ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಗುಂಡಿನ ದಾಳಿ! ಪೊಲೀಸ್ ಅಧಿಕಾರಿ ಸೇರಿ 5 ಜನರ ಸಾವು

ಶುಕ್ರವಾರ ಉತ್ತರ ಕೆರೊಲಿನಾದಲ್ಲಿ ಮತ್ತೆ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಇಲ್ಲಿಯವರೆಗೆ 5 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  

Written by - Puttaraj K Alur | Last Updated : Oct 14, 2022, 08:23 AM IST
  • ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿಯ ಘಟನೆಗಳು ಮುಂದುವರೆದಿವೆ
  • ಉತ್ತರ ಕೆರೊಲಿನಾದಲ್ಲಿ ಗುಂಡಿನ ದಾಳಿಗೆ ಪೊಲೀಸ್ ಅಧಿಕಾರಿ ಸೇರಿ ಐವರು ಬಲಿ
  • ಶೂಟರ್ ವಶಕ್ಕೆ ಪಡೆದ ಪೊಲೀಸರಿಂದ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ
ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಗುಂಡಿನ ದಾಳಿ! ಪೊಲೀಸ್ ಅಧಿಕಾರಿ ಸೇರಿ 5 ಜನರ ಸಾವು title=
ಉತ್ತರ ಕೆರೊಲಿನಾದಲ್ಲಿ ಗುಂಡಿನ ದಾಳಿ

ನವದೆಹಲಿ: ಅಮೆರಿಕದಲ್ಲಿ ಗುಂಡಿನ ದಾಳಿಯ ಘಟನೆಗಳು ಮುಂದುವರೆದಿವೆ. ಎಷ್ಟೇ ಪ್ರಯತ್ನ ಪಟ್ಟರೂ ಗುಂಡಿನ ದಾಳಿಯ ಘಟನೆಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ ಉತ್ತರ ಕೆರೊಲಿನಾದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಪೊಲೀಸ್ ಅಧಿಕಾರಿ ಸೇರಿ 5 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಸಾವನ್ನಪ್ಪುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ‍್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಸತಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ 5 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 5 ಗಂಟೆಗಳ ಕಾಲ ಈ ಘಟನೆ ಸಂಭವಿಸಿದೆ ಎಂದು ರೇಲಿ ಮೇಯರ್ ಮೇರಿ-ಆನ್ ಬಾಲ್ಡ್ವಿನ್ ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯಲ್ಲಿ ಕೈಗೊಂಡಿದ್ದಾರೆ.

ಇದನ್ನೂ ಓದಿ: ಚೀನಾಗೆ ಮತ್ತೆ ಬಂದ ಕೊರೊನಾ ಮಹಾಮಾರಿ, ಲಾಕ್ ಡೌನ್ ಜಾರಿ

ಇದು ನಮಗೆ ದುಃಖದ ದಿನವಾಗಿದೆ

ದಾಳಿಯ ನಂತರ ರೇಲಿ ಮೇಯರ್ ಮೇರಿ-ಆನ್ ಬಾಲ್ಡ್ವಿನ್ ಮಾತನಾಡಿದ್ದು, ‘ರೇಲಿ ನಗರಕ್ಕೆ ಇದು ದುಃಖದ ದಿನವಾಗಿದೆ, ನಾವೆಲ್ಲರೂ ಇದೀಗ ಒಗ್ಗೂಡಬೇಕಾಗಿದೆ. ಈ ಘಟನೆಯಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡವರನ್ನು ನಾವು ಬೆಂಬಲಿಸಬೇಕಾಗಿದೆ. ಹತ್ಯೆಯಾದ ಪೊಲೀಸ್ ಅಧಿಕಾರಿ ಮತ್ತು ಗಾಯಗೊಂಡಿರುವವರ ಕುಟುಂಬವನ್ನು ನಾವು ಬೆಂಬಲಿಸಬೇಕಾಗಿದೆ’ ಅಂತಾ ಹೇಳಿದ್ದಾರೆ.

ಶೂಟರ್ ವಶಕ್ಕೆ

ರೇಲಿ ಪೊಲೀಸ್ ಇಲಾಖೆಯ ಪ್ರಕಾರ, ಇಲ್ಲಿಯವರೆಗೆ 5 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಈ ಪೈಕಿ ಒಬ್ಬ ಕರ್ತವ್ಯರಹಿತ ಪೊಲೀಸ್ ಅಧಿಕಾರಿಯೂ ಸೇರಿದ್ದಾರೆ. ಇದಲ್ಲದೆ ಒಬ್ಬ ಅಧಿಕಾರಿಗೆ ಗಂಭೀರ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೆಲವೇ ಹೊತ್ತಿನಲ್ಲಿ ಶೂಟರ್‌ನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: "ಭಾರತವು ಈ ಕತ್ತಲೆಯ ದಿಗಂತದಲ್ಲಿ ಪ್ರಕಾಶಮಾನವಾದ ತಾಣ"

ಅಮೆರಿಕದಲ್ಲಿ ಫೈರಿಂಗ್ ದೊಡ್ಡ ಸಮಸ್ಯೆ

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ದಿನದಿಂದ ದಿನಕ್ಕೆ ದೊಡ್ಡ ಸಮಸ್ಯೆಯಾಗುತ್ತಿದೆ. 2021ರಲ್ಲಿ ಸುಮಾರು 49,000 ಜನರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಅಂದರೆ ಪ್ರತಿದಿನಕ್ಕೆ 130ಕ್ಕೂ ಹೆಚ್ಚು ಜನರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.  

ಈ ತಿಂಗಳ ದೊಡ್ಡ ಘಟನೆ

ಈ ತಿಂಗಳ 6ರಂದು ಮೆಕ್ಸಿಕೋದಲ್ಲಿ ಗುಂಡಿನ ದಾಳಿಯ ಪ್ರಮುಖ ಘಟನೆ ಬೆಳಕಿಗೆ ಬಂದಿದೆ. ನಂತರ ಮೆಕ್ಸಿಕನ್ ಸಿಟಿ ಹಾಲ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದರು. ಮೃತರಲ್ಲಿ ಮೇಯರ್ ಕೂಡ ಸೇರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News