ನವದೆಹಲಿ: ನವೀಕರಿಸಿದ ರಾಷ್ಟ್ರೀಯ ನಾಗರಿಕರ ದಾಖಲೆಯ ಅಂತಿಮ ಪಟ್ಟಿ ಶನಿವಾರ ಹೊರಬಿದ್ದ ಕೂಡಲೇ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮೋದಿ ಸರ್ಕಾರದ ಮೇಲೆ ದಾಳಿ ನಡೆಸಿದರು, ಮುಸ್ಲಿಮರನ್ನು ಗುರಿಯಾಗಿಸುವ ನೀತಿಯ ಭಾಗವಾಗಿ ಎನ್ಆರ್ಸಿ ಜಾರಿಗೆ ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
— Imran Khan (@ImranKhanPTI) August 31, 2019
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ವಾರಗಗಳಿಂದ ಭಾರತದ ವಿರುದ್ಧದ ಟೀಕಾ ಪ್ರಹಾರ ಮುಂದುವರೆಸಿರುವ ಖಾನ್, ಭಾರತದಿಂದ ಮುಸ್ಲಿಮರ ಜನಾಂಗೀಯ ಶುದ್ಧೀಕರಣವು ವಿಶ್ವದಾದ್ಯಂತ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದರು.
Reports in Indian and international media on Modi Govt's ethnic cleansing of Muslims should send alarm bells ringing across the world that the illegal annexation of Kashmir is part of a wider policy to target Muslims.https://t.co/QmjTDyaGVV
— Imran Khan (@ImranKhanPTI) August 31, 2019
'ಮೋದಿ ಸರ್ಕಾರದ ಮುಸ್ಲಿಮರ ಜನಾಂಗೀಯ ಶುದ್ಧೀಕರಣದ ಕುರಿತ ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿನ ವರದಿಗಳು ಕಾಶ್ಮೀರವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಮುಸ್ಲಿಮರನ್ನು ಗುರಿಯಾಗಿಸುವ ನೀತಿಯ ಭಾಗವಾಗಿವೆ.ಇದು ವಿಶ್ವದಾದ್ಯಂತ ಎಚ್ಚರಿಕೆಯ ಗಂಟೆಯಾಗಿದೆ ಎಂದು ಖಾನ್ ಟ್ವೀಟ್ ಮಾಡಿ ಎನ್ಆರ್ಸಿ ಅಂತಿಮ ಪಟ್ಟಿ ಕುರಿತ ವರದಿಗಳನ್ನು ಅವರು ಟ್ಯಾಗ್ ಮಾಡಿದ್ದಾರೆ. ಕಳೆದ ವಾರ ಸರಣಿ ಟ್ವೀಟ್ಗಳಲ್ಲಿ, ಖಾನ್ ಅವರು ಭಾರತ ಸರ್ಕಾರವನ್ನು ನಾಜಿ ಸಿದ್ದಾಂತವನ್ನು ಅನುಸರಿಸುವ ಫ್ಯಾಸಿಸ್ಟ್ ಎಂದು ಕರೆದಿದ್ದರು.
ಅಸ್ಸಾಂನಲ್ಲಿ ನವೀಕರಿಸಿದ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಯ ಅಂತಿಮ ಪಟ್ಟಿ ಶನಿವಾರ ಹೊರಬಿದ್ದಿದೆ. 3.3 ಕೋಟಿ ಅರ್ಜಿದಾರರಲ್ಲಿ, 19,06,657 ಜನರನ್ನು ಹೊರಗಿಡಲಾಗಿದ್ದು, ಕಳೆದ ವರ್ಷ ಪ್ರಕಟವಾದ ಅಂತಿಮ ಕರಡಿನಲ್ಲಿ 40 ಲಕ್ಷ ಜನರಲ್ಲಿ ಅರ್ಧದಷ್ಟು ಜನರನ್ನು ಹೊರಗಿಡಲಾಗಿದೆ.