Pakistan Crisis : 'ನನಗೆ ಭಯ ಉಂಟು ಮಾಡುವ ಕನಸುಗಳು ಬೀಳುತ್ತಿವೆ'

Pakistan Politics: ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ಇಮ್ರಾನ್ ಖಾನ್ ಅವರ ಮನೆಯನ್ನು ಪೊಲೀಸರು ಸುತ್ತುವರೆದಿದ್ದಾರೆ. ಖಾನ್ ಅವರ ಜಮಾನ್ ಪಾರ್ಕ್ ಮನೆಯಲ್ಲಿ ಸುಮಾರು 40 ಉಗ್ರರು ಅಡಗಿಕೊಂಡಿದ್ದಾರೆ ಎಂದು ಪಂಜಾಬ್ ಸರ್ಕಾರ ಆರೋಪಿಸಿದೆ.  

Written by - Nitin Tabib | Last Updated : May 18, 2023, 03:04 PM IST
  • ಖಾನ್ ಅವರ ಜಮಾನ್ ಪಾರ್ಕ್ ಮನೆಯಲ್ಲಿ ಸುಮಾರು 40 ಭಯೋತ್ಪಾದಕರು ಅಡಗಿಕೊಂಡಿದ್ದಾರೆ
  • ಎಂಬ ಪಂಜಾಬ್ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ,
  • ಅವರ ಸ್ವಂತ ಜೀವಕ್ಕೆ ಭಯೋತ್ಪಾದಕರ ಉಪಸ್ಥಿತಿಯು ಅಪಾಯದಲ್ಲಿರುವುದರಿಂದ ಸರ್ಕಾರವು ಸರ್ಚ್ ವಾರೆಂಟ್ ಪಡೆಯುವ ಮೂಲಕ ಅವರ ಮನೆಯನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
Pakistan Crisis : 'ನನಗೆ ಭಯ ಉಂಟು ಮಾಡುವ ಕನಸುಗಳು ಬೀಳುತ್ತಿವೆ' title=

Pakistan News: ದೇಶವು ವಿನಾಶದತ್ತ ಸಾಗುತ್ತಿದೆ ಮತ್ತು ವಿಘಟನೆಯತ್ತ ಸಾಗಬಹುದು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಶೆಹಬಾಜ್ ಷರೀಫ್ ಸರ್ಕಾರವು ತನ್ನ ಪಕ್ಷದ ವಿರುದ್ಧ ಸೇನೆಯನ್ನು ಎತ್ತಿಕಟ್ಟುವ ಸಂಚು ರೂಪಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆಯನ್ನು ಕೊನೆಗಾಣಿಸಲು ಚುನಾವಣೆ ನಡೆಸುವುದೊಂದೇ ದಾರಿ ಎಂದು ಲಾಹೋರ್‌ನಲ್ಲಿರುವ ಜಮಾನ್ ಪಾರ್ಕ್ ನಿವಾಸದಿಂದ ಬುಧವಾರ ವಿಡಿಯೋ ಸಂದೇಶವನ್ನು ನೀಡುವ ಮೂಲಕ ಇಮ್ರಾನ್ ಕೇಳಿಕೊಂಡಿದ್ದಾರೆ. ಪ್ರಸ್ತುತ ಪಾಕ್ ಪೊಲೀಸರು ಇಮ್ರಾನ್ ಖಾನ್ ಅವರ ಮನೆಯನ್ನು ಸುತ್ತುವರೆದಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಇಮ್ರಾನ್ ಅವರು, 'ನನಗೆ ದೇಶ ವಿನಾಶದತ್ತ ಸಾಗುತ್ತಿದೆ ಎಂಬ ಭಯಾನಕ ಕನಸು ಬೆಳ್ಳುತ್ತಿವೆ. ಚುನಾವಣೆ ನಡೆಸಿ ದೇಶ ಉಳಿಸಿ ಎಂದು ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ' ಎಂದಿದ್ದಾರೆ.

'ದೇಶದ ಸಂವಿಧಾನಕ್ಕೆ ಅಗೌರವ ತೋರಲಾಗುತ್ತಿದೆ'
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷರಾಗಿರುವ ಖಾನ್ (70), ‘ಇಲ್ಲಿಂದ ಲಂಡನ್‌ಗೆ ಓಡಿಹೋಗಿರುವ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ನಾಯಕರು ಮತ್ತು ನವಾಜ್ ಷರೀಫ್ ಅವರು ದೇಶದ ಸಂವಿಧಾನಕ್ಕೆ ಅಗೌರವ ತೋರುತ್ತಿದ್ದಾರೆ.  ಸರ್ಕಾರಿ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ ಅಥವಾ ಪಾಕಿಸ್ತಾನಿ ಸೇನೆಯ ಮಾನ ಹರಾಜು ಹಾಕುವ ಕೆಲಸ ನಡೆಯುತ್ತಿದೆ. ಕೊಳ್ಳೆಹೊಡೆದ ಸಂಪತ್ತನ್ನು ಉಳಿಸಲು ತಮ್ಮ ಪಟ್ಟಭದ್ರ ಹಿತಾಸಕ್ತಿಗಾಗಿ ಅವರು ದುಡಿಯುತ್ತಿದ್ದಾರೆ.

ಸರಕಾರದ ಸೂಚನೆ ಮೇರೆಗೆ ಸಂಚು ರೂಪಿಸಲಾಗಿದೆ
ಮೇ 9 ರಂದು ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ತನ್ನ ಬಂಧನದ ನಂತರ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್, ಇದು ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರದ ಆಜ್ಞೆಯ ಮೇರೆಗೆ ರೂಪಿಸಲಾದ ಸಂಪೂರ್ಣ ಪಿತೂರಿ ಎಂದು ಹೇಳಿದ್ದಾರೆ.

ಅಧಿಕಾರದಲ್ಲಿರುವವರು ಸಂವೇದನಾಶೀಲತೆಯಿಂದ ಯೋಚಿಸಬೇಕಾದ ಸಮಯ ಬಂದಿದೆ, ಇಲ್ಲದಿದ್ದರೆ ಪೂರ್ವ ಪಾಕಿಸ್ತಾನದಂತಹ ಪರಿಸ್ಥಿತಿ ದೇಶದ ಮುಂದೆ ಉದ್ಭವಿಸಬಹುದು’ ಎಂದು ಮಾಜಿ ಪ್ರಧಾನಿಯನ್ನು ‘ಡಾನ್’ ಪತ್ರಿಕೆ ಹೇಳಿದ್ದಾರೆ.

ಸೇನೆಯ ಬಗ್ಗೆ ಮಾಡಿರುವ ಟೀಕೆಗೆ ಸಮರ್ಥನೆ
ದೇಶದ ಸೇನೆಯ ಬಗ್ಗೆ ತಮ್ಮ ಟೀಕೆಯನ್ನು ಸಮರ್ಥಿಸಿಕೊಂಡ ಖಾನ್, "ನಾನು ಮಿಲಿಟರಿಯನ್ನು ಟೀಕಿಸಿದಾಗ, ಅದು ನನ್ನ ಸ್ವಂತ ಮಕ್ಕಳನ್ನು ಟೀಕಿಸಿದಂತೆ" ಎಂದು ಹೇಳಿದ್ದಾರೆ. ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಮಾಜಿ ಸೇನಾ ಮುಖ್ಯಸ್ಥರು ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಾಗಲೂ ನಾನು ಮಧ್ಯಪ್ರವೇಶಿಸಲಿಲ್ಲ.

ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದರೆ ಅವರನ್ನು ಹುದ್ದೆಯಿಂದ ತೆಗೆದುಹಾಕುತ್ತೇವೆ ಎಂದು ಕೆಲವು ನಾಯಕರು ಪ್ರಸ್ತುತ ಸೇನಾ ಮುಖ್ಯಸ್ಥರಿಗೆ ಹೇಳುತ್ತಿದ್ದಾರೆ ಎಂದು ಪಿಟಿಐ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ-Indian Economy: 2024 ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.6.7 ರಷ್ಟಿರಲಿದೆ, ಹಣದುಬ್ಬರದಲ್ಲಿಯೂ ಕೂಡ ಇಳಿಕೆ

'ಕಾನೂನಾತ್ಮಕವಾಗಿ ಮನೆಯ ತಪಾಸಣೆ ನಡೆಸಬೇಕು'
ಖಾನ್ ಅವರ ಜಮಾನ್ ಪಾರ್ಕ್ ಮನೆಯಲ್ಲಿ ಸುಮಾರು 40 ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎಂಬ ಪಂಜಾಬ್ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ, ಅವರ ಸ್ವಂತ ಜೀವಕ್ಕೆ ಭಯೋತ್ಪಾದಕರ ಉಪಸ್ಥಿತಿಯು ಅಪಾಯದಲ್ಲಿರುವುದರಿಂದ ಸರ್ಕಾರವು ಸರ್ಚ್ ವಾರೆಂಟ್ ಪಡೆಯುವ ಮೂಲಕ ಅವರ ಮನೆಯನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ. . ಆದರೆ ದೇಶದ ಅತಿದೊಡ್ಡ ರಾಜಕೀಯ ಪಕ್ಷವಾದ ಪಿಟಿಐ ಅನ್ನು ಹತ್ತಿಕ್ಕಲು ಇದನ್ನು ಒಂದು ನೆಪವಾಗಿ ಬಳಸಬಾರದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ-IT Hardware ಗಾಗಿ 17000 ಕೋಟಿ ರೂ.ಗಳ ಪಿಎಲ್ಐ ಯೋಜನೆಗೆ ಅನುಮತಿ

ಇತ್ತೀಚಿನ ಸಮೀಕ್ಷೆಯ ಪ್ರಕಾರ, ಪಾಕಿಸ್ತಾನದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರು ಪಿಟಿಐ ಜೊತೆ ನಿಂತಿದ್ದಾರೆ ಮತ್ತು ಉಳಿದ 30 ಪ್ರತಿಶತದಷ್ಟು ಜನರು ಆಡಳಿತಾರೂಢ ಒಕ್ಕೂಟದ ಇತರ ಎಲ್ಲಾ ಪಕ್ಷಗಳೊಂದಿಗೆ ಇದ್ದಾರೆ ಎಂದು ಖಾನ್ ಹೇಳಿದ್ದಾರೆ.

ಮಾಧ್ಯಮದವರಿಗೆ ಮನೆ ಪ್ರವೇಶಿಸಲು ಇಮ್ರಾನ್ ಅನುಮತಿ
ಅವರ ವೀಡಿಯೊ ಸಂದೇಶದ ನಂತರ, ಇಮ್ರಾನ್ ಖಾನ್ ತಮ್ಮ ಮನೆಯಲ್ಲಿ ಭಯೋತ್ಪಾದಕರು ಅಡಗಿಕೊಂಡಿದ್ದಾರೆಯೇ ಎಂಬುದನ್ನೂ ಪರಿಶೀಲಿಸಲು ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮದ ಪ್ರತಿನಿಧಿಗಳಿಗೆ ತಮ್ಮ ನಿವಾಸಕ್ಕೆ ಭೇಟಿ ನೀಡಲು ಅವಕಾಶ ನೀಡಿದ್ದಾರೆ. ನಂತರ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಿದ ವರದಿಗಾರರು, ಗೃಹ ಕಾರ್ಮಿಕರು ಮತ್ತು ಕೆಲವು ಪೊಲೀಸರು ಮಾತ್ರ ಅಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಖಾನ್ ಇಂದು ಬೆಳಗ್ಗೆ ಟ್ವೀಟ್ ಮಾಡಿ, 'ಬಹುಶಃ ನನ್ನ ಮುಂದಿನ ಬಂಧನಕ್ಕೂ ಮುನ್ನ ನನ್ನ ಕೊನೆಯ ಟ್ವೀಟ್ ಇದಾಗಿದೆ. ಏಕೆಂದರೆ ಪೊಲೀಸರು ನನ್ನ ಮನೆಯನ್ನು ಸುತ್ತುವರಿದಿದ್ದಾರೆ' ಎಂದು ಅವರು ಕೆಲವು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಪೊಲೀಸ್ ಸಿಬ್ಬಂದಿ ಅವರ ಮನೆಗೆ ಪ್ರವೇಶಿಸುವುದನ್ನು ಕಾಣಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News