ಫ್ಯಾಸಿಸ್ಟ್ ಪ್ಲಾನ್ ಹೊಂದಿದ್ದ ಇಮ್ರಾನ್ ಖಾನ್, 15 ವರ್ಷ ಆಳ್ವಿಕೆ ನಡೆಸಲು ಬಯಸಿದ್ದರಂತೆ...!

ಪಾಕಿಸ್ತಾನದ ಉಚ್ಛಾಟಿತ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಆಡಳಿತವನ್ನು 15 ವರ್ಷಗಳವರೆಗೆ ವಿಸ್ತರಿಸಲು ಫ್ಯಾಸಿಸ್ಟ್ ಯೋಜನೆಗಳನ್ನು ಹೊಂದಿದ್ದರು ಮತ್ತು ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣ ವಿರೋಧ ಪಕ್ಷದ ನಾಯಕತ್ವವನ್ನು ಅನರ್ಹಗೊಳಿಸಲು ಬಯಸಿದ್ದರು ಎಂದು ಪಿಎಂಎಲ್-ಎನ್ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.

Last Updated : Jun 19, 2022, 05:06 PM IST
  • ಇದಕ್ಕೆ ಪೂರಕವಾಗಿ ಅವರು ತಮ್ಮ ರಾಜಕೀಯ ವಿರೋಧಿಗಳ ವಿರುದ್ಧದ ಪ್ರಕರಣಗಳನ್ನು ತ್ವರಿತಗೊಳಿಸಲು 100 ನ್ಯಾಯಾಧೀಶರ ಸೇವೆಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದರು
ಫ್ಯಾಸಿಸ್ಟ್ ಪ್ಲಾನ್ ಹೊಂದಿದ್ದ ಇಮ್ರಾನ್ ಖಾನ್, 15 ವರ್ಷ ಆಳ್ವಿಕೆ ನಡೆಸಲು ಬಯಸಿದ್ದರಂತೆ...! title=

ನವದೆಹಲಿ: ಪಾಕಿಸ್ತಾನದ ಉಚ್ಛಾಟಿತ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಆಡಳಿತವನ್ನು 15 ವರ್ಷಗಳವರೆಗೆ ವಿಸ್ತರಿಸಲು ಫ್ಯಾಸಿಸ್ಟ್ ಯೋಜನೆಗಳನ್ನು ಹೊಂದಿದ್ದರು ಮತ್ತು ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣ ವಿರೋಧ ಪಕ್ಷದ ನಾಯಕತ್ವವನ್ನು ಅನರ್ಹಗೊಳಿಸಲು ಬಯಸಿದ್ದರು ಎಂದು ಪಿಎಂಎಲ್-ಎನ್ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಟಿಕ್ ಟಾಕ್ ಗೆ ಸೆಡ್ಡು ಹೊಡೆದ ಯೂಟ್ಯೂಬ್, ಶಾರ್ಟ್ಸ್ ಗಳಿಂದ ಗಳಿಸಿದ ಆದಾಯ ಎಷ್ಟು ಗೊತ್ತಾ?

ಶನಿವಾರ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂಧನ್ ಸಚಿವ ಖುರ್ರಂ ದಸ್ತಗೀರ್, ಇಮ್ರಾನ್ ಖಾನ್ ಅವರು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ಹಾಲಿ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್,ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಹಾಗೂ ಅಹ್ಸಾನ್ ಇಕ್ಬಾಲ್ ಸೇರಿದಂತೆ ಇಡೀ ವಿರೋಧ ಪಕ್ಷದ ನಾಯಕತ್ವವನ್ನು ಅನರ್ಹಗೊಳಿಸಲು ಬಯಸಿದ್ದರು ಎನ್ನುವ  ಬಗ್ಗೆ ತಮಗೆ ಪೂರ್ವ ಮಾಹಿತಿ ಇತ್ತು ಎಂದು ಹೇಳಿದರು.

ಇದನ್ನೂ ಓದಿ: ಜೂನ್ 23 ರಂದು ಬೀಜಿಂಗ್ ನಲ್ಲಿ ಬ್ರಿಕ್ಸ್ ರಾಷ್ಟ್ರಗಳ 14ನೇ ಶೃಂಗಸಭೆ

ಇದಕ್ಕೆ ಪೂರಕವಾಗಿ ಅವರು ತಮ್ಮ ರಾಜಕೀಯ ವಿರೋಧಿಗಳ ವಿರುದ್ಧದ ಪ್ರಕರಣಗಳನ್ನು ತ್ವರಿತಗೊಳಿಸಲು 100 ನ್ಯಾಯಾಧೀಶರ ಸೇವೆಗಳನ್ನು ನೇಮಿಸಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಲಂಡನ್‌ನಲ್ಲಿ ರಹಸ್ಯ ಒಪ್ಪಂದ ಮಾಡಿಕೊಂಡ ನವಾಜ್ ಷರೀಫ್, ಪಾಕ್‌ಗೆ ಹಿಂತಿರುಗುವುದಿಲ್ಲ: ವರದಿ

ಏಪ್ರಿಲ್‌ನಲ್ಲಿ ಇಮ್ರಾನ್ ಖಾನ್ ಅವರು ಅವಿಶ್ವಾಸ ಮತವನ್ನು ಕಳೆದುಕೊಂಡ ನಂತರ ಅಧಿಕಾರದಿಂದ ಕೆಳಗಿಳಿದಿದ್ದರು, ಇದು ರಷ್ಯಾ, ಚೀನಾ ಮತ್ತು ಅಫ್ಘಾನಿಸ್ತಾನದ ಮೇಲಿನ ಅವರ ಸ್ವತಂತ್ರ ವಿದೇಶಾಂಗ ನೀತಿ ನಿರ್ಧಾರಗಳಿಂದಾಗಿ ಅವರನ್ನು ಗುರಿಯಾಗಿಸುವ ಯುಎಸ್ ನೇತೃತ್ವದ ಪಿತೂರಿಯ ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇಮ್ರಾನ್ ಖಾನ್ ಅವರು ತಮ್ಮ ಪದಚ್ಯುತಿಯಾದಾಗಿನಿಂದಲೂ, ಪ್ರತಿಭಟನೆ ನಡೆಸುತ್ತಿದ್ದಾರೆ. 2018 ರಲ್ಲಿ ಅಧಿಕಾರಕ್ಕೆ ಬಂದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನ ,ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಮಿಲಿಟರಿಯ ಬೆಂಬಲದೊಂದಿಗೆ ಸಂಸತ್ತಿನಲ್ಲಿ ಅವಿಶ್ವಾಸ ಮತದಲ್ಲಿ ಪದಚ್ಯುತಗೊಂಡ ಏಕೈಕ ಪಾಕಿಸ್ತಾನಿ ಪ್ರಧಾನಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News