ಒಐಸಿ ಸಮಾವೇಶದಲ್ಲಿ ಭಯೋತ್ಪಾಧನೆ ವಿರುದ್ಧ ಗುಡುಗಿದ ಸುಷ್ಮಾ, ಪಾಕ್ ಗೈರು

ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ) ಆಯೋಜಿಸಿದ್ದ  ವಿದೇಶಾಂಗ ಮಂತ್ರಿಗಳ ಎರಡು ದಿನಗಳ ಸಮಾವೇಶದಲ್ಲಿ  ಭಾಗವಹಿಸಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಭಾಷಣದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ವಿರುದ್ಧ ಗುಡುಗಿದರು. 

Last Updated : Mar 1, 2019, 02:33 PM IST
 ಒಐಸಿ ಸಮಾವೇಶದಲ್ಲಿ ಭಯೋತ್ಪಾಧನೆ ವಿರುದ್ಧ ಗುಡುಗಿದ ಸುಷ್ಮಾ, ಪಾಕ್ ಗೈರು   title=

ನವದೆಹಲಿ: ಇಸ್ಲಾಮಿಕ್ ಸಹಕಾರ ಸಂಸ್ಥೆ (ಒಐಸಿ) ಆಯೋಜಿಸಿದ್ದ  ವಿದೇಶಾಂಗ ಮಂತ್ರಿಗಳ ಎರಡು ದಿನಗಳ ಸಮಾವೇಶದಲ್ಲಿ  ಭಾಗವಹಿಸಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಭಾಷಣದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ವಿರುದ್ಧ ಗುಡುಗಿದರು. 

ಸಮಾವೇಶದಲ್ಲಿ ಮಾತನಾಡಿದ ಅವರು "ಭಯೋತ್ಪಾದನೆ ಮತ್ತು ಉಗ್ರಗಾಮಿತ್ವವು ವಿಭಿನ್ನ ಹೆಸರುಗಳು ಮತ್ತು ಲೇಬಲ್ಗಳನ್ನು ಹೊಂದುತ್ತದೆ.ಇದು ವೈವಿಧ್ಯಮಯ ಕಾರಣಗಳನ್ನು ಒಳಗೊಳ್ಳುತ್ತದೆ. ಆದರೆ ಪ್ರತಿಯೊಂದು ಪ್ರಕರಣದಲ್ಲಿ ಅದು ಧರ್ಮದ ವಿರೂಪತೆಯಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ಅವರು ಹೇಳಿದರು.ಈ ಸಮಾವೇಶದಲ್ಲಿ ಸುಷ್ಮಾ ಸ್ವರಾಜ್ 'ಗೌರವ ಅತಿಥಿ' ಆಗಿ ಭಾಗವಹಿಸಿದ್ದರು. ಸುಷ್ಮಾ ಅವರ ಹೇಳಿಕೆಯು ಪ್ರಮುಖವಾಗಿ ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ನಂತರ 40 ಸಿಆರ್ಪಿಎಫ್ ಸಿಬ್ಬಂದಿ ಮೃತಪಟ್ಟ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಭಂದ ಹದಗೆಟ್ಟಿತ್ತು, ಈ ಹಿನ್ನಲೆಯಲ್ಲಿ ಅವರ ಹೇಳಿಕೆ ಬಂದಿದೆ.

ಭಯೋತ್ಪಾದನೆ ವಿರುದ್ಧದ ಹೋರಾಟವು ಯಾವುದೇ ಧರ್ಮದ ವಿರುದ್ಧ ಘರ್ಷಣೆಯಲ್ಲ. ಇಸ್ಲಾಂ ಧರ್ಮ ಎಂದರೆ ಅದು ಅಕ್ಷರಶಃ ಶಾಂತಿ ಎಂದರ್ಥ,ಅಲ್ಲಾನ 99 ಹೆಸರುಗಳು ಯಾವ ಹೆಸರು ಗಳು ಕೂಡ ಹಿಂಸೆಯ ಪ್ರತಿಕವಲ್ಲ, ಅದೇ ರೀತಿಯಾಗಿ ವಿಶ್ವದ ಪ್ರತಿಯೊಂದು ಧರ್ಮವೂ ಶಾಂತಿ, ಸಹಾನುಭೂತಿ ಮತ್ತು ಸಹೋದರತ್ವಕ್ಕಾಗಿ ನಿಂತಿದೆ ' ಎಂದು ಅವರು ಹೇಳಿದರು.
ಒಂದೆಡೆ ಭಯೋತ್ಪಾಧನೆ ವಿರುದ್ಧ ಸುಷ್ಮಾ ಸ್ವರಾಜ್ ಗುಡುಗುತ್ತಿದ್ದರೇ ಇನ್ನೂಂದೆಡೆಗೆ ಪಾಕ್ ಈ ಸಮಾವೇಶಕ್ಕೆ ಗೈರು ಹಾಜರಿಯಾಗಿದ್ದು ಎದ್ದು ಕಾಣುತ್ತಿತ್ತು.
 

Trending News