Third World War Possibility: ರಷ್ಯಾ ಜೊತೆ ಸೇರಿ ಯುದ್ಧಕ್ಕೆ ಮುಂದಾದ ಬೆಲಾರೂಸ್, ಉಕ್ರೇನ್ ಜೊತೆ ಕೈಜೋಡಿಸಿದ Latvia

Ukraine Russia War: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಮುಂಬರುವ ದಿನಗಳಲ್ಲಿ ವಿಶ್ವಯುದ್ಧವಾಗಿ ಬದಲಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸೋಮವಾರ, ಬೆಲಾರೂಸ್ (Belarus) ರಷ್ಯಾದ ಪಡೆಗಳೊಂದಿಗೆ ಯುದ್ಧಕ್ಕೆ ಸೇರುವ ಕುರಿತು ಮಾತನಾಡಿದೆ, ಆದರೆ ಉಕ್ರೇನ್ ಲಾಟ್ವಿಯಾದ (Latvia)  ಬೆಂಬಲ ಪಡೆಯುತ್ತಿದೆ. 

Written by - Nitin Tabib | Last Updated : Feb 28, 2022, 02:51 PM IST
  • ಹೆಚ್ಚಾದ ಮೂರನೇ ಮಹಾಯುದ್ಧದ ಆತಂಕ
  • ರಷ್ಯಾಪಡೆಗಳ ಜೊತೆ ಬೆಲಾರೂಸ್ ಪಡೆಗಳು ಸೇರಿದರೆ
  • ಉಕ್ರೈನ್ ಪಡೆಗಳ ಸಹಾಯಕ್ಕೆ ಧಾವಿಸಲಿದೆ ಲಾಟ್ವಿಯಾ
Third World War Possibility: ರಷ್ಯಾ ಜೊತೆ ಸೇರಿ ಯುದ್ಧಕ್ಕೆ ಮುಂದಾದ ಬೆಲಾರೂಸ್, ಉಕ್ರೇನ್ ಜೊತೆ ಕೈಜೋಡಿಸಿದ Latvia title=
Third World War Possibility (File Photo)

Ukraine Russia War: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಮುಂಬರುವ ದಿನಗಳಲ್ಲಿ ವಿಶ್ವಯುದ್ಧವಾಗಿ (Third World War) ಬದಲಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸೋಮವಾರ, ಬೆಲಾರೂಸ್ (Belarus) ರಷ್ಯಾದ ಪಡೆಗಳೊಂದಿಗೆ ಯುದ್ಧಕ್ಕೆ ಸೇರುವ ಕುರಿತು ಮಾತನಾಡಿದೆ, ಆದರೆ ಉಕ್ರೇನ್ ಲಾಟ್ವಿಯಾದ (Latvia)  ಬೆಂಬಲ ಪಡೆಯುತ್ತಿದೆ. ಲಾಟ್ವಿಯಾದ ಸಂಸತ್ತು ಅವಿರೋಧವಾಗಿ ಈ ನಿರ್ಣಯವನ್ನು ಅಂಗೀಕರಿಸಿದೆ, ಅದರ ನಾಗರಿಕರು ಉಕ್ರೇನ್ ಯುದ್ಧಕ್ಕೆ ಹೋಗಲು, ಸಹಾಯ ಮಾಡಲು ಬಯಸಿದರೆ, ಅವರಿಗೆ ಹಾಗೆ ಮಾಡಲು ಅವಕಾಶವಿದೆ ಎಂದು ಅದು ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಲಾಟ್ವಿಯಾ ಸಂಸತ್ತಿನ ರಕ್ಷಣಾ, ಗೃಹ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಜೂರಿಸ್ ರಾಂಕನಿಸ್  "ಉಕ್ರೇನ್‌ಗೆ ಸಹಾಯ ಮಾಡಲು ಬಯಸುವ ಮತ್ತು ಉಕ್ರೇನ್‌ನ ಸ್ವಾತಂತ್ರ್ಯವನ್ನು ರಕ್ಷಿಸಲು ಸ್ವಯಂಸೇವಕರಾಗಿ ಕೆಲಸ ಮಾಡಲು ಬಯಸುವ ನಮ್ಮ ನಾಗರಿಕರು. ಅವರು ಅದನ್ನು ಮಾಡಬಹುದು' ಎಂದು ಹೇಳಿದ್ದಾರೆ.

ಇದನ್ನೂ ಓದಿ-ಬಾಂಬ್ ದಾಳಿ.. ಮನೆ ಸ್ವಚ್ಛಗೊಳಿಸುವಾಗ ಅಳುತ್ತ ರಾಷ್ಟ್ರಗೀತೆ ಹಾಡಿದ ಮಹಿಳೆಯ ವಿಡಿಯೋ ವೈರಲ್

ಲಾಟ್ವಿಯಾ ನ್ಯಾಟೋ ಸಂಘಟನೆಯ ಭಾಗವಾಗಿತ್ತು ಮತ್ತು ಒಂದು ಸಮಯದಲ್ಲಿ ಸೋವಿಯತ್ ಒಕ್ಕೂಟದ ಭಾಗ ಕೂಡ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ, ಲಾಟ್ವಿಯಾದ  ಘೋಷಣೆ ಪ್ರಾಮುಖ್ಯತೆ ಪಡೆದುಕೊಂಡಿದೆ ಮತ್ತು ರಷ್ಯಾದಿಂದ ಲಾಟ್ವಿಯಾದಲ್ಲಿ ಯಾವುದೇ ರೀತಿಯ ದಾಳಿ ನಡೆದರೆ, ನ್ಯಾಟೋ ದೇಶಗಳು ಸಹ ಯುದ್ಧಕ್ಕೆ ಬರುವ ಸಾಧ್ಯತೆ ಇದೆ. ಎಲ್ಲವು ಇದೆ ರೀತಿ ಮುಂದುವರೆದರೆ ಮೂರನೇ ಮಹಾಯುದ್ಧ ಆರಂಭವಾದಂತೆ ಎಂಬುದು ತಜ್ಞರ ಅಭಿಮತ. ಉಕ್ರೇನ್ ಮತ್ತು ರಷ್ಯಾ ನಡುವಿನ ಐದು ದಿನಗಳ ಯುದ್ಧವು ಇದುವರೆಗೆ ಉಭಯ ದೇಶಗಳ ನಡುವೆ ಮಾತ್ರ ಸೀಮಿತವಾಗಿತ್ತು, ಆದರೆ ಬೆಲಾರಸ್ ಮತ್ತು ಲಾಟ್ವಿಯಾ ಘೋಷಣೆಗಳು ಈ ಕಳವಳವನ್ನು ಹೆಚ್ಚಿಸಿದೆ. ಏತನ್ಮಧ್ಯೆ, ಉಕ್ರೇನ್‌ನಲ್ಲಿ ಜನರು ವೇಗವಾಗಿ ವಲಸೆ ಹೋಗುತ್ತಿದ್ದಾರೆ. ಜನರು ತಮ್ಮ ಮನೆಗಳನ್ನು ತೊರೆದು ಪೋಲೆಂಡ್, ಹಂಗೇರಿಯಂತಹ ದೇಶಗಳಿಗೆ ತೆರಳುತ್ತಿದ್ದಾರೆ. ಇಲ್ಲಿಯವರೆಗೆ 3.5 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.

ಇದನ್ನೂ ಓದಿ-ಪರಮಾಣು ನಿರೋಧಕ ಪಡೆಗಳಿಗೆ ಹೈಅಲರ್ಟ್ ನಲ್ಲಿರಲು ಸೂಚಿಸಿದ ಪುಟಿನ್..!

Operation Ganga ತೀವ್ರಗೊಳಿಸಿದ ಭಾರತ, ಉಕ್ರೇನ್ ನೆರೆರಾಷ್ಟ್ರಕ್ಕೆ 4 ಸಚಿವರುಗಳ ದೌಡು
ಈ ಮಧ್ಯೆ, ಒಂದು ದೊಡ್ಡ ಭರವಸೆ ಹುಟ್ಟಿಕೊಂಡಿದೆ. ರಷ್ಯಾ ಮತ್ತು ಉಕ್ರೇನ್ ನಿಯೋಗಗಳ ನಡುವೆ ಬೆಲಾರಸ್‌ನಲ್ಲಿ ಮಧ್ಯಾಹ್ನ 3:30 ಕ್ಕೆ ಮಾತುಕತೆ ನಡೆಯಲಿದೆ. ಈ ಬಿಕ್ಕಟ್ಟಿನ ಮಧ್ಯೆ, ಭಾರತವು ತನ್ನ ನಾಗರಿಕರನ್ನು ಸ್ಥಳಾಂತರಿಸುವ ಎಲ್ಲಾ ಪ್ರಯತ್ನಗಳನ್ನು ಹೆಚ್ಚಿಸಿದೆ. ಭಾರತ ಸರ್ಕಾರವು ವಿದ್ಯಾರ್ಥಿಗಳು ಮತ್ತು ಇತರರನ್ನು ಸ್ಥಳಾಂತರಿಸಲು ಆಪರೇಷನ್ ಗಂಗಾ ಆರಂಭಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ  ನಾಲ್ವರು ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಹರ್ದೀಪ್ ಸಿಂಗ್ ಪುರಿ, ವಿಕೆ ಸಿಂಗ್ ಮತ್ತು ಕಿರಣ್ ರಿಜಿಜು  ಉಕ್ರೇನ್ ನೆರೆಯ ದೇಶಗಳಿಗೆ ತೆರಳಿ ಭಾರತೀಯರನ್ನು ತೊರೆಯಲು ಸಹಾಯ ಮಾಡಲಿದ್ದಾರೆ. ಹರ್ದೀಪ್ ಸಿಂಗ್ ಪುರಿ ಹಂಗೇರಿಗೆ ತೆರಳಲಿದ್ದಾರೆ. ಇದಲ್ಲದೇ ವಿಕೆ ಸಿಂಗ್ ಪೋಲೆಂಡ್ ಗೆ ತೆರಳುತ್ತಿದ್ದಾರೆ. ಕಿರಣ್ ರಿಜಿಜು ಅವರನ್ನು ಸ್ಲೋವಾಕಿಯಾಗೆ ಕಳುಹಿಸಲಾಗುತ್ತಿದ್ದು, ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾಗೆ ತೆರಳಲಿದ್ದಾರೆ.

ಇದನ್ನೂ ಓದಿ-Russia Ukraine War: ಅಂತರಾಷ್ಟ್ರೀಯ ಕೋರ್ಟ್ ಗೆ ಮೊರೆ ಹೋದ ಉಕ್ರೇನ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News