'ಕಾಶ್ಮೀರ ವಿಷಯ ಸಂಪೂರ್ಣ ಆಂತರಿಕ ವಿಚಾರ' ವಿಶ್ವಸಂಸ್ಥೆ ಸಭೆ ನಂತರ ಭಾರತ ಮತ್ತೆ ಸ್ಪಷ್ಟನೆ

 ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯ ಸಂಪೂರ್ಣವಾಗಿ ಆಂತರಿಕ ಎಂದು ಭಾರತ ಮತ್ತೆ ಸ್ಪಷ್ಟಪಡಿಸಿದೆ.ಈ ವಿಚಾರವಾಗಿ ಚರ್ಚಿಸಲು ಕರೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ನಂತರ ಭಾರತದ ಈ ಹೇಳಿಕೆ ಬಂದಿದೆ. 

Last Updated : Aug 17, 2019, 01:07 PM IST
'ಕಾಶ್ಮೀರ ವಿಷಯ ಸಂಪೂರ್ಣ ಆಂತರಿಕ ವಿಚಾರ' ವಿಶ್ವಸಂಸ್ಥೆ ಸಭೆ ನಂತರ ಭಾರತ ಮತ್ತೆ ಸ್ಪಷ್ಟನೆ title=

ನವದೆಹಲಿ: ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯ ಸಂಪೂರ್ಣವಾಗಿ ಆಂತರಿಕ ಎಂದು ಭಾರತ ಮತ್ತೆ ಸ್ಪಷ್ಟಪಡಿಸಿದೆ.ಈ ವಿಚಾರವಾಗಿ ಚರ್ಚಿಸಲು ಕರೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ನಂತರ ಭಾರತದ ಈ ಹೇಳಿಕೆ ಬಂದಿದೆ. 

ವಿಶ್ವಸಂಸ್ಥೆ ಸಭೆ ನಂತರ ಮಾತನಾಡಿದ ಭಾರತದ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ 'ಕಾಶ್ಮೀರದಲ್ಲಿನ ಎಲ್ಲಾ ನಿರ್ಬಂಧಗಳನ್ನು ಕ್ರಮೇಣ ತೆಗೆದುಹಾಕಲು ಸರ್ಕಾರ ಬದ್ಧವಾಗಿದೆ.ಸರ್ಕಾರವು ಸಾಮಾನ್ಯ ಸ್ಥಿತಿಗೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.'ನಾವು ತೆಗೆದುಕೊಂಡ ಕ್ರಮಗಳು ತಡೆಗಟ್ಟುವಂತಿದ್ದರೂ. ಈ ಪ್ರಯತ್ನಗಳು ಕೆಲವೊಮ್ಮೆ ನಿರ್ಬಂಧಗಳಿಗೆ ಕಾರಣವಾಗುತ್ತವೆ. ಆದರೆ ಒಂದು ಸಾವು ಸಂಭವಿಸಿಲ್ಲ' ಎಂದು ಅಕ್ಬರುದ್ದೀನ್ ಸುದ್ದಿಗಾರರಿಗೆ ತಿಳಿಸಿದರು.

ಭಾರತ ಸರ್ಕಾರ ಮತ್ತು ನಮ್ಮ ಶಾಸಕಾಂಗಗಳು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರಗಳು ಉತ್ತಮ ಆಡಳಿತವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿವೆ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿನ ನಮ್ಮ ಜನರಿಗೆ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಹೆಚ್ಚಾಗುತ್ತದೆ. ಇದರಲ್ಲಿ ಯಾವುದೇ ಬಾಹ್ಯ ಪ್ರಭಾವಗಳಿಲ್ಲ, ಎಂದು ಅವರು ಹೇಳಿದರು. ಇದೇ ವೇಳೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅಕ್ಬರುದ್ದೀನ್ ಮೊದಲು ಭಯೋತ್ಪಾಧನೆಯನ್ನು ನಿಲ್ಲಿಸಿ ಮಾತುಕತೆ ಆರಂಭಿಸಬೇಕೆಂದು ಹೇಳಿದರು. ಪಾಕ್ ವಾಸ್ತವಕ್ಕೆ ದೂರವಿರುವ ಪರಿಸ್ಥಿತಿಯನ್ನು ಎಚ್ಚರಿಕೆ ಗಂಟೆಯಂತೆ ತೋರಿಸುತ್ತದೆ ಎಂದು ಅವರು ಹೇಳಿದರು.

ವಿಶ್ವಸಂಸ್ಥೆ ಸಭೆ ಅನೌಪಚಾರಿಕವಾಗಿರುವುದರಿಂದ ಯುಎನ್‌ಎಸ್‌ಸಿ ಸಭೆಯ ಫಲಿತಾಂಶವು ಔಪಚಾರಿಕವಾಗಿ ಘೋಷಣೆಯಾಗುವುದಿಲ್ಲ. ಐದು ಖಾಯಂ ಸದಸ್ಯರು ಮತ್ತು 10 ಖಾಯಂ ಸದಸ್ಯರಿಗೆ ಮಾತ್ರ ಮುಕ್ತವಾಗಿದ್ದ ಈ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಭಾಗವಹಿಸಲಿಲ್ಲ ಎನ್ನಲಾಗಿದೆ.

Trending News