Sri Lanka: ತ್ರಿಕೋನ ಸ್ಪರ್ಧೆಯಲ್ಲಿ ಶ್ರೀಲಂಕಾದ ನೂತನ ಅಧ್ಯಕ್ಷ ಯಾರಾಗ್ತಾರೆ?

Sri Lanka Presidential Election: ಶ್ರೀಲಂಕಾದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಶ್ರೀಲಂಕಾದ ಹೊಸ ಅಧ್ಯಕ್ಷರು ಯಾರು ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. 

Written by - Chetana Devarmani | Last Updated : Jul 20, 2022, 11:52 AM IST
  • ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾ
  • ಶ್ರೀಲಂಕಾದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆ
  • ತ್ರಿಕೋನ ಸ್ಪರ್ಧೆಯಲ್ಲಿ ಶ್ರೀಲಂಕಾದ ನೂತನ ಅಧ್ಯಕ್ಷ ಯಾರಾಗ್ತಾರೆ?
Sri Lanka: ತ್ರಿಕೋನ ಸ್ಪರ್ಧೆಯಲ್ಲಿ ಶ್ರೀಲಂಕಾದ ನೂತನ ಅಧ್ಯಕ್ಷ ಯಾರಾಗ್ತಾರೆ?  title=
ಶ್ರೀಲಂಕಾ

Sri Lanka Presidential Election: ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಇಂದು ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಯುತ್ತಿದೆ. ಮತದಾನ ಆರಂಭವಾಗಿದೆ. ಸ್ಪೀಕರ್ ಮೊದಲ ಮತ ಮತ್ತು ರಾನಿಲ್ ವಿಕ್ರಮಸಿಂಘೆ ಎರಡನೇ ಮತ ಚಲಾಯಿಸಿದ್ದಾರೆ. ಪ್ರಧಾನಿ ಹುದ್ದೆಯಿಂದ ಹಂಗಾಮಿ ಅಧ್ಯಕ್ಷರಾಗಿದ್ದ ರನಿಲ್ ವಿಕ್ರಮಸಿಂಘೆ ಮತ್ತು ಸಜಿತ್ ಪ್ರೇಮದಾಸ ಪದಚ್ಯುತಿ ಬಳಿಕ ಪ್ರತಿಪಕ್ಷದ ಉಸ್ತುವಾರಿ ವಹಿಸಿದ್ದ ಸಂಸದ ಡಲ್ಲಾಸ್ ಅಲಹಪ್ಪೆರುಮ ನಡುವೆ ಪ್ರಮುಖ ಪೈಪೋಟಿ ಏರ್ಪಟ್ಟಿದೆ. 

ಇದನ್ನೂ ಓದಿ: Viral Video: ಕಟುಕನಿಗೆ ಮಾರುತ್ತಿದ್ದಂತೆ ಅಳುತ್ತಾ ಮಾಲೀಕನನ್ನು ತಬ್ಬಿಕೊಂಡ ಮೇಕೆ

ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಪ್ರಮುಖ ವಿರೋಧ ಪಕ್ಷದ ಬೆಂಬಲಿತ ಭಿನ್ನಮತೀಯ ಆಡಳಿತ ಪಕ್ಷದ ಸಂಸದ ಡಲ್ಲಾಸ್ ಅಲಹಪ್ಪೆರುಮ ಮತ್ತು ಎಡಪಂಥೀಯ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ ಅನುರ ಕುಮಾರ ದಿಸ್ಸಾನಾಯಕ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಮೂವರು ಅಭ್ಯರ್ಥಿಗಳಾಗಿ ಮಂಗಳವಾರ ಶಾಸಕರು ಪ್ರಸ್ತಾಪಿಸಿದರು.

ಶ್ರೀಲಂಕಾದ ಸಂಸತ್ತು ಬುಧವಾರ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಗೊಟಾಬಯ ರಾಜಪಕ್ಸ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಮತದಾನವನ್ನು ಮಾಡುತ್ತಿದ್ದಾರೆ. ಹೈ ವೋಲ್ಟೇಜ್ ರಾಜಕೀಯ ಡ್ರಾಮಾ ನಂತರ ಮಾಜಿ ಅಧ್ಯಕ್ಷರು ದೇಶದಿಂದ ಪಲಾಯನ ಮಾಡಿದರು. ಅವರ ಸರ್ಕಾರದ ವಿರುದ್ಧದ ಜನರ ದಂಗೆಯ ನಂತರ ರಾಜಪಕ್ಸ ರಾಜೀನಾಮೆ ನೀಡಿದರು.  

ಈ ಚುನಾವಣೆಯಲ್ಲಿ ಗೆಲ್ಲಲು 225 ಸದಸ್ಯರ ಸದನದಲ್ಲಿ ಅಭ್ಯರ್ಥಿಯು ಮ್ಯಾಜಿಕ್‌ ನಂಬರ್‌ 113 ಅನ್ನು ದಾಟಬೇಕು. ಗೊಟಬಯ ರಾಜಪಕ್ಸ ಅವರ ಉತ್ತರಾಧಿಕಾರಿಗಾಗಿ ಇಂದು ಚುನಾವಣೆ ನಡೆಯುತ್ತಿದೆ. ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. 22 ಮಿಲಿಯನ್ ಜನರು ಆಹಾರ, ಇಂಧನ ಮತ್ತು ಔಷಧಿಗಳ ತೀವ್ರ ಕೊರತೆಯಿಂದ ಕಂಗೆಟ್ಟು ಹೋಗಿದ್ದಾರೆ. 

ಇದನ್ನೂ ಓದಿ: ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾಣಿಲ್ ವಿಕ್ರಂಸಿಂಘೆ ನೇಮಕ

ಶ್ರೀಲಂಕಾ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿ ಮುಂಚೂಣಿಯಲ್ಲಿರುವ ರಾನಿಲ್ ವಿಕ್ರಮಸಿಂಘೆ 6 ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವರು. ಗೊಟಬಯ ರಾಜಪಕ್ಸ ರಾಜೀನಾಮೆ ನೀಡಿದ ನಂತರ ರಾನಿಲ್ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಅವರನ್ನು ರಾಜಪಕ್ಸ ಅವರ ಮಿತ್ರ ಎಂದೇ ಪ್ರತಿಭಟನಾಕಾರರು ಭಾವಿಸುವ ಕಾರಣ, ರಾನಿಲ್ ತಿರಸ್ಕಾರಕ್ಕೊಳಗಾಗಿದ್ದಾರೆ.

ಶ್ರೀಲಂಕಾದ ರಾಜಕೀಯದಲ್ಲಿ ಗೊಟಬಯ ರಾಜಪಕ್ಸ ಅವರ ರಾಜೀನಾಮೆ ಹೊಸ ಪರ್ವಕ್ಕೆ ನಾಂದಿ ಹಾಡಿದೆ. ಕಳೆದ ಎರಡು ದಶಕಗಳಲ್ಲಿ ಪ್ರಾಬಲ್ಯ ಹೊಂದಿರುವ, ಒಂದು ಕಾಲದಲ್ಲಿ ಶ್ರೀಲಂಕಾವನ್ನೇ ತಮ್ಮದೆಂದು ಆಳುತ್ತಿದ್ದ ರಾಜಪಕ್ಸ ಕುಟುಂಬ ರಾಜಕೀಯಕ್ಕೆ ಇದರಿಂದ ಅತಿ ದೊಡ್ಡ ಪೆಟ್ಟುಬಿದ್ದಂತಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News