ಉಕ್ರೇನ್ ಮೇಲೆ ರಷ್ಯಾ ರಾಸಾಯನಿಕ ದಾಳಿ ಕುರಿತು ನ್ಯಾಟೋ ಮುಖ್ಯಸ್ಥರು ಹೇಳಿದ್ದೇನು?

Russia Ukraine War: ಉಕ್ರೇನ್ ಮೇಲೆ ರಷ್ಯಾ ರಾಸಾಯನಿಕ ದಾಳಿ ಕುರಿತು ನ್ಯಾಟೋ ಮುಖ್ಯಸ್ಥರು ಮಹತ್ತರ ಹೇಳಿಕೆಯೊಂದನ್ನು ನೀಡಿದ್ದಾರೆ. 

Written by - Zee Kannada News Desk | Last Updated : Mar 13, 2022, 01:20 PM IST
  • ಉಕ್ರೇನ್ ಮೇಲೆ ರಷ್ಯಾ ರಾಸಾಯನಿಕ ದಾಳಿ ಕುರಿತು ನ್ಯಾಟೋ ಮುಖ್ಯಸ್ಥರ ಹೇಳಿಕೆ
  • "ಮುಂಬರುವ ದಿನಗಳಲ್ಲಿ ಉಕ್ರೇನಿಯನ್ನರಿಗೆ ಹೆಚ್ಚಿನ ಕಷ್ಟ ಎದುರಾಗಬಹುದು"
  • ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಭಾನುವಾರ ಎಚ್ಚರಿಕೆ
ಉಕ್ರೇನ್ ಮೇಲೆ ರಷ್ಯಾ ರಾಸಾಯನಿಕ ದಾಳಿ ಕುರಿತು ನ್ಯಾಟೋ ಮುಖ್ಯಸ್ಥರು ಹೇಳಿದ್ದೇನು? title=
ಉಕ್ರೇನ್

ಉಕ್ರೇನ್ (Ukraine) ಮೇಲೆ ರಾಸಾಯನಿಕ ಅಸ್ತ್ರಗಳನ್ನು ಬಳಸಲು ರಷ್ಯಾ (Russia) ಸುಳ್ಳು ನೆಪಗಳನ್ನು ಹುಡುಕುತ್ತಿದೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಭಾನುವಾರ ಎಚ್ಚರಿಸಿದ್ದಾರೆ. 

ಇದನ್ನೂ ಓದಿ: ಒಂದೇ ಗಿಡದಲ್ಲಿ 1200 ಟೊಮೆಟೋ ಬೆಳೆದು ಗಿನ್ನಿಸ್​ ದಾಖಲೆ ನಿರ್ಮಿಸಿದ ವ್ಯಕ್ತಿ

ಜರ್ಮನ್ ಪತ್ರಿಕೆ ವೆಲ್ಟ್ ಆಮ್ ಸೊನ್‌ಟ್ಯಾಗ್‌ಗೆ ನೀಡಿದ ಸಂದರ್ಶನದಲ್ಲಿ, ವೆಸ್ಟ್‌ನ ಮಿಲಿಟರಿ ಒಕ್ಕೂಟದ ಮುಖ್ಯಸ್ಥರು ಉಕ್ರೇನ್‌ (Russia-Ukraine War) ಮೇಲೆ ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂದು ಹೇಳಿದ್ದಾರೆ. 

ಮುಂಬರುವ ದಿನಗಳಲ್ಲಿ ಉಕ್ರೇನಿಯನ್ನರಿಗೆ ಹೆಚ್ಚಿನ ಕಷ್ಟ ಎದುರಾಗಬಹುದು ಎಂದು NATO ಮುಖ್ಯಸ್ಥರು ಹೇಳಿದ್ದಾರೆ.   

ಶುಕ್ರವಾರ ಕರೆದ ಯುಎನ್ ಸೆಕ್ಯುರಿಟಿ ಕೌನ್ಸಿಲ್ (UN Security Council) ಸಭೆಯಲ್ಲಿ, ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ ಅವರು, ಉಕ್ರೇನ್ ಅತ್ಯಂತ ಅಪಾಯಕಾರಿ ಜೈವಿಕ ಪ್ರಯೋಗಗಳನ್ನು ನಡೆಸುತ್ತಿರುವ ಕನಿಷ್ಠ 30 ಜೈವಿಕ ಪ್ರಯೋಗಾಲಯಗಳನ್ನು ಹೊಂದಿದೆ. ಇದನ್ನು ಸಾಬೀತುಪಡಿಸುವ ದಾಖಲೆಗಳನ್ನು ಅದರ ರಕ್ಷಣಾ ಸಚಿವಾಲಯ ಹೊಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Pakistan: ಭಾರತದ ರಫೇಲ್ ಎದುರಿಸಲು ಚೀನಾದಿಂದ J-10C ಖರೀದಿಸಿದ ಪಾಕಿಸ್ತಾನ!

ಈ ಪ್ರಯೋಗಗಳನ್ನು ಯುನೈಟೆಡ್ ಸ್ಟೇಟ್ಸ್‌ನ ಡಿಫೆನ್ಸ್ ಥ್ರೆಟ್ ರಿಡಕ್ಷನ್ ಏಜೆನ್ಸಿಯಿಂದ ಮಾಡಲಾಗುತ್ತಿದೆ. ಧನಸಹಾಯ ಮತ್ತು ಮೇಲ್ವಿಚಾರಣೆ ಕೂಡ ಮಾಡಲಾಗುತ್ತಿದೆ ಎಂದು ರಾಯಭಾರಿ ಹೇಳಿದ್ದಾರೆ.

ಉಕ್ರೇನ್‌ನಲ್ಲಿ ರಾಸಾಯನಿಕ ಅಥವಾ ಜೈವಿಕ ಏಜೆಂಟ್‌ಗಳ ಬಳಕೆಗಾಗಿ ರಷ್ಯಾ ಸುಳ್ಳು ಹೇಳುತ್ತಿದೆ. ಈ ಸುಳ್ಳಿನ ಹಿಂದಿನ ಉದ್ದೇಶವು ಸ್ಪಷ್ಟವಾಗಿ ತೋರುತ್ತದೆ. ರಷ್ಯಾವು ರಾಸಾಯನಿಕ ಅಥವಾ ಜೈವಿಕ ಏಜೆಂಟ್ ಗಳನ್ನ ಬಳಸಿ ದಾಳಿ ಮಾಡಬಹುದು ಎಂದು US ರಾಯಭಾರಿ ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್‌ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News