Photos : ಭೂಕಂಪದ ನಂತರ 17 ಗಂಟೆಗಳವರೆಗೆ ತನ್ನ ಪುಟ್ಟ ತಮ್ಮನನ್ನು ಸುರಕ್ಷಿತವಾಗಿರಿಸಿದ ಏಳು ವರ್ಷದ ಬಾಲಕಿ

Turkey Syria Earthquake News:ಇಲ್ಲಿ ಇಬ್ಬರೂ ಮಕ್ಕಳು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿರುವ ಈ ಮಕ್ಕಳು ರಕ್ಷಣಾ ತಂಡದ ಗಮನಕ್ಕೆ ಬಂದಿದ್ದಾರೆ.

Written by - Ranjitha R K | Last Updated : Feb 8, 2023, 12:13 PM IST
  • ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಭೀಕರವಾಗಿದೆ.
  • 7,800 ಕ್ಕೂ ಹೆಚ್ಚು ಜನರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ.
  • ವೈರಲ್ ಆಇದೆ ಮನಕಲುಕುವ ಫೋಟೋ
Photos : ಭೂಕಂಪದ ನಂತರ 17 ಗಂಟೆಗಳವರೆಗೆ ತನ್ನ ಪುಟ್ಟ ತಮ್ಮನನ್ನು ಸುರಕ್ಷಿತವಾಗಿರಿಸಿದ ಏಳು ವರ್ಷದ ಬಾಲಕಿ  title=

Turkey Syria Earthquake News: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಭೀಕರವಾಗಿದೆ.   ಅವಶೇಷಗಳಡಿ ಸಿಲುಕಿರುವವರನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಕಾರ್ಯಾಚರಣೆ ವೇಳೆ ಮನ ಕಲಕುವ ದೃಶ್ಯವೊಂದು ಕಂಡು ಬಂದಿದೆ. ಅವಶೇಷಗಳಡಿ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ಸಹೋದರನನ್ನು ರಕ್ಷಿಸಿರುವ ಕತೆ ಇದು. ಈ ಇಬ್ಬರು ಮಕ್ಕಳ ಫೋಟೋ ಇದೀಗ ವೈರಲ್ ಆಗುತ್ತಿದೆ.

ಏಳು ವರ್ಷದ ಬಾಲಕಿ ತನ್ನ ಕಿರಿಯ ಸಹೋದರನ ತಲೆಯನ್ನು ಮುಚ್ಚಿ ಇಟ್ಟುಕೊಂಡಿರುವುದನ್ನು ಈ ಫೋಟೋದಲ್ಲಿ ಕಾಣಬಹುದು. ಇಲ್ಲಿ ಇಬ್ಬರೂ ಮಕ್ಕಳು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿರುವ ಈ ಮಕ್ಕಳು ರಕ್ಷಣಾ ತಂಡದ ಗಮನಕ್ಕೆ ಬಂದಿದ್ದಾರೆ. ಇದೀಗ ಈ ಫೋಟೋವನ್ನು ಯುಎನ್ ಪ್ರತಿನಿಧಿ ಮೊಹಮ್ಮದ್ ಸಫಾ, ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 17 ಗಂಟೆಗಳ ಕಾಲ ಈ ಇಬ್ಬರೂ ಮಕ್ಕಳು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ : ಟರ್ಕಿಗೆ ನೆರವು ನೀಡಲು ಮುಂದಾಗಿದ್ದ ಭಾರತಕ್ಕೆ ವಾಯುಪ್ರದೇಶ ನಿರಾಕರಿಸಿದ ಪಾಕ್

ಸುದ್ದಿ ಬರೆಯುವ ವೇಳೆಗೆ ಸಫಾ ಅವರ ಈ ಪೋಸ್ಟ್ ಅನ್ನು 47 ಸಾವಿರಕ್ಕೂ ಹೆಚ್ಚು ಜನರು ಶೇರ್ ಮಾಡಿಕೊಂಡಿದ್ದಾರೆ. 1 ಲಕ್ಷದ 74 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಈ ಫೋಟೋಗೆ ಬಂದಿವೆ.

 

ಮೂಲಗಳ ಪ್ರಕಾರ, ಸೋಮವಾರ ಎರಡು ಪ್ರಮುಖ ಭೂಕಂಪಗಳ ನಂತರ ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಬದುಕುಳಿದವರಿಗಾಗಿ  ಶೋಧ ಕಾರ್ಯ ನಡೆಯುತ್ತಿದೆ. 7,800 ಕ್ಕೂ ಹೆಚ್ಚು ಜನರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ  ಸಾಧ್ಯತೆಗಳಿವೆ ಎನ್ನಲಾಗಿದೆ. 
 
ಇದನ್ನೂ ಓದಿ : ಟರ್ಕಿಯಲ್ಲಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 4,300ಕ್ಕೆ ಏರಿಕೆ! ಭಾರತ ಸೇರಿದಂತೆ ಹಲವು ದೇಶಗಳಿಂದ ಸಹಾಯ ಹಸ್ತ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News