Financial crisis: ಪಾಕಿಸ್ತಾನಲ್ಲಿ ಚಹಾ ಬದಲು ಲಸ್ಸಿ ಸೇವಿಸುವಂತೆ ಸುತ್ತೋಲೆ..!

ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು: ವಿದೇಶಿ ವಿನಿಮಯ ಸಂಗ್ರಹದ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರವು ಪ್ರಸ್ತುತ ತನ್ನ ಆಮದು ವೆಚ್ಚವನ್ನು ಕಡಿತಗೊಳಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

Written by - Puttaraj K Alur | Last Updated : Jun 26, 2022, 11:07 AM IST
  • ಪಾಕಿಸ್ತಾನದಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಚಹಾದ ಬೆಲೆಯಲ್ಲಿ ಹೆಚ್ಚಳ
  • ಚಹಾದ ಬದಲು ಲಸ್ಸಿ & ಸಟ್ಟು ಸ್ಥಳೀಯ ಪಾನೀಯ ಪ್ರೋತ್ಸಾಹಿಸಲು ಮನವಿ
  • ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗ
Financial crisis: ಪಾಕಿಸ್ತಾನಲ್ಲಿ ಚಹಾ ಬದಲು ಲಸ್ಸಿ ಸೇವಿಸುವಂತೆ ಸುತ್ತೋಲೆ..! title=
ಪಾಕಿಸ್ತಾನದಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ

ನವದೆಹಲಿ: ಪಾಕಿಸ್ತಾನದಲ್ಲಿ ಚಹಾ ಆಮದು ಮೇಲಿನ ವೆಚ್ಚವನ್ನು ಕಡಿತಗೊಳಿಸಿದ ನಂತರ, ಈಗ ಉನ್ನತ ಶಿಕ್ಷಣ ಆಯೋಗವೂ (ಎಚ್‌ಇಸಿ) ಅಲ್ಲಿ ಸಕ್ರಿಯವಾಗಿದೆ. ಜನರಲ್ಲಿನ ಚಹಾದ ಚಟವನ್ನು ಕಡಿಮೆ ಮಾಡಲು ಅವರು ಹೊಸ ಮಾರ್ಗವನ್ನು ಸೂಚಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಉನ್ನತ ಶಿಕ್ಷಣ ಆಯೋಗವು ದೇಶದಲ್ಲಿರುವ ಎಲ್ಲಾ ಕಾಲೇಜುಗಳ ಉಪಕುಲಪತಿಗಳಿಗೆ ಚಹಾದ ಬದಲಿಗೆ ಲಸ್ಸಿ ಮತ್ತು ಸಟ್ಟು ಎನಿರ್ಜಿ ಡ್ರಿಂಕ್ಸ್‍ಗಳಂತಹ ಸ್ಥಳೀಯ ಪಾನೀಯಗಳನ್ನು ಪ್ರೋತ್ಸಾಹಿಸಲು ಸಲಹೆ ನೀಡಿದೆ.

ಇದನ್ನೂ ಓದಿ: ಭಾರತಕ್ಕೆ 4,393.70 ಕೋಟಿ ರೂ.ಸಾಲದ ಅನುಮೋದನೆ ನೀಡಿದ ವಿಶ್ವಬ್ಯಾಂಕ್

ಸ್ಥಳೀಯ ಚಹಾ ತೋಟ ಉತ್ತೇಜಿಸಲು ಮನವಿ

ಈ ರೀತಿ ಮಾಡುವುದರಿಂದ ಉದ್ಯೋಗಾವಕಾಶ ಹೆಚ್ಚುವುದಲ್ಲದೆ, ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಸಾರ್ವಜನಿಕರಿಗೆ ಆದಾಯವನ್ನೂ ನೀಡುತ್ತದೆ ಎಂದು ಎಚ್‌ಇಸಿ ಹೇಳಿದೆ. ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟನ್ನು ಉಲ್ಲೇಖಿಸಿ ಮಾತನಾಡಿರುವ ಉನ್ನತ ಶಿಕ್ಷಣ ಆಯೋಗದ ಹಂಗಾಮಿ ಅಧ್ಯಕ್ಷರು, ‘ಈ ತೊಂದರೆಯಿಂದ ಹೊರಬರಲು ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಪರಿಹಾರ ಒದಗಿಸಲು ಹೊಸ ಮಾರ್ಗಗಳ ಕುರಿತು ಯೋಚಿಸಲು ‘ನಾಯಕತ್ವದ ಪಾತ್ರ’ ವಹಿಸುವಂತೆ ಉಪಕುಲಪತಿಗಳಿಗೆ ಮನವಿ ಮಾಡಿದ್ದಾರೆ. ಲಸ್ಸಿ ಮತ್ತು ಸಟ್ಟು ಎನರ್ಜಿ ಡ್ರಿಂಕ್ಸ್‍ಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಸಮಸ್ಯೆಯನ್ನು ಎದುರಿಸಲು ಆಯೋಗವು ಇತರ ಕೆಲವು ಕ್ರಮಗಳನ್ನು ಸೂಚಿಸಿದೆ. ಇವುಗಳ ಪೈಕಿ ಒಂದು ಸ್ಥಳೀಯ ಚಹಾ ತೋಟಗಳ ಪ್ರಚಾರ. ಸ್ಥಳೀಯ ಚಹಾ ತೋಟಗಳನ್ನು ಉತ್ತೇಜಿಸಲು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪೋಸ್ಟ್‌ ಗ್ರಾಜುಯೇಟ್‌ ವರ್ಕ್‌ ಪರ್ಮಿಟ್‌ ವಿಸ್ತರಿಸಲು ಕೆನಡಾ ನಿರ್ಧಾರ

ಕಡಿಮೆ ಟೀ ಸೇವಿಸುವಂತೆ ಮನವಿ

ಇತ್ತೀಚೆಗಷ್ಟೇ ಪಾಕಿಸ್ತಾನದ ಯೋಜನಾ ಸಚಿವರು ಚಹಾ ಸೇವನೆಯನ್ನು ಕಡಿಮೆ ಮಾಡುವಂತೆ ತಮ್ಮ ದೇಶದ ಜನರಿಗೆ ಒತ್ತಾಯಿಸಿದ್ದರು. ಇದಾದ ಕೆಲವೇ ದಿನಗಳ ನಂತರ ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗದಿಂದ ಈ ಸಲಹೆ ಬಂದಿದೆ. ಪಾಕಿಸ್ತಾನವು ಪ್ರಸ್ತುತ ಚಹಾವನ್ನು ಆಮದು ಮಾಡಿಕೊಳ್ಳಲು ಹಣವನ್ನು ಎರವಲು ಅಂದರೆ ಸಾಲ ಪಡೆಯಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಚಿವರು, ‘ನಾನು ದೇಶದ ಜನರಿಗೆ ಪ್ರತಿದಿನ 1-2 ಕಪ್ ಚಹಾವನ್ನು ಕಡಿತಗೊಳಿಸುವಂತೆ ಮನವಿ ಮಾಡುತ್ತೇನೆ. ಪಾಕಿಸ್ತಾನದ ಆರ್ಥಿಕತೆ ಸುಧಾರಿಸುವವರೆಗೂ ಈ ಬಗ್ಗೆ ಗಮನಹರಿಸುವಂತೆ’ ಅವರು ಮನವಿ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News