ಮಾಸ್ಕೋ: ಶನಿವಾರದಂದು ಕ್ರೈಮಿಯಾದಿಂದ ರಷ್ಯಾದೊಂದಿಗೆ ಸಂಪರ್ಕಿಸುವ ಸೇತುವೆಯ ಮೇಲೆ ಟ್ರಕ್ ಬಾಂಬ್ ಸಿಡಿಸಿದ ಪರಿಣಾಮವಾಗಿ ಸೇತುವೆಯ ಒಂದು ಭಾಗದ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ 70 ವರ್ಷ ತುಂಬಿದ ಒಂದು ದಿನದ ನಂತರ ಸೇತುವೆಯ ಮೇಲಿನ ದಾಳಿಯು ಅವರಿಗೆ ಹಿನ್ನೆಡೆಯಾಗಿದೆ.ಇದರ ಪರಿಣಾಮವಾಗಿ ಸೇತುವೆಯ ಎರಡು ಭಾಗಗಳ ಭಾಗಶಃ ಕುಸಿತ ಸಂಭವಿಸಿದೆ.
🚨 Explosion on the #Kerch bridge which connects Russia to Crimea. Part of structure has collapsed. pic.twitter.com/wOntlXUvUh
— Igor Sushko (@igorsushko) October 8, 2022
ಕ್ರಿಮಿಯನ್ ಪೆನಿನ್ಸುಲಾವು ರಷ್ಯಾಕ್ಕೆ ಸಾಂಕೇತಿಕ ಮೌಲ್ಯವನ್ನು ಹೊಂದಿದೆ ಮತ್ತು ದಕ್ಷಿಣದಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ಪ್ರಮುಖವಾಗಿದೆ. ಸೇತುವೆಯನ್ನು ನಿಷ್ಕ್ರಿಯಗೊಳಿಸಿದರೆ, ಪರ್ಯಾಯ ದ್ವೀಪಕ್ಕೆ ಸರಬರಾಜನ್ನು ಸಾಗಿಸಲು ಕಷ್ಟಕರ ಎನ್ನಲಾಗುತ್ತಿದೆ.
ಆಕ್ರಮಣದ ಸಮಯದಲ್ಲಿ ರಷ್ಯಾವು ಕ್ರೈಮಿಯಾದ ಉತ್ತರದ ಪ್ರದೇಶಗಳನ್ನು ವಶಪಡಿಸಿಕೊಂಡಾಗ ಮತ್ತು ಅಜೋವ್ ಸಮುದ್ರದ ಉದ್ದಕ್ಕೂ ಭೂ ಕಾರಿಡಾರ್ ಅನ್ನು ನಿರ್ಮಿಸಿದರೆ, ಉಕ್ರೇನ್ ಅವುಗಳನ್ನು ಮರುಪಡೆಯಲು ಪ್ರತಿದಾಳಿ ನಡೆಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.