Tokyo Olympics: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿರಲು ಉತ್ತರ ಕೊರಿಯಾ ನಿರ್ಧಾರ

Tokyo Olympics: ಉತ್ತರ ಕೊರಿಯಾದ ಕ್ರೀಡಾ ಸಚಿವ ಕಿಮ್ ಇಲ್ ಗುಕ್ (Kim Il Guk) ನೇತೃತ್ವದಲ್ಲಿ ಮಾರ್ಚ್ 25 ರಂದು ನಡೆದ ಉತ್ತರ ಕೊರಿಯಾ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Written by - Yashaswini V | Last Updated : Apr 6, 2021, 12:25 PM IST
  • ದಿನೇ ದಿನೇ ತಾರಕಕ್ಕೇರುತ್ತಿರುವ ಕರೋನಾ ಸಾಂಕ್ರಾಮಿಕದ ಹಿನ್ನಲೆ
  • ಈ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿರಲು ಉತ್ತರ ಕೊರಿಯಾ ನಿರ್ಧಾರ
  • ಮಾರ್ಚ್ 25 ರಂದು ನಡೆದ ಉತ್ತರ ಕೊರಿಯಾ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
Tokyo Olympics: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿರಲು ಉತ್ತರ ಕೊರಿಯಾ ನಿರ್ಧಾರ title=
North Korea will not participate in Tokyo Olympics

ಸಿಯೋಲ್: ದಿನೇ ದಿನೇ ತಾರಕಕ್ಕೇರುತ್ತಿರುವ ಕರೋನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಈ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿರಲು ಉತ್ತರ ಕೊರಿಯಾ ನಿರ್ಧರಿಸಿದೆ. ಕೋವಿಡ್ 19 (COVID-19) ಸಾಂಕ್ರಾಮಿಕದಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿರುವ  ಉತ್ತರ ಕೊರಿಯಾದ ಕ್ರೀಡಾ ಸಚಿವಾಲಯ ಸಾಂಕ್ರಾಮಿಕ ಸಮಯದಲ್ಲಿ ದೇಶವು ತನ್ನ ಕ್ರೀಡಾಪಟುಗಳನ್ನು ರಕ್ಷಿಸಲು ಬಯಸಿದೆ, ಆದ್ದರಿಂದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ  (Tokyo Olympics) ಭಾಗವಹಿಸುವುದಿಲ್ಲ ಎಂದು ಹೇಳಿದೆ.

ಒಲಿಂಪಿಕ್ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರ :
ಉತ್ತರ ಕೊರಿಯಾದ ಕ್ರೀಡಾ ಸಚಿವ ಕಿಮ್ ಇಲ್ ಗುಕ್ (Kim Il Guk) ನೇತೃತ್ವದಲ್ಲಿ ಮಾರ್ಚ್ 25 ರಂದು ನಡೆದ ಉತ್ತರ ಕೊರಿಯಾ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,  ಸಚಿವಾಲಯದ ವೆಬ್‌ಸೈಟ್ ಜೇಸನ್ ಸ್ಪೋರ್ಟ್ಸ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ '  ಕರೋನಾ ವೈರಸ್‌ನಿಂದ ಉಂಟಾಗುವ ಜಾಗತಿಕ ಆರೋಗ್ಯ ಬಿಕ್ಕಟ್ಟಿನಿಂದ ತನ್ನ ಕ್ರೀಡಾಪಟುಗಳನ್ನು ರಕ್ಷಿಸಲು ಉತ್ತರ ಕೊರಿಯಾ ಬಯಸಿದೆ. ಹಾಗಾಗಿ 32 ನೇ ಒಲಿಂಪಿಕ್ಸ್‌ನಲ್ಲಿ (Tokyo Olympics) ಭಾಗವಹಿಸದಿರಲು ಉತ್ತರ ಕೊರಿಯಾ ನಿರ್ಧರಿಸಿದೆ' ಎಂದು ಬರೆಯಲಾಗಿದೆ.

ಇದನ್ನೂ ಓದಿ - ಕೊರೋನಾ ವೈರಸ್ ಹಿನ್ನಲೆಯಲ್ಲಿ 2021ಕ್ಕೆ ಟೋಕಿಯೊ ಒಲಿಂಪಿಕ್ಸ್ ಮುಂದೂಡಿಕೆ

ಮುಂದಿನ 5 ವರ್ಷಗಳಲ್ಲಿ ವೃತ್ತಿಪರ ಕ್ರೀಡಾ ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿಪಡಿಸುವುದು, ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆಲ್ಲುವುದು ಮತ್ತು ಸಾರ್ವಜನಿಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವುದು ಮುಂತಾದ ವಿಷಯಗಳ ಬಗ್ಗೆ ಉತ್ತರ ಕೊರಿಯಾ (North Korea) ಒಲಿಂಪಿಕ್ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ - ಅಪರೂಪದ ಕಾರ್ಡ್‌ನೊಂದಿಗೆ ‘Happy New Year’ ತಿಳಿಸಿದ Kim Jong-un : ಶಾಕ್ ಆದ ಜನ

2032 ಒಲಿಂಪಿಕ್ ಕ್ರೀಡಾಕೂಟ:
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಒಟ್ಟಾಗಿ 2032 ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಬಗ್ಗೆ ಚರ್ಚೆ ನಡೆದಿದೆ. 2032 ರ ಬೇಸಿಗೆ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಗೆ ಸಹ-ಆತಿಥ್ಯ ವಹಿಸಲು ದಕ್ಷಿಣ ಕೊರಿಯಾ ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್ಯಾಂಗ್ ಜೊತೆ ಜಂಟಿ ಹಕ್ಕು ಸ್ಥಾಪನೆಗೆ ಸಹಿ ಹಾಕಿದೆ ಎಂಬ ವಿಷಯಗಳು ಮುನ್ನಲೆಗೆ ಬಂದ ಸಂದರ್ಭದಲ್ಲಿ ಈ ಬಗ್ಗೆ ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News