ಇಂದು ವಿಶ್ವ ಮಾನವ ಹಕ್ಕುಗಳ ದಿನ

     

Last Updated : Dec 10, 2017, 12:19 PM IST
ಇಂದು ವಿಶ್ವ ಮಾನವ ಹಕ್ಕುಗಳ  ದಿನ  title=

ಜನರ ಹಕ್ಕುಗಳನ್ನು ನಿರಾಕರಿಸಿದರೆ ಅದು ಅವರ ಮನುಷ್ಯತ್ವವನ್ನೇ ತಿರಸ್ಕರಿಸಿದಂತೆ - ನೆಲ್ಸನ್ ಮಂಡೇಲಾ

ಇವು ದಕ್ಷಿಣ ಆಫ್ರಿಕಾದ ಗಾಂಧಿ ಎಂದೇ ಖ್ಯಾತಿಯಾಗಿರುವ ನೆಲ್ಸನ್ ಮಂಡೇಲಾ ಮಾನವ ಹಕ್ಕುಗಳ ಕುರಿತಾಗಿ ಹೇಳಿದ ಮಾತುಗಳು. ಹೌದು, ಮಂಡೇಲಾ ಆಫ್ರಿಕಾದಲ್ಲಿ ನ ಕಪ್ಪು ಜನರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದರು. ಭಾರತದಲ್ಲಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ಮಾಡಿದರು.ಹೀಗೆ ಜಗತ್ತಿನ ವಿವಿಧ ಭಾಗಗಳಲ್ಲಿ ಹಲವಾರು ಮಹನೀಯರು ಮಾನವ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿದ್ದಾರೆ.ಈಗ ಇಂತಹ ಮಾನವ ಹಕ್ಕುಗಳ ಬಗ್ಗೆ ವಿಶ್ವ ಮಾನವ ಹಕ್ಕು ದಿನದಂದು  ಸ್ಮರಿಸುವುದು ನಮ್ಮೆಲರ ಕರ್ತವ್ಯ.

1948  ಡಿಸೆಂಬರ್ 10 ರಿಂದ ವಿಶ್ವ ಮಾನವ ಹಕ್ಕು ದಿನವನ್ನು ವಿಶ್ವಸಂಸ್ಥೆಯ ಮೂಲಕ ಜಗತ್ತಿನಲ್ಲೆಡೆ ಆಚರಿಸಲಾಗುತ್ತದೆ.1948 ರ ಈ ದಿನದಂದು ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟಣೆಯನ್ನು ಹೊರಡಿಸಿತು ಈ ಪ್ರಕಟಣೆಯ ಪ್ರಸ್ತಾವನೆಯಲ್ಲಿ  ಮಾನವ ಹಕ್ಕುಗಳ ಮಹತ್ವದ ಬಗ್ಗೆ ಪ್ರಸ್ತಾಪಿಸುತ್ತಾ "ಎಲ್ಲಾ  ಜನಗಳಿಗೂ ಎಲ್ಲಾ  ಕಾರ್ಯ ಸಿದ್ದಿಯ ಸಾಮಾನ್ಯ ಪ್ರಮಾಣವೆಂದು, ಕೊನೆಯವರೆಗೂ ಪ್ರತಿ ವ್ಯಕ್ತಿಯು, ಸಮಾಜದ ಪ್ರತಿ ಅಂಗವು  ಈ ಹಕ್ಕುಗಳನ್ನು  ಸ್ವಾತಂತ್ರ್ಯಗಳನ್ನು  ಗೌರವಿಸುವುದನ್ನು  ಅಭಿವೃದ್ದಿಗೊಳಿಸಲು ಪ್ರಯತ್ನಿಸಬೇಕೆಂದು ಸದಸ್ಯ ರಾಷ್ಟ್ರಗಳ ಪ್ರಜೆಗಳಲ್ಲಿಯೂ, ಅವುಗಳ ಅಧಿಪತ್ಯಕ್ಕೆ ಒಳಪಟ್ಟ ರಾಷ್ಟ್ರಗಳ ಪ್ರಜೆಗಳಲ್ಲಿಯೂ,  ರಾಷ್ಟ್ರದ ಮತ್ತು ಅಂತರಾಷ್ಟ್ರೀಯ ಪ್ರಗತಿಶೀಲವಾದ ಸಾಧನಗಳಿಂದ ಈ ಹಕ್ಕು ಸ್ವಾತಂತ್ರ್ಯಗಳ ಸಾರ್ವತ್ರಿಕವೂ ಫಲದಾಯಕವು ಆದ ಅಂಗಿಕಾರವನ್ನು ಅನುಷ್ಠಾನವನ್ನೂ ಪಡೆಯಬೇಕೆಂದು ಈಗ ಸಾರ್ವಜನಿಕ ಸಭೆಯು ಪ್ರಕಟಿಸುತ್ತದೆ" ಎಂದು ವಿಶ್ವಸಂಸ್ಥೆ 70 ವರ್ಷಗಳ ಹಿಂದೆ ಘೋಷಿಸಿತು.

ವಿಶ್ವ ಸಂಸ್ಥೆಯ ಈ ಘೋಷಣೆಗಳು ,ಮುಖ್ಯವಾಗಿ ವರ್ಣ, ಧರ್ಮ, ಲಿಂಗ, ಭಾಷೆ, ಅಂತಸ್ತು, ಸಾಮಾಜಿಕ ಹಿನ್ನಲೆ ಹಾಗೂ ರಾಷ್ಟ್ರೀಯತೆ,ಹೀಗೆ ವಿವಿಧ ಅಂಶಗಳ ಹಿನ್ನಲೆಯಲ್ಲಿ ಜಗತ್ತಿನಲ್ಲೆಡೆ ನಡೆಯುವ ತಾರತಮ್ಯಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ ಈ ಘೋಷಣೆಗಳು ಪ್ರಮುಖ ಪಾತ್ರವಹಿಸುತ್ತಾ ಬಂದಿವೆ. ಅಲ್ಲದೆ 70 ವರ್ಷಗಳ ಹಿಂದೆ ಘೋಷಿಸಲ್ಪಟ್ಟಿರುವ ಈ ಘೋಷಣೆಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ ಎನ್ನುವುದು ಗಮನಾರ್ಹವಾದುದು.

Trending News