವರನ್ನು ವರ್ಗಾವಣೆ ಮಾಡಿದೆ. ಅವರನ್ನು ಐಎಸ್‌ಐ ಮುಖ್ಯಸ್ಥ ಹುದ್ದೆಯಿಂದ ಪೇಶಾವರ್ ಕಾರ್ಪ್ಸ್ ಕಮಾಂಡರ್ ಆಗಿ ವರ್ಗಾಯಿಸಲಾಗಿದೆ. 

ನದೀಮ್ ಅಹ್ಮದ್ ಅಂಜುಮ್ ಹೊಸ ಐಎಸ್‌ಐ  ಮುಖ್ಯಸ್ಥ :
ಫೈಜ್ ಹಮೀದ್ (Faiz Hameed) ವರ್ಗಾವಣೆಯ ನಂತರ, ಲೆಫ್ಟಿನೆಂಟ್ ಜನರಲ್ ನದೀಮ್ ಅಹ್ಮದ್ ಅಂಜುಮ್ (Nadeem Ahmed Anjum) ಅವರನ್ನು ಹೊಸ  ISI ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಜವಾಬ್ದಾರಿಯನ್ನು  ಜೂನ್ 16, 2019 ರಂದು  ವಹಿಸಲಾಗಿತ್ತು. ಐಎಸ್‌ಐ ಮುಖ್ಯಸ್ಥರಾಗುವ ಮುನ್ನ, ಅವರು ಅದರಲ್ಲಿ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. 

ಇದನ್ನೂ ಓದಿ : Nobel Prize 2021 In Chemistry: ಬೆಂಜಮಿನ್ ಲಿಸ್ಟ್ ಹಾಗೂ ಡೇವಿಡ್ ಡಬ್ಲ್ಯೂಸಿ ಮ್ಯಾಕ್ ಮಿಲನ್ ಗೆ ರಸಾಯನ ಶಾಸ್ತ್ರದ ನೊಬೆಲ್ ಗರಿ

ಪಾಕಿಸ್ತಾನ ಸೇನೆಯು (Pak Army) ಬುಧವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಇನ್ನೂ ಎರಡು ಹಿರಿಯ ಮಟ್ಟದ ನೇಮಕಾತಿಗಳನ್ನು ಘೋಷಿಸಲಾಗಿದೆ. ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಮೀರ್ (Mohammad Amir) ಅವರನ್ನು ಗುಜ್ರಾನ್ ವಾಲಾ ಕಾರ್ಪ್ಸ್ ಕಮಾಂಡರ್ ಆಗಿ ನೇಮಿಸಲಾಗಿದೆ. ಮತ್ತೊಂದೆಡೆ, ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಅವರಿಗೆ ಕ್ವಾರ್ಟರ್‌ಮಾಸ್ಟರ್ ಜನರಲ್ ಆಗಿ ಜವಾಬ್ದಾರಿ ನೀಡಲಾಗಿದೆ. 

ಹಮೀದ್ ಜನರಲ್ ಬಾಜ್ವಾ ಅವರ ನಿಕಟವರ್ತಿ :
ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಪಾಕಿಸ್ತಾನದ (Pakistan) ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರ ನಿಕಟವರ್ತಿ ಎನ್ನಲಾಗಿದೆ. ಪಾಕಿಸ್ತಾನವನ್ನು ಆಂತರಿಕ ಮತ್ತು ಬಾಹ್ಯ ವ್ಯವಹಾರಗಳಲ್ಲಿ ಬಿಕ್ಕಟ್ಟು ಆವರಿಸಿದ್ದ ಸಮಯದಲ್ಲಿ ಅವರನ್ನು ಐಎಸ್‌ಐ (ISI)ಜವಾಬ್ದಾರಿ ನೀಡಲಾಗಿತ್ತು. ಅವರ ತೆರೆಮರೆಯ ನಾಯಕತ್ವದಲ್ಲಿಯೇ, 'ಆಪರೇಷನ್ ಅಫ್ಘಾನಿಸ್ತಾನ'ವನ್ನು ನಡೆಸಲಾಯಿತು. ಈ ಕಾರಣದಿಂದಾಗಿ ತಾಲಿಬಾನ್ (taliban) ಆಶ್ಚರ್ಯಕರವಾಗಿ ಆಗಸ್ಟ್ ತಿಂಗಳಲ್ಲಿ ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿತು. ಪಂಜ್‌ಶಿರ್ ಕಣಿವೆಯ ಬಂಡುಕೋರರು ಇದನ್ನು ವಿರೋಧಿಸಿದ್ದರೂ,  ಪಾಕಿಸ್ತಾನದ ಸೇನೆಯು ಡ್ರೋನ್‌ಗಳನ್ನು ಕಳುಹಿಸಿ, ಅವರನ್ನು ಹಿಮ್ಮೆಟ್ಟುವಂತೆ ಮಾಡಿತ್ತು. 

ಇದನ್ನೂ  ಓದಿ : Britain's Home Secretary Priti Patel: 'ಸೇವೆಯ' ಬಗ್ಗೆ ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿಕೆ ಕೇಳಿದರೆ ನೀವೂ ಹೆಮ್ಮೆ ಪಡುತ್ತೀರಿ

'ಆಪರೇಷನ್ ಅಫ್ಘಾನಿಸ್ತಾನ' :
ಫೈಜ್ ಹಮೀದ್ ಸೆಪ್ಟೆಂಬರ್‌ನಲ್ಲಿ ಕಾಬೂಲ್‌ಗೆ (Kabul) ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಕೈಯಲ್ಲಿ ಚಹಾ ಕಪ್ ಹಿಡಿದಿರುವ ಚಿತ್ರ ವೈರಲ್ ಆಗಿತ್ತು. ನಂತರ ಅವರು ಅಫ್ಘಾನಿಸ್ತಾನದಲ್ಲಿ (Afghanistan) ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದರು.  ಮೂಲಗಳ ಪ್ರಕಾರ, ಅವರು ತಾಲಿಬಾನ್‌ನಲ್ಲಿ ಸರ್ಕಾರ ರಚನೆ ಕುರಿತು ನಡೆಯುತ್ತಿರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಅಲ್ಲಿಗೆ ಹೋಗಿದ್ದರು ಎನ್ನಲಾಗಿದೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News