ನವದೆಹಲಿ :ಭೂಕಂಪ ಹಾಗೂ ಸುನಾಮಿಗಳ ಕುರಿತು ಮುನ್ಸೂಚನೆ ನೀಡುವ ತಂತ್ರಜ್ಞಾನದ ಪ್ರಯೋಗ ಗೂಗಲ್ ಈ ಹಿಂದೆಯೇ ಆರಂಭಿಸಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಮುಖ್ಯಸ್ಥ ಸುಂದರ್ ಪಿಚೈ ಹೇಳಿದ್ದಾರೆ. ಇದಕ್ಕಾಗಿ ಕಂಪನಿಯುಸಮುದ್ರದೊಳಗೆ ಅಳವಧಿಸಲಾಗಿರುವ ಫೈಬರ್ ಕೇಬಲ್‌ಗಳನ್ನು ಬಳಸಲಿದೆ. ಈ ಕೇಬಲ್‌ಗಳನ್ನು ಸುನಾಮಿ ಮತ್ತು ಭೂಕಂಪಗಳು ಸಂಭವಿಸುವ ಮೊದಲು ಅವುಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿವೆ ಮತ್ತು ಅವುಗಳನ್ನು ಒಂದು ವಾರ್ನಿಂಗ್ ಸಿಸ್ಟಮ್ ಆಗಿ ಬಳಸಬಹುದು. ಈ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು 100 ಕಿ.ಮೀ.ವರೆಗಿನ ಪ್ರದೇಶದಲ್ಲಿ ಯಾವುದೇ ಚಲನೆಯನ್ನು ಗ್ರಹಿಸಲು ಬಳಸಲಾಗುತ್ತದೆ.
ಒಂದು ದೊಡ್ಡ ಪ್ರದೇಶವನ್ನು ಕವರ್ ಮಾಡಬಹುದಾದ ತಂತ್ರಜ್ಞಾನವೊಂದನ್ನು ಗೂಗಲ್ ಅಭವೃದ್ಧಿಗೊಳಿಸಿದೆ. ಗೂಗಲ್ ಪ್ರಕಾರ, ಇದು ಸಮುದ್ರದ ಮೇಲ್ಮೈ ಮೇಲಿರುವ ಯಾವುದೇ ಚಲನೆಯನ್ನು ಗುರಿತಿಸಲು, ಸಮುದ್ರದಲ್ಲಿ ಈಗಾಗಲೇ ಅಳವಧಿಸಳಗಿರುವ ಫೈಬರ್ ಕೇಬಲ್ ಗಳ ಬಳಕೆ ಮಾಡಲಿದೆ. ಈ ಕುರಿತು ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಕಂಪನಿ,
"ಮತ್ತಷ್ಟು ಉತ್ತಮವಾಗಿದೆ. ನಮ್ಮ ತಂತ್ರಜ್ಞಾನವು ವಿಶ್ವದ ಹೆಚ್ಚಿನ ಫೈಬರ್ ಆಪ್ಟಿಕ್ ವ್ಯವಸ್ಥೆಗಳನ್ನು ಹೊಂದಿರುವ ಸಾಧನಗಳ ಮೇಲೆ ಅವಲಂಬಿತವಾಗಿರುತ್ತದೆ, ಆದ್ದರಿಂದ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸಬಹುದು." ಎಂದು ಹೇಳಿದೆ.
ಗೂಗಲ್ ಪ್ರಕಾರ, ಈ ಆಪ್ಟಿಕ್ ಫೈಬರ್ಗಳು ಸಮುದ್ರದ ಮೇಲ್ಮೈ ಮೂಲಕ ವಿವಿಧ ಖಂಡಗಳನ್ನು ಜೋಡಿಸಬಲ್ಲವು. ಇದರ ಮೂಲಕ ಬಹುತೇಕ ಇಂಟರ್ನೆಟ್ ಸಂಚಾರ ನಡೆಸಲಾಗುತ್ತದೆ. "ಗೂಗಲ್ ಗ್ಲೋಬಲ್ ನೆಟ್ವರ್ಕ್ ಆಫ್ ಕೇಬಲ್ಗಳು ಸಮುದ್ರದ ಕೆಳಗೆ ಹಾಕಲ್ಪಟ್ಟಿದ್ದು, ಪ್ರಪಂಚದಾದ್ಯಂತ ಬೆಳಕಿನ ವೇಗದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲು, ಹುಡುಕಲು, ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿಸುತ್ತದೆ" ಎಂದು ಗೂಗಲ್ ತನ್ನ ಬ್ಲಾಗ್ ನಲ್ಲಿ ಹೇಳಿದೆ.
Is it possible to detect earthquakes with submarine cables? We think it might be.https://t.co/6oIZTxg1wk
— Sundar Pichai (@sundarpichai) July 16, 2020
ಕೇಬಲ್‌ಗಳು ಆಪ್ಟಿಕಲ್ ಫೈಬರ್‌ಗಳಿಂದ ಮಾಡಲ್ಪಟ್ಟಿದ್ದು, ಸೆಕೆಂಡಿಗೆ 204,190 ಕಿ.ಮೀ ವೇಗದಲ್ಲಿ ಡೇಟಾವನ್ನು 'ಲೈಟ್ ಪಲ್ಸ್' ಆಗಿ ಸಾಗಿಸುತ್ತವೆ. ಇವು ಎಲ್ಲಿ ತಲುಪುತ್ತವೆಯೋ ಅಲ್ಲಿ ಅವುಗಳ ನ್ಯೂನತೆಗಳನ್ನು ಸರಿಪಡಿಸಲು ಡಿಜಿಟಲ್ ಸಿಗ್ನಲ್ ಪ್ರೊಸೆಸರ್ ಅನ್ನು ಬಳಸಲಾಗುತ್ತದೆ. ಅವುಗಳನ್ನು ಆಪ್ಟಿಕಲ್ ಪ್ರಸರಣದ ಭಾಗವಾಗಿ ಪತ್ತೆ ಹಚ್ಚಿದಾಗ ಬೆಳಕು ಧ್ರುವೀಕರಣದ ಸ್ಥಿತಿಯಲ್ಲಿರುತ್ತದೆ (ಎಸ್‌ಒಪಿ). ಗೂಗಲ್ ಪ್ರಕಾರ, "ಕೇಬಲ್ನೊಂದಿಗಿನ ಯಾಂತ್ರಿಕ ಅಡೆತಡೆಗಳಿಗೆ ಪ್ರತಿಕ್ರಿಯೆಯಾಗಿ ಎಸ್ಒಪಿ ಬದಲಾವಣೆಗಳು ಸಂಭವಿಸುತ್ತವೆ, ಈ ಅಡೆತಡೆಗಳನ್ನು ಪತ್ತೆಹಚ್ಚುವುದರಿಂದ ಭೂಕಂಪನ ಚಲನೆಯನ್ನು ಕಂಡು ಹಿಡಿಯಲು ನಮಗೆ ಸಹಕಾರಿಯಾಗಲಿದೆ"
ಗೂಗಲ್ ಈ ಯೋಜನೆಯನ್ನು 2013 ರಲ್ಲಿ ಪ್ರಾರಂಭಿಸಿದೆ ಮತ್ತು 2019 ರಲ್ಲಿ ತನ್ನ ಮೊದಲ ಪ್ರಯೋಗವನ್ನು ಮಾಡಿದೆ. ಅಂದಿನಿಂದ, ಈ ತಂತ್ರಜ್ಞಾನವು ಈಗಾಗಲೇ ಮೆಕ್ಸಿಕೊ ಮತ್ತು ಚಿಲಿಯಲ್ಲಿ ಸೌಮ್ಯ ಭೂಕಂಪಗಳನ್ನು ಗುರುತಿಸಿದೆ. ಯಶಸ್ವಿಯಾಗಿ ಕಾರ್ಯಗತಗೊಳಿಸಿದರೆ, ಈ ತಂತ್ರಜ್ಞಾನವು ಲಕ್ಷಾಂತರ ಜನರ ಜೀವವನ್ನು ಉಳಿಸಲಿದೆ ಎಂದೇ ನೀರಿಕ್ಷಿಸಲಾಗುತ್ತಿದೆ.