ನಿತ್ಯಾನಂದನ ಆರೋಗ್ಯ ಸ್ಥಿತಿ ಗಂಭೀರ: ವೈದ್ಯಕೀಯ ನೆರವು ಕೋರಿ ಶ್ರೀಲಂಕಾಗೆ ಪತ್ರ!

ಶ್ರೀಲಂಕಾ ಸರ್ಕಾರದ ಉನ್ನತ ಮೂಲಗಳ ಪ್ರಕಾರ ನಿತ್ಯಾನಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ಹೇಳಲಾಗಿದೆ.  

Written by - Puttaraj K Alur | Last Updated : Sep 3, 2022, 09:24 AM IST
  • ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಆರೋಗ್ಯದಲ್ಲಿ ಏರುಪೇರು
  • ತನಗೆ ವೈದ್ಯಕೀಯ ಆರೈಕೆಯ ‘ತುರ್ತು’ ಅಗತ್ಯವಿದೆ ಎಂದು ಶ್ರೀಲಂಕಾ ಅಧ್ಯಕ್ಷರಿಗೆ ನಿತ್ಯಾನಂದನ ಪತ್ರ
  • ‘ಶ್ರೀಕೈಲಾಸ’ದಲ್ಲಿನ ಮೂಲಸೌಕರ್ಯ ಕೊರತೆ ಉಲ್ಲೇಖಿಸಿ ತನಗೆ ಚಿಕಿತ್ಸೆ ನೀಡುವಂತೆ ದೇವಮಾನವನ ಮನವಿ
ನಿತ್ಯಾನಂದನ ಆರೋಗ್ಯ ಸ್ಥಿತಿ ಗಂಭೀರ: ವೈದ್ಯಕೀಯ ನೆರವು ಕೋರಿ ಶ್ರೀಲಂಕಾಗೆ ಪತ್ರ! title=
ನಿತ್ಯಾನಂದನ ಆರೋಗ್ಯದಲ್ಲಿ ಏರುಪೇರು

ನವದೆಹಲಿ: ಅತ್ಯಾಚಾರದ ಆರೋಪ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಶ್ರೀಲಂಕಾದಲ್ಲಿ ರಾಜಕೀಯ ಆಶ್ರಯ ಬಯಸುತ್ತಿದ್ದಾರೆ ಎಂದು ವರದಿಯಾಗಿದೆ. ತನ್ನ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಉಲ್ಲೇಖಿಸಿ ನಿತ್ಯಾನಂದ ಆಗಸ್ಟ್ 7ರಂದು ದ್ವೀಪ ರಾಷ್ಟ್ರದ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ತನಗೆ ವೈದ್ಯಕೀಯ ಆರೈಕೆಯ ‘ತುರ್ತು’ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾನೆ.

ತನಗೆ ಜೀವ ಬೆದರಿಕೆ ಇದ್ದು, ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡುವಂತೆ ನಿತ್ಯಾನಂದ ಶ್ರೀಲಂಕಾ ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾನೆ. ಈ ಪತ್ರದಲ್ಲಿ ನಿತ್ಯಾನಂದ ಸ್ಥಾಪಿಸಿರುವ ದ್ವೀಪರಾಷ್ಟ್ರ ‘ಶ್ರೀಕೈಲಾಸ’ದಲ್ಲಿನ ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯನ್ನು ಉಲ್ಲೇಖಿಸಲಾಗಿದೆ.   

ಇದನ್ನೂ ಓದಿ: ವಿಶ್ವಸಂಸ್ಥೆ ವರದಿಯಲ್ಲಿ ಚೀನಾದ ನೈಜಮುಖ ಬಹಿರಂಗ, ಮುಸ್ಲಿಮರ ನರಕಯಾತನೆ ಬಯಲು

ಅತ್ಯಾಚಾರ ಆರೋಪಿ ನಿತ್ಯಾನಂದ ತೀವ್ರ ಅಸ್ವಸ್ಥರಾಗಿದ್ದು, ಆತನಿಗೆ ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರದ ಉನ್ನತ ಮೂಲವು ದೃಢಪಡಿಸಿದೆ. ಆಗಸ್ಟ್ 2022ರಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ಬರೆದ ಪತ್ರವನ್ನು ಮಾಧ್ಯಮಗಳು ತಮ್ಮ ವರದಿಯಲ್ಲಿ ಪ್ರಕಟಿಸಿವೆ. ಶ್ರೀಕೈಲಾಸದ ವಿದೇಶಾಂಗ ವ್ಯವಹಾರ ಮಂತ್ರಿ ಎಂದು ಹೇಳಿಕೊಳ್ಳುವ ನಿತ್ಯಪ್ರೇಮಾತ್ಮ ಆನಂದ ಸ್ವಾಮಿಯವರು ಬರೆದ ಪತ್ರದಲ್ಲಿ ರಾಷ್ಟ್ರಪತಿಗೆ ವಿನಂತಿ ಮಾಡಿಕೊಂಡಿದ್ದಾರೆ.

‘ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶ(SPH) ನಿತ್ಯಾನಂದ ಪರಮಶಿವಂಗೆ ಆರೋಗ್ಯ ಗಂಭೀರ ಸ್ಥಿತಿ ತಲುಪಿದ್ದು, ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಪ್ರಸ್ತುತ ಕೈಲಾಸದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ. ನಿತ್ಯಾನಂದನಿಗೆ ಅಗತ್ಯ ಚಿಕಿತ್ಸೆ ನೀಡುವ ತಜ್ಞ ವೈದ್ಯರ ಅಗತ್ಯವಿದೆ. ಸದ್ಯ ಶ್ರೀಕೈಲಾಸದಲ್ಲಿಯೇ ಇರುವ ನಿತ್ಯಾನಂದನಿಗೆ ಅತ್ಯಂತ ತುರ್ತಾಗಿ ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯ ಸಿಗುತ್ತಿಲ್ಲ. ಹೀಗಾಗಿ ಅನಾರೋಗ್ಯಕ್ಕೆ ಒಳಗಾಗಿರುವ ನಿತ್ಯಾನಂದನಿಗೆ ರಾಜಾಶ್ರಯ ನೀಡುವ ಮೂಲಕ ತಾವು ತುರ್ತು ಚಿಕಿತ್ಸೆ ನೀಡಬೇಕು' ಎಂದು ದ್ವೀಪರಾಷ್ಟ್ರಕ್ಕೆ ಶ್ರೀಕೈಲಾಸದ ಮುಖ್ಯಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Snake video : ಕಾಲನ್ನು ಬಿಗಿಯಾಗಿ ಸುತ್ತಿಕೊಂಡಿದ್ದರೂ ಅಪಾಯಕಾರಿ ಹೆಬ್ಬಾವು ಮಾಸಲಿಲ್ಲ ಯುವತಿಯ ಮುಗುಳ್ನಗೆ ..!

ಆರ್ಥಿಕ ಹೊಡೆತಕ್ಕೆ ಸಿಲುಕಿ ನಲುಗಿರುವ ಲಂಕಾದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಅಲ್ಲಿ ಸರ್ಕಾರದ ವಿರುದ್ಧ ದಂಗೆ ಎದ್ದಿರುವ ಜನರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಈ ದುಸ್ಥಿತಿಯಲ್ಲಿ ನಿತ್ಯಾನಂದ ತನಗೆ ಚಿಕಿತ್ಸೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News