Afghanistan: ತಾಲಿಬಾನ್ ಇಂದು ಹೊಸ ಅಫ್ಘಾನಿಸ್ತಾನ ಸರ್ಕಾರವನ್ನು ಘೋಷಿಸುವ ನಿರೀಕ್ಷೆ

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ತಾಲಿಬಾನ್ ಇಂದು ಅಫ್ಘಾನಿಸ್ತಾನದ ಹೊಸ ಇಸ್ಲಾಮಿಕ್ ಸರ್ಕಾರವನ್ನು ಅನಾವರಣಗೊಳಿಸುತ್ತದೆ.   

Written by - Zee Kannada News Desk | Last Updated : Sep 3, 2021, 08:45 AM IST
  • ಅಫ್ಘಾನಿಸ್ತಾನದಲ್ಲಿ ಸೆಪ್ಟೆಂಬರ್ 3 ಶುಕ್ರವಾರ ತಾಲಿಬಾನ್ ಹೊಸ ಸರ್ಕಾರವನ್ನು ಅನಾವರಣಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ
  • ಶೇಖ್ ಹೈಬತುಲ್ಲಾ ಅಖುಂಡಜಾದ ಅವರು ಹೊಸ ಸರ್ಕಾರದ ಸರ್ವೋಚ್ಚ ಅಧಿಕಾರಿಯಾಗಿರುತ್ತಾರೆ ಎನ್ನಲಾಗಿದೆ
  • ಸಮಾರಂಭಗಳನ್ನು ರಾಷ್ಟ್ರಪತಿ ಭವನದಲ್ಲಿ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ
Afghanistan: ತಾಲಿಬಾನ್ ಇಂದು ಹೊಸ ಅಫ್ಘಾನಿಸ್ತಾನ ಸರ್ಕಾರವನ್ನು ಘೋಷಿಸುವ ನಿರೀಕ್ಷೆ title=
Afghanistan government

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸೆಪ್ಟೆಂಬರ್ 3 ಶುಕ್ರವಾರ ತಾಲಿಬಾನ್ ಹೊಸ ಸರ್ಕಾರವನ್ನು ಅನಾವರಣಗೊಳಿಸಲಿದೆ ಎಂದು ವರದಿಗಳು ತಿಳಿಸಿವೆ. ಹೊಸ ಇಸ್ಲಾಮಿಕ್ ಸರ್ಕಾರಕ್ಕೆ ಸಂಬಂಧಿಸಿದಂತೆ ಇಲ್ಲಿದೆ ಪ್ರಮುಖ ಮಾಹಿತಿ.

ಶೇಖ್ ಹೈಬತುಲ್ಲಾ ಅಖುಂಡಜಾದ (Sheikh Haibatullah Akhundzada) ಅವರು ಹೊಸ ಸರ್ಕಾರದ ಸರ್ವೋಚ್ಚ ಅಧಿಕಾರಿಯಾಗಿರುತ್ತಾರೆ. ಈ ಹಿಂದೆ, ತಾಲಿಬಾನ್‌ನ ಸಾಂಸ್ಕೃತಿಕ ಆಯೋಗದ ಸದಸ್ಯರಾದ ಅನಾಮುಲ್ಲಾ ಸಮಂಗಾನಿ, ನಾವು ಘೋಷಿಸುವ ಇಸ್ಲಾಮಿಕ್ ಸರ್ಕಾರವು ಜನರಿಗೆ ಮಾದರಿಯಾಗಲಿದೆ. ನಂಬಿಕಸ್ಥರ ಕಮಾಂಡರ್ (ಅಖುಂಜದ) ಇರುವಲ್ಲಿ ಯಾವುದೇ ಸಂದೇಹವಿಲ್ಲ. ಅವರು ಸರ್ಕಾರದ ನಾಯಕನಾಗುತ್ತಾರೆ ಎಂದಿದ್ದರು.

ಇದನ್ನೂ ಓದಿ- 'ಅಫ್ಘಾನ್ ವಾಯುನೆಲೆಯನ್ನು ಸ್ವಾಧೀನಪಡಿಸಿಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ'

ತಾಲಿಬಾನ್ (Taliban) ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅವರನ್ನು ಅಫ್ಘಾನಿಸ್ತಾನದ ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಅವರು ದಿನನಿತ್ಯದ ವ್ಯವಹಾರಗಳ ಉಸ್ತುವಾರಿ ವಹಿಸುವ ನಿರೀಕ್ಷೆಯಿದೆ. 

ಅಲ್ಲದೆ, ಸಿರಾಜುದ್ದೀನ್ ಹಕ್ಕಾನಿ (Sirajuddin Haqqani) ಪ್ರಭಾವಿ ಕಾರ್ಯಾಚರಣೆಯ ನಾಯಕ ಮತ್ತು ತಾಲಿಬಾನ್ ಚಳವಳಿಯ ಸಂಸ್ಥಾಪಕ ಮುಲ್ಲಾ ಮುಹಮ್ಮದ್ ಒಮರ್ ಅವರ ಮಗನಾದ ಮೌಲವಿ ಮುಹಮ್ಮದ್ ಯಾಕೂಬ್ ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡುವ ನಿರೀಕ್ಷೆಯಿದೆ. 

ಇದನ್ನೂ ಓದಿ- ಶುಕ್ರವಾರದ ಪ್ರಾರ್ಥನೆ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ

ಸಮಾರಂಭಗಳನ್ನು ರಾಷ್ಟ್ರಪತಿ ಭವನದಲ್ಲಿ ನಡೆಸಲಾಗುವುದು ಎಂದು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಸಾಂಸ್ಕೃತಿಕ ಆಯೋಗದ ಮಲ್ಟಿಮೀಡಿಯಾ ಶಾಖೆಯ ಮುಖ್ಯಸ್ಥ ಅಹ್ಮದುಲ್ಲಾ ಮುತ್ತಕಿ ಹೇಳಿದರು. 

ಹೊಸ ಸರ್ಕಾರದ ರಚನೆಯ ಚರ್ಚೆಗಳು ಹೆಚ್ಚು ಕಡಿಮೆ ಅಂತಿಮವಾಗಿದ್ದರೂ, ವ್ಯವಸ್ಥೆಯ ಹೆಸರು, ರಾಷ್ಟ್ರಧ್ವಜ ಅಥವಾ ರಾಷ್ಟ್ರಗೀತೆಯಂತಹ ಇತರ ವಿವರಗಳು ನಡೆಯಬೇಕಿದೆ ಎಂದು ಟೊಲೊ ನ್ಯೂಸ್ ವರದಿ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News