ಯಾವುದೇ ವ್ಯಾಯಾಮ ಬೇಡ, 7 ದಿನ ಇದನ್ನು ಸೇವಿಸಿ! ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗಿ ಹೋಗುತ್ತದೆ!

weight loss tips: ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ನಾವು ಇಂದು ವಿವಿಧ ದೈಹಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದರಿಂದ 30ರಿಂದ 40 ವರ್ಷ ದಾಟಿದ ಕೂಡಲೇ ನಾನಾ ರೋಗಗಳು ನಮ್ಮ ದೇಹವನ್ನು ಆವರಿಸಿಕೊಳ್ಳುತ್ತದೆ. ನಮ್ಮ ಜೀವನ ಶೈಲಿಯ ಬದಲಾವಣೆಯಿಂದಾಗಿ ನಮ್ಮ ದೇಹದಲ್ಲಿ ಹಲವಾರು ರೋಗಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಈ ವಿವಿಧ ರೋಗಗಳಿಗಾಗಿ ವೈದ್ಯರನ್ನು ಸಂಪರ್ಕಿಸುತ್ತಾ, ಪ್ರತಿಯೊಂದು ರೋಗಕ್ಕೂ ಔಷಧಿಯನ್ನು ತೆಗೆದುಕೊಳ್ಳುತ್ತಾ ನಮ್ಮ ಆರೋಗ್ಯವನ್ನು ನಾವು ಮತ್ತಷ್ಟು ಕೆಡಸಿಕೊಳ್ಳುತ್ತೇವೆ. 

Written by - Zee Kannada News Desk | Last Updated : Sep 19, 2024, 12:59 PM IST
  • ಸಾಮನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಎಂದರೆ ಹೊಟ್ಟೆಯ ಕೊಬ್ಬು ಎಷ್ಟೆ ಪ್ರಯತ್ನ, ಅಲ್ಲದೆ ವ್ಯಾಯಾಮ ಮಾಡಿದರು ಸಹ ಹೊಟ್ಟೆಯ ಕೊಬ್ಬು ಕರಗಿಸಲಾಗುವುದಿಲ್ಲ.
  • ಮನೆಯಲ್ಲಿಯೇ ತಯಾರಿಸಿದ ಕೆಲವೊಂದು ಪಾನಿಯಾಗಳನ್ನು ಸೇವಿಸುವುದರಿಂದ ಅಲ್ಲದೆ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ತಟ್ಟನೆ ಮಾಯವಾಗಿಸಬಹುದು.
ಯಾವುದೇ ವ್ಯಾಯಾಮ ಬೇಡ, 7 ದಿನ ಇದನ್ನು ಸೇವಿಸಿ! ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗಿ ಹೋಗುತ್ತದೆ!  title=

weight loss tips: ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ನಾವು ಇಂದು ವಿವಿಧ ದೈಹಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದರಿಂದ 30ರಿಂದ 40 ವರ್ಷ ದಾಟಿದ ಕೂಡಲೇ ನಾನಾ ರೋಗಗಳು ನಮ್ಮ ದೇಹವನ್ನು ಆವರಿಸಿಕೊಳ್ಳುತ್ತದೆ. ನಮ್ಮ ಜೀವನ ಶೈಲಿಯ ಬದಲಾವಣೆಯಿಂದಾಗಿ ನಮ್ಮ ದೇಹದಲ್ಲಿ ಹಲವಾರು ರೋಗಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಈ ವಿವಿಧ ರೋಗಗಳಿಗಾಗಿ ವೈದ್ಯರನ್ನು ಸಂಪರ್ಕಿಸುತ್ತಾ, ಪ್ರತಿಯೊಂದು ರೋಗಕ್ಕೂ ಔಷಧಿಯನ್ನು ತೆಗೆದುಕೊಳ್ಳುತ್ತಾ ನಮ್ಮ ಆರೋಗ್ಯವನ್ನು ನಾವು ಮತ್ತಷ್ಟು ಕೆಡಸಿಕೊಳ್ಳುತ್ತೇವೆ.

ಆದರೆ ಸಮಸ್ಯೆಗಳು ಚಿಕ್ಕದಾಗಿರುವಾಗ ನಾವು ಮನೆಯಲ್ಲಿಯೇ ಕೆಲವು ಸಲಹೆಗಳನ್ನು ಪಾಲಿಸುವುದರಿಂದ ಸರಳವಾಗಿ ನಾವು ಈ ಸಮಸ್ಯೆಗಳನ್ನು ಗುಣಪಡಿಸಬಹುದು. ಮತ್ತು ಅವುಗಳು ಉಲ್ಬಣಗೊಳ್ಳುವುದನ್ನು ತಡೆಯಬಹುದು. ಎಲ್ಲರನ್ನೂ ಸಾಮನ್ಯವಾಗಿ ಕಾಡುವ ಸಮಸ್ಯೆ ಎಂದರೆ ಹೊಟ್ಟೆಯ ಕೊಬ್ಬು ಎಷ್ಟೆ ಪ್ರಯತ್ನ ಎಷಟೆ ಡಯಟ್‌ ಅಷ್ಟೆ ಅಲ್ಲದೆ ವ್ಯಾಯಾಮ ಮಾಡಿದರು ಸಹ ಹೊಟ್ಟೆಯ ಕೊಬ್ಬು ಕೆಲವೊಮ್ಮೆ ಕರಗಿಸಲಾಗುವುದಿಲ್ಲ. ಹೀಗಿರುವಾಗ, ಮನೆಯಲ್ಲಿಯೇ ತಯಾರಿಸಿದ ಕೆಲವೊಂದು ಪಾನಿಯಾಗಳನ್ನು ಸೇವಿಸುವುದರಿಂದ ಅಲ್ಲದೆ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ತಟ್ಟನೆ ಮಾಯವಾಗಿಸಬಹುದು. ಅದು ಹೇಗೆ ತಿಳಿಯಲು ಈ ಸ್ಟೋರಿ ಓದಿ...

ರಾತ್ರಿಯ ಊಟವನ್ನು ತಪ್ಪಿಸಿ ಇವುಗಳನ್ನು ಸೇವನೆ ಮಾಡುವುದರಿಂದ, ನೀವು ನಿಮ್ಮ ಹೊಟ್ಟೆಯ ಕೊಬ್ಬನ್ನು ತಟ್ಟನೆ ಕರಗಿಸಬಹುದು. ಈ ಪದಾರ್ಥಗಳ ಸೇವನೆ ಹೊಟ್ಟೆಯ ಕೊಬ್ಬನ್ನು ಕರಗಿಸುವುದಷ್ಟೆ ಅಲ್ಲದೆ, ಉರಿಯೂತವನ್ನು ಕಡಿಮೆ ಮಾಡಿ, ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .

ಸೇಬು

ಸೇಬುಗಳು ಕಡಿಮೆ ಕ್ಯಾಲೋರಿ ಹಾಗೂ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಇವುಗಳನ್ನು ಸೇವಿಸುವುದರಿಂದ ನಿಮಗೆ ಶೀಘ್ರವೇ ಹೊಟ್ಟೆ ತುಂಬಿದಂತೆ ಅನಿಸುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ಇತರ ಅಂಶಗಳು ನಿಮ್ಮ ದೇಹಕ್ಕೆ ಒಳ್ಳೆಯದು. ನಿಮ್ಮ ಜೀರ್ಣಾಂಗವ್ಯೂಹವನ್ನು ನಿಯಂತ್ರಿಸುವ ಪ್ರಮುಖ ಹಣ್ಣುಗಳಲ್ಲಿ ಸೇಬು ಒಂದಾಗಿದೆ. ಇದು ನಿಮ್ಮ ಮೂತ್ರಪಿಂಡಗಳು ಮತ್ತು ಯಕೃತ್ತಿನ ಆರೋಗ್ಯವನ್ನು  ಸುಧಾರಿಸಲು ಸಹಾಯ ಮಾಡುವುದಷ್ಟೆ ಅಲ್ಲದೆ, ಮಾಲಿಕ್ ಮತ್ತು ಟಾರ್ಟಾರಿಕ್ ಆಮ್ಲವನ್ನು ಒಳಗೊಂಡಿದ್ದು, ನಿಮ್ಮ ಬೊಜ್ಜನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಹೀಗೆ ಸೇವಿಸಿ 2 ನಿಮಿಷದಲ್ಲಿ ತಟ್‌ ಅಂತ ಕಡಿಮೆಯಾಗುತ್ತೆ ಬ್ಲಡ್‌ ಶುಗರ್‌!

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ಮೆಗ್ನೀಸಿಯಮ್ ಮತ್ತು ಬಿ ಜೀವಸತ್ವಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ.ಬಾಳೆಹಣ್ಣು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಸ್ನಾಯು ನೋವುಗಳನ್ನು ನಿವಾರಿಸುತ್ತದೆ. ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಬಾಳೆಹಣ್ಣನ್ನು ಸೇವಿಸುವುದರಿಂದ ನಿಮ್ಮ ಬೊಜ್ಜು ಕರಗಿ ನೀರಾಗುತ್ತದೆ.

ರೆಸಿಪಿ ತಯಾರಿಸಲು ಬೇಕಾಗುವ ಸಾಮಾಗ್ರಿ 

ಸೇಬು - 1
ಬಾಳೆಹಣ್ಣು - 2
ಓಟ್ಸ್ - 2 ಚಮಚ
ಹಾಲು - ಒಂದು ಕಪ್

ಪಾಕವಿಧಾನ

ಮೊದಲಿಗೆ ಮಿಕ್ಸರ್ ಜಾರ್‌ನಲ್ಲಿ ಕತ್ತರಿಸಿದ ಬಾಳೆಹಣ್ಣು, ಸೇಬು, ಓಟ್ಸ್ ಮತ್ತು ಹಾಲನ್ನು ಸೇರಿಸಿ ಮತ್ತು ಚೆನ್ನಾಗಿ ರುಬ್ಬಿ. ಇದನ್ನು ರಾತ್ರಿಯ ಊಟದ ಜೊತೆಗೆ ಅಥವ ಊಟದ ನಂತರ ಸೇವಿಸಿ. ಇದನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ದೊರೆಯುತ್ತದೆ. ದೇಹಕ್ಕೆ ಪೋಷಕಾಂಶಗಳು, ಫೈಬರ್ ಮತ್ತು ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿ ಯಾವುದೇ ಕ್ಯಾಲೋರಿಗಳಿಲ್ಲ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್, ಹೃದ್ರೋಗ ಮತ್ತು ಪಾರ್ಶ್ವವಾಯು ತಡೆಯುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಕರಗಿ ನೀರಾಗುತ್ತದೆ. ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಿಮ್ಮ ದೇಹದಿಂದ ತ್ಯಾಜ್ಯವನ್ನು ಹೊರಹಾಕುತ್ತದೆ. ಈ ಪಾನಿಯಾ ಎಷ್ಟು ಆರೋಗ್ಯಕರವೂ ಅಷ್ಟೆ ರುಚಿಕರ ಕೂಡ ಹೌದು, ಈ ರೀತಿ ಮಾಡುವ ಮೊದಲು ವೈದ್ಯರ ಪ್ರಿಸ್ಕ್ರಿಪ್ಷನ್ ತೆಗೆದುಕೊಳ್ಳುವುದು ಉತ್ತಮ.

ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಅದನ್ನು ಬರೆಯಲು ನಾವು ಮನೆಯ ಪಾಕವಿಧಾನಗಳು ಮತ್ತು ಸಾಮಾನ್ಯ ಜ್ಞಾನದ ಸಹಾಯವನ್ನು ತೆಗೆದುಕೊಂಡಿದ್ದೇವೆ. ನೀವು ಯಾವುದೇ ಆರೋಗ್ಯ ಸಂಬಂಧಿತ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News