LOCKDOWN ಅಥವಾ ಯಾವುದೇ ನಿರ್ಬಂಧವಿಲ್ಲದೆ Coronavirus ಮೇಲೆ ಗೆಲುವು ಸಾಧಿಸಿದೆ ಈ ದೇಶ

ಕೊರೊನಾ ವೈರಸ್ ವಿಶ್ವಾದ್ಯಂತ ತನ್ನ ಜಾಲ ಪಸರಿಸಿದೆ. ಚೀನಾದಲ್ಲಿ ಹುಟ್ಟಿಕೊಂಡ ಈ ವೈರಸ್ ಇಟಲಿ, ಅಮೇರಿಕಾ, ಫ್ರಾನ್ಸ್, ಬ್ರಿಟನ್ ಹಾಗೂ ಭಾರತಗಳಂತಹ ದೇಶಗಳಲ್ಲಿ ತನ್ನ ಭೀತಿ ಹುಟ್ಟಿಸಿದೆ.

Last Updated : Mar 25, 2020, 06:49 PM IST
LOCKDOWN ಅಥವಾ ಯಾವುದೇ ನಿರ್ಬಂಧವಿಲ್ಲದೆ Coronavirus ಮೇಲೆ ಗೆಲುವು ಸಾಧಿಸಿದೆ ಈ ದೇಶ title=

ಕೊರೊನಾ ವೈರಸ್ ವಿಶ್ವಾದ್ಯಂತ ತನ್ನ ಜಾಲ ಪಸರಿಸಿದೆ. ಚೀನಾದಲ್ಲಿ ಹುಟ್ಟಿಕೊಂಡ ಈ ವೈರಸ್ ಇಟಲಿ, ಅಮೇರಿಕಾ, ಫ್ರಾನ್ಸ್, ಬ್ರಿಟನ್ ಹಾಗೂ ಭಾರತಗಳಂತಹ ದೇಶಗಳಲ್ಲಿ ತನ್ನ ಭೀತಿ ಹುಟ್ಟಿಸಿದೆ. ಬೆಂಕಿಯಂತೆ ಹರಡುವ ಈ ವೈರಸ್ ಚೀನಾ, ಇಟಲಿ ಹಾಗೂ ಸ್ಪೇನ್ ಗಳಲ್ಲಿ ಅಪಾರ ಹಾನಿ ಉಂಟು ಮಾಡಿದೆ. ಇತ್ತ ಭಾರತದಲ್ಲಿಯೂ ಹೆಚ್ಚಾಗುತ್ತಿರುವ ಪ್ರಕರಣಗಳ ಸಂಖ್ಯೆ ಉತ್ತಮ ಸಂಕೇತ ನೀಡುತ್ತಿಲ್ಲ. ಸದ್ಯ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿಗೆ ಗುರಿಯಾದವರ ಸಂಖ್ಯೆ 562ಕ್ಕೆ ತಲುಪಿದೆ. ಅಷ್ಟೇ ಅಲ್ಲ ಈ ಮಾರಕ ಕಾಯಿಲೆಗೆ ಬಲಿಯಾದವರ ಸಂಖ್ಯೆ 10ಕ್ಕೆ ತಲುಪಿದೆ. ಇನ್ನೊಂದೆಡೆ ಈ ಮಾರಕ ಕಾಯಿಲೆಯ ವಿರುದ್ಧ ಹೋರಾಟ ನಡೆಸಿ ಬದುಕುಳಿದವರ ಸಂಖ್ಯೆ ಕೂಡ 45ಕ್ಕೆ ತಲುಪಿದೆ.

ಕೊರೊನಾ ಸೋಲಿಸಿದ ಮೊದಲ ದೇಶ ಇದು
ಮಾರಕ ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತ ಸತತವಾಗಿ ಪ್ರಯತ್ನ ನಡೆಸುತ್ತಲೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಕಠಿಣ ಕ್ರಮಕೈಗೊಳ್ಳುತ್ತಿವೆ. ಇದೆ ಕ್ರಮದಲ್ಲಿ ಏಪ್ರಿಲ್ 14ರವರೆಗೆ ಭಾರತದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ . ಹೀಗಾಗಿ ಮುಂಬರುವ 21 ದಿನಗಳಲ್ಲಿ ಸದ್ಯದ ಸಧ್ಯದ ಸ್ಥಿತಿಯ ಮೇಲೆ ನಾವು ನಿಯಂತ್ರಣ ಹೇರಲು ವಿಫಲರಾದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಗಿಸಲಿದೆ. ಆದರೆ, ಚೀನಾದಲ್ಲಿ ಸದ್ಯ ಸ್ಥಿತಿ ಸುಧಾರಿಸುತ್ತಿದ್ದು, ಕಳೆದ ಕೆಲ ದಿನಗಳಿಂದ ಅಲ್ಲಿನ ಹೊಸ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಭಾರಿ ಇಳಿಕೆಯಾಗಿದೆ. ಆದರೆ, ಇಂತಹ ಜಾಗತಿಕ ಬಿಕ್ಕಟ್ಟಿನಲ್ಲಿ ಒಂದು ದೇಶ ಕೊರೊನಾ ವೈರಸ್ ಅನ್ನು ಮಟ್ಟಹಾಕಲು ಸಂಪೂರ್ಣ ಯಶಸ್ವಿಯಾಗಿದೆ ಅಂದರೆ ನೀವು ನಂಬುತ್ತೀರಾ? ಅಷ್ಟೇ ಯಾಕೆ ಈ ದೇಶದಲ್ಲಿ ಕೊರೊನಾ ವೈರಸ್ ಅನ್ನು ಮಟ್ಟಹಾಕಲು ಯಾವುದೇ ರೀತಿಯ ಲಾಕ್ ಡೌನ್ ಕೂಡ ಮಾಡಲಾಗಿಲ್ಲ. ಮಾರುಕಟ್ಟೆಗಳನ್ನೂ ಸಹ ಬಂದ್ ಮಾಡಲಾಗಿಲ್ಲ. ಯಾವುದೇ ರೀತಿಯ ನಿರ್ಬಂಧನೆಗಳನ್ನು ಸಹ ವಿಧಿಸಲಾಗಿಲ್ಲ. ಇಂತಹ ದೇಶದಿಂದ ನಾವು ಪಾಠ ಕಲಿಯಬೇಕಾದ ಅವಶ್ಯಕತೆ ಇದೆ.

ಕೊರೊನಾ ವೈರಸ್ ಮೇಲೆ ವಿಜಯಪತಾಕೆ ಹಾರಿಸಿದ ದಕ್ಷಿಣ ಕೊರಿಯಾ
ಚೀನಾ ಹಾಗೂ ಭಾರತ ದೇಶದ ಮಧ್ಯೆ ನೇಪಾಳ ದೇಶವಿದೆ. ಆದರೆ, ಚೀನಾ ದೇಶದ ಗಡಿಗೆ ಹೊಂದಿಕೊಂಡಂತೆಯೇ ಇರುವ ದೇಶ ಎಂದರೆ ದಕ್ಷಿಣ ಕೊರಿಯಾ. ಚೀನಾದ ವುಹಾನ್ ಪ್ರಾಂತ್ಯದಲ್ಲಿನ ಜನರನ್ನು ಮೊದಲು ತನ್ನ ಕಪಿಮುಷ್ಠಿಯಲ್ಲಿ ಪಡೆದ ಕೊರೊನಾ ವೈರಸ್ ನಂತರ ದಕ್ಷಿಣ ಕೊರಿಯಾದಲ್ಲಿ ತನ್ನ ಪಾದ ಪಸರಿಸಿತ್ತು. ಕೊರೊನಾ ಸೋಂಕು ಹರಡಿದ ದೇಶಗಳ ಪಟ್ಟಿಯಲ್ಲಿ ದಕ್ಷಿಣ ಕೊರಿಯಾ ಸದ್ಯ ಎರಡನೇ ಸ್ಥಾನದಲ್ಲಿದೆ. ಆರಂಭದಿಂದ ಇಲ್ಲಿಯವರೆಗೆ ದಕ್ಷಿಣ ಕೊರಿಯಾದಲ್ಲಿ ಕೊರೊನಾ ಸೋಂಕಿನ ಒಟ್ಟು 9137 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣಗಳಲ್ಲಿ ಇದುವರೆಗೆ ಒಟ್ಟು 3500 ಕ್ಕೂ ಅಧಿಕ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿದ್ದಾರೆ. ಕೇವಲ 129 ಜನರು ಮಾತ್ರ ಬಲಿಯಾಗಿದ್ದಾರೆ. ಸದ್ಯ ಅಲ್ಲಿ ಕೇವಲ 59 ಗಂಭೀರ ಸೊಂಕಿನ ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ.

ಯಾವುದೇ ಲಾಕ್ ಡೌನ್ ಇಲ್ಲ, ಯಾವುದೇ ಮಾರುಕಟ್ಟೆ ಬಂದಾಗಿಲ್ಲ 
ದಕ್ಷಿಣ ಕೊರಿಯಾದಲ್ಲಿ ಮಾರ್ಚ್ ತಿಂಗಳ 2ನೇ ವಾರದಲ್ಲಿಯೇ ಕೊರೊನಾ ಸೋಂಕಿನ ಸುಮಾರು 800೦ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆದರೆ, ಕಳೆದ ಕೆಲ ದಿನಗಳಲ್ಲಿ ಅಲ್ಲಿ ಕೇವಲ 12 ಹೊಸ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಮಾರ್ಚ್ ತಿಂಗಳ ಎರಡನೇ ವಾರದ ಬಳಿಕ ದಕ್ಷಿಣ ಕೊರಿಯಾದ ನಾಗರಿಕರು ಅಧ್ಬುತ ಜಾಗರೂಕತೆ ಹಾಗೂ ಎಚ್ಚರಿಕೆಯನ್ನು ಪ್ರದರ್ಶಿಸಿದ್ದಾರೆ. ಇಲ್ಲಿ ವಿಶೇಷತೆ ಏನೆಂದರೆ, ಈ ದೇಶದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಬಂದ ಬಳಿಕ ಮತ್ತು ನಂತರ ಕೂಡ ಯಾವುದೇ ಲಾಕ್ ಡೌನ್ ಅಥವಾ ಮಾರುಕಟ್ಟೆ ಬಂದ್ ನಡೆಸಲಾಗಿಲ್ಲ. ನಾಗರಿಕರ ಮೇಲೂ ಕೂಡ ಯಾವುದೇ ರೀತಿಯ ಬಂಧನ ವಿಧಿಸಲಾಗಿಲ್ಲ. ಆದರೂ ಕೂಡ ಈ ದೇಶ ಕೊರೊನಾ ವೈರಸ್ ಅನ್ನು ಮತ್ತಹಾಕುವಲ್ಲಿ ಯಶಸ್ವಿಯಾಗಿದೆ.

ಈ ದೇಶ ಕೊರೊನಾ ವೈರಸ್ ಮೇಲೆ ವಿಜಯ ಸಾಧಿಸಿದ್ದಾದರೂ ಹೇಗೆ..?
ಕೊರೊನಾ ವೈರಸ್ ಗೆ ದಕ್ಷಿಣ ಕೊರಿಯಾದ ನಾಗರಿಕರು ಭಯಪಡದೆ ದಿಟ್ಟತನ ಮೆರೆದಿದ್ದಾರೆ. ದೇಶದ ನಾಗರಿಕರೆ ಈ ಮಾರಕ ವೈರಸ್ ಅನ್ನು ಮಟ್ಟ ಹಾಕಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಹಾಗೂ ಅವರು ಕೈಗೊಂಡ ಕ್ರಮಗಳು ಬಹುತೇಕ ಸಫಲವಾಗಿವೆ. ಕೊರೊನಾ ವಿರುದ್ಧ ಹೋರಾಡಲು ದಕ್ಷಿಣ ಕೊರಿಯಾ ಕೈಗೊಂಡ ಕ್ರಮಗಳನ್ನು ಇತರೆ ದೇಶಗಳು ಮಾದರಿಯಾಗಿ ಸ್ವೀಕರಿಸಿವೆ. ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಕಾಂಗ್ ಯುಂಗ್ ವಾ, "ಆರಂಭದಲ್ಲಿ ನಾವು ಕೂಡ ಈ ಮಾರಕ ವೈರಸ್ ಗೆ ಭಯಭೀತರಾದೆವು. ಆದರೆ, ಜನರಲ್ಲಿ ಭೀತಿ ಪಸರಿಸದೆ ಇರಲು ಆರಂಭದಲ್ಲಿ ಕೆಲ ಟೆಸ್ಟ್ ಗಳು ಅನಿವಾರ್ಯವಾದವು. ಸೋಂಕಿನ ಕುರಿತು ತ್ವರಿತ ಟೆಸ್ಟ್ ಹಾಗೂ ಉತ್ತಮ ಚಿಕಿತ್ಸೆಯಿಂದಲೇ ಕೊರೊನಾ ವೈರಸ್ ಅನ್ನು ತಡೆಗಟ್ಟಬಹುದು" ಎಂದಿದ್ದಾರೆ. ಇದೇ ಕಾರಣದಿಂದ ದಕ್ಷಿಣ ಕೊರಿಯಾದಲ್ಲಿ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ ಕೂಡ ತುಂಬಾ ಕಡಿಮೆಯಾಗಿದೆ. ಮಾರ್ಚ್ ತಿಂಗಳ ಅಂತ್ಯದವರೆಗೆ ದಕ್ಷಿಣ ಕೊರಿಯಾದಲ್ಲಿ  ಒಟ್ಟು 600 ಟೆಸ್ಟ್ ಸೆಂಟರ್ ಗಳನ್ನು ತೆರೆಯಲಾಗಿದೆ 50ಕ್ಕೂ ಅಧಿಕ ಡ್ರೈವಿಂಗ್ ಸ್ಟೇಷನ್ ಗಳ ಮೇಲೆ ಸ್ಕ್ರೀನಿಂಗ್ ಪ್ರಕ್ರಿಯ ಆರಂಭಗೊಂಡಿದೆ.

ಯಾವ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ?
ಕೊರೊನಾ ವೈರಸ್ ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ದಕ್ಷಿಣ ಕೊರಿಯಾ, ಕೊರೊನಾ ಸೋಂಕನ್ನು ತಡೆಗಟ್ಟಲು ಬೇಕಾಗುವ ಎಲ್ಲ ವಸ್ತುಗಳನ್ನು ಬಳಕೆ ಮಾಡಿದೆ. ಪ್ರತ್ಯೇಕ ನಗರಗಳಲ್ಲಿ ರಿಮೋಟ್ ಟೆಂಪರೇಚರ್ ಸ್ಕ್ಯಾನರ್, ಗಂಟಲು ಕೆರೆತದ ಟೆಸ್ಟ್ ನಡೆಸಲಾಗಿದೆ. ಟೆಸ್ಟ್ ನಡೆಸಲಾದ ಒಂದು ಗಂಟೆಯೊಳಗೆ ವರದಿ ಸಿದ್ಧಪಡಿಸುವ ವ್ಯವಸ್ಥೆ ನಡೆಸಲಾಗಿದೆ. ಅಲ್ಲಿನ ಎಲ್ಲ ಫೋನ್ ಬೂಟ್ ಗಳನ್ನೂ ಟೆಸ್ಟಿಂಗ್ ಸೆಂಟರ್ ಗಳಾಗಿ ಮಾರ್ಪದಿಸಲಾಗಿತ್ತು. ಸೋಂಕಿನ ತನಿಖೆ ನಡೆಸಲು ದೊಡ್ಡ ದೊಡ್ಡ ಕಟ್ಟಡಗಳು, ಹೋಟೆಲ್, ಪಾರ್ಕಿಂಗ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಥರ್ಮಲ್ ಎಮೆರ್ಜೆನ್ಸಿ ಕ್ಯಾಮರಾಗಳನ್ನು ಅಳವಡಿಸಿ, ಜ್ವರದಿಂದ ಬಳಲುತ್ತಿರುವ ವ್ಯಕ್ತಿಗಳ ಶೀಘ್ರ ಪತ್ತೆ ಹಚ್ಚಲಾಗಿತ್ತು.

ಮಾರುಕಟ್ಟೆ ಹಾಗೂ ಹೋಟೆಲ್ ಗಳನ್ನೂ ಬಂದ್ ಇಡದೆ ಇದ್ದ ಕಾರಣ ಅಲ್ಲಿಗೆ ಭೇಟಿ ನೀಡುವವರ ಮೇಲೆ ಟೆಸ್ಟ್ ನಡೆಸಲಾಗಿದೆ. ಜ್ವರದ ಟೆಸ್ಟ್ ಪಡೆದವರಿಗೆ ಮಾತ್ರ ಮಾರುಕಟ್ಟೆಗಳಿಗೆ ಹಾಗೂ ರೆಸ್ಟೋರೆಂಟ್ ಗಳಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಅಷ್ಟೇ ಅಲ್ಲ ಕೊರೊನಾ ವೈರಸ್ ನ ಸೋಂಕಿನಿಂದ ಪಾರಾಗಲು ಕೈಗಳನ್ನು ಹೇಗೆ ಬಳಸಬೇಕು ಎಂಬುದನ್ನೂ ಕೂಡ ಅಲ್ಲಿನ ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ. ಬಲಗೈಯನ್ನು ಬಳಸುವ ವ್ಯಕ್ತಿಗೆ ಮೊಬೈಲ್ ಬಳಸಲು, ಬಾಗಿಲ ತೆರೆಯಲು ಹಾಗೂ ಇತರೆ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಲು ಎಡಗೈ ಬಳಕೆ ಮಾಡುವ ಸಲಹೆ ನೀದಲಾಯಿತು. ದಕ್ಷಿಣ ಕೊರಿಯಾದಲ್ಲಿ ಕೈಗಳ ಬಳಕೆ ಒಂದು ಮಹತ್ವದ ಪಾತ್ರ ನಿರ್ವಹಿಸಿತು. ಈ ಕುರಿತು ಹೇಳಿಕೆ ನೀಡಿರುವ ತಜ್ಞರು, ಹೆಚ್ಚಿನ ಬಲಗೈಯನ್ನು ಬಳಸುವ ಹೆಚ್ಚಿನ ಸಂಖ್ಯೆಯ ಜನರು ತಮ್ಮ ದಿನನಿತ್ಯದ ಬಹುತೇಕ ಕೆಲಸಗಳನ್ನು ಮಾಡಲು ಬಲಗೈ ಬಳುತ್ತಾರೆ. ಹಾಗೂ ಅದೇ ಕೈ ಬಳಿಕ ಕಣ್ಣು, ಮೂಗು ಹಾಗೂ ಬಾಯಿ ಮುಟ್ಟಲು ಬಳಸುತ್ತಾರೆ ಎಂದು ಹೇಳುತ್ತಾರೆ.

Trending News