ಭಯೋತ್ಪಾದಕರಿಗೆ ತರಬೇತಿ ನೀಡಲು ಯುಎಸ್ ಹಣ ಬಳಕೆ ಒಪ್ಪಿಕೊಂಡ ಪಾಕ್ ಪ್ರಧಾನಿ

ಅಮೆರಿಕಾದ ಕೇಂದ್ರೀಯ ಗುಪ್ತಚರ ವಿಭಾಗ ಆರ್ಥಿಕ ನೆರವು ಬಳಸಿ ದೇಶವು ಭಯೋತ್ಪಾದಕರಿಗೆ ತರಬೇತಿ ನೀಡಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಒಪ್ಪಿಕೊಂಡಿದ್ದಾರೆ.

Last Updated : Sep 13, 2019, 12:22 PM IST
ಭಯೋತ್ಪಾದಕರಿಗೆ ತರಬೇತಿ ನೀಡಲು ಯುಎಸ್ ಹಣ ಬಳಕೆ ಒಪ್ಪಿಕೊಂಡ ಪಾಕ್ ಪ್ರಧಾನಿ title=

ಇಸ್ಲಾಮಾಬಾದ್: ಅಮೆರಿಕಾದ ಕೇಂದ್ರೀಯ ಗುಪ್ತಚರ ವಿಭಾಗ ಆರ್ಥಿಕ ನೆರವು ಬಳಸಿ ದೇಶವು ಭಯೋತ್ಪಾದಕರಿಗೆ ತರಬೇತಿ ನೀಡಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಒಪ್ಪಿಕೊಂಡಿದ್ದಾರೆ.

"80 ರ ದಶಕದಲ್ಲಿ, ಅಫ್ಘಾನಿಸ್ತಾನವನ್ನು ಆಕ್ರಮಿಸಿದಾಗ ಸೋವಿಯತ್ ವಿರುದ್ಧ ಹೋರಾಡಲು ಈ ಮುಜಾಹಿದ್ದೀನ್ ಜನರಿಗೆ ಜಿಹಾದ್'ಗಾಗಿ ತರಬೇತಿ ನೀಡುತ್ತಿದ್ದೆವು. ಆದ್ದರಿಂದ, ಈ ಜನರಿಗೆ ಪಾಕಿಸ್ತಾನದಿಂದ ತರಬೇತಿ ನೀಡಲಾಯಿತು. 1 ದಶಕದ ಬಳಿಕ ಅಮೆರಿಕನ್ನರು ಆಫ್ಘಾನಿಸ್ಥಾನಕ್ಕೆ ಬಂದಾಗ ಅವರನ್ನು ಜಿಹಾದ್ ಅಲ್ಲ, ಅದೀ ಭಯೋತ್ಪಾದನೆ ಎಂದು ಪಾಕಿಸ್ತಾನದಲ್ಲಿರುವವರು ಎಂದು ಹೇಳುವಂತಾಗಿದೆ. ಇದೀಗ ಅವರಿಗೆ ಅಮೆರಿಕಾದ ಭಯೋತ್ಪಾದಕರು ಎಂಬ ಹಣೆಪಟ್ಟಿ ನೀಡಲಾಗಿದೆ" ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಯುನೈಟೆಡ್ ಸ್ಟೇಟ್ಸ್ ಭಯೋತ್ಪಾದನೆ ವಿರುದ್ಧದ ಯುದ್ಧಕ್ಕೆ ಸೇರಿದ ನಂತರ ಪಾಕಿಸ್ತಾನವು 70,000 ಕ್ಕೂ ಹೆಚ್ಚು ಜನರನ್ನು ಮತ್ತು 100 ಬಿಲಿಯನ್ ಡಾಲರ್ಗಳನ್ನು ಕಳೆದುಕೊಂಡಿದೆ. ಎಲ್ಲಾ ನಷ್ಟಗಳ ಹೊರತಾಗಿಯೂ, ವಾಷಿಂಗ್ಟನ್ ಅಫ್ಘಾನಿಸ್ತಾನದಲ್ಲಿ ತನ್ನದೇ ಆದ ಹಿನ್ನಡೆಗೆ ಪಾಕಿಸ್ತಾನವನ್ನು ದೂಷಿಸುತ್ತಿದೆ ಎಂದು ಇಮ್ರಾನ್ ಬೇಸರ ವ್ಯಕ್ತಪಡಿಸಿದ್ದಾರೆ.

"ನಾವು 70,000 ಜನರನ್ನು ಕಳೆದುಕೊಂಡಿದ್ದೇವೆ, ಆರ್ಥಿಕವಾಗಿ ನಾವು 100 ಬಿಲಿಯನ್ ಡಾಲರ್ಗಳನ್ನು ಕಳೆದುಕೊಂಡಿದ್ದೇವೆ. ಕೊನೆಯಲ್ಲಿ, ಅಫ್ಘಾನಿಸ್ತಾನದಲ್ಲಿ ಅಮೆರಿಕನ್ನರು ಯಶಸ್ವಿಯಾಗಲಿಲ್ಲ ಎಂದು ನಮ್ಮನ್ನು ದೂಷಿಸಲಾಯಿತು. ಪಾಕಿಸ್ತಾನಕ್ಕೆ ತುಂಬಾ ಅನ್ಯಾಯವಾಗಿದೆ”ಎಂದು ಖಾನ್ ಸಂದರ್ಶನವೊಂದರಲ್ಲಿ ಹೇಳಿದರು.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಲಿಬಾನ್ ಜೊತೆಗಿನ ಶಾಂತಿ ಮಾತುಕತೆಗಳನ್ನು ಮತ್ತು ಗುಂಪಿನ ಪ್ರತಿನಿಧಿಗಳೊಂದಿಗಿನ "ರಹಸ್ಯ ಸಭೆಯನ್ನು" ರದ್ದುಗೊಳಿಸಿದ ನಂತರ ಇಮ್ರಾನ್ ಖಾನ್ ಅವರ ಅಭಿಪ್ರಾಯಗಳು ಹೊರಬಿದ್ದಿವೆ. ಯುಎಸ್ ಮತ್ತು ತಾಲಿಬಾನ್ ಪ್ರತಿನಿಧಿಗಳು ಶಾಂತಿ ಒಪ್ಪಂದದತ್ತ ಕೆಲಸ ಮಾಡುತ್ತಿದ್ದು ಒಂಬತ್ತು ಸುತ್ತಿನ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ತಾಲಿಬಾನ್ ನೊಂದಿಗಿನ ಬಹುತೇಕ ಎಲ್ಲಾ ಭಿನ್ನಾಭಿಪ್ರಾಯಗಳು ಬಗೆಹರಿದಿದ್ದವು. ಈ ಹಂತದಲ್ಲಿ ಟ್ರಂಪ್ ತಾಲಿಬಾನ್ ಜೊತೆಗಿನ ಮಾತುಕತೆಯನ್ನು ರದ್ದುಪಡಿಸಿದೆ. ಅದಲ್ಲದೆ ತವರು ನೆಲದಲ್ಲಿ ಭಯೋತ್ಪಾದನೆ ವಿರುದ್ಧ ಕ್ರಮಕೈಗೊಳ್ಳುವಂತೆ ಟ್ರಂಪ್ ಆಡಳಿತ ಪಾಕಿಸ್ತಾನಕ್ಕೆ ಪದೇ ಪದೇ ಹೇಳುತ್ತಾ ಬಂದಿದೆ. 

Trending News