Mandi Community: ಇಲ್ಲಿ ತಂದೆಯೇ ತನ್ನ ಒಡಹುಟ್ಟಿದ ಮಗಳಿಗೆ ವರನಾಗುತ್ತಾನೆ!

Mother Daughter Shares Husband - ಈ ವಿಶಿಷ್ಟ ಸಂಪ್ರದಾಯವು ಬಾಂಗ್ಲಾದೇಶದ ಮಂಡಿ ಬುಡಕಟ್ಟು ಜನಾಂಗದಲ್ಲಿ  ಕಂಡುಬರುತ್ತದೆ. ಈ ಬುಡಕಟ್ಟಿನಲ್ಲಿ ಒಡಹುಟ್ಟಿದ ಮಗಳನ್ನೇ ಅವರ ತಂದೆಗೆ ಕೊಟ್ಟು ಮದುವೆ ಮಾಡಲಾಗುತ್ತದೆ.

Written by - Nitin Tabib | Last Updated : Feb 7, 2022, 10:19 PM IST
  • ಬಾಂಗ್ಲಾದೇಶದ ಮಂಡಿ ಬುಡಕಟ್ಟು ಜನಾಂಗದಲಿದೆ ಈ ವಿಚಿತ್ರ ಪರಂಪರೆ
  • ತಂದೆಯೊಂದಿಗೆಯೇ ಮಗಳ ವಿವಾಹ ನೆರವೇರಿಸಿ ಕೊಡಲಾಗುತ್ತದೆ.
  • ತನ್ನ ಅನುಭವ ಹಂಚಿಕೊಂಡ ಮಂಡಿ ಜನಾಂಗದ ಮಹಿಳೆ.
Mandi Community: ಇಲ್ಲಿ ತಂದೆಯೇ ತನ್ನ ಒಡಹುಟ್ಟಿದ ಮಗಳಿಗೆ ವರನಾಗುತ್ತಾನೆ! title=
Mother Daughter Shares Husband(Representational Image)

ನವದೆಹಲಿ: HusbandSharing - ನೀವೂ ಕೂಡ ನಿಮ್ಮ ಜೀವನದಲ್ಲಿ ಅನೇಕ ವಿಚಿತ್ರ ಆಚರಣೆಗಳ ಬಗ್ಗೆ  ಕೇಳಿರಬಹುದು. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ರೂಢಿಯನ್ನು  ನಂಬಲು ನಿಮಗೆ ಸ್ವಲ್ಪ ಕಷ್ಟವಾಗಬಹುದು. ವಾಸ್ತವದಲ್ಲಿ, ಜಗತ್ತಿನಲ್ಲಿ ಹೆಣ್ಣುಮಕ್ಕಳು ತನ್ನ ತಂದೆಯನ್ನೇ ಮದುವೆಯಾಗುವ ಒಂದು ಸ್ಥಳವಿದೆ. ಇದು ವಿಚಿತ್ರ ಎನಿಸಿದರೂ ಇದು ಸತ್ಯ. ಜಗತ್ತಿನಲ್ಲಿ ಹಲವು ವಿಚಿತ್ರ ಆಚರಣೆಗಳಿವೆ, ಅದರಲ್ಲಿ ಇದೂ ಕೂಡ ಒಂದು. ಈ  ವಿಚಿತ್ರ ಸಂಪ್ರದಾಯದ (WeirdRitual) ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಇಂಗ್ಲಿಷ್ ವೆಬ್‌ಸೈಟ್ ದಿ ಗಾರ್ಡಿಯನ್ ಪ್ರಕಾರ, ಈ ವಿಚಿತ್ರ ಸಂಪ್ರದಾಯವು ಬಾಂಗ್ಲಾದೇಶದ ಮಂಡಿ ಬುಡಕಟ್ಟಿನಲ್ಲಿ ಕಂಡುಬರುತ್ತದೆ. ಈ ಬುಡಕಟ್ಟಿನಲ್ಲಿ ಜನಿಸಿದ ಹುಡುಗಿಯರನ್ನು ಅವರ ತಂದೆಗೆ ಕೊಟ್ಟು ಮದುವೆ ಮಾಡಲಾಗುತ್ತದೆ.

ಈ ವಿಚಿತ್ರ ಪರಂಪರೆಯ ಬಗ್ಗೆ ಮಾಹಿತಿ ನೀಡಿದ ಮಂಡಿ ಬುಡಕಟ್ಟಿನ 30 ವರ್ಷದ ಮಹಿಳೆ ಓರೋಲಾ, "ತನ್ನ ತಂದೆ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು, ನಂತರ ತಾಯಿ ನೋಟೆನ್ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು" ಎಂದು ಹೇಳುತ್ತಾರೆ. ತನ್ನ ಎರಡನೆಯ ತಂದೆಯನ್ನು ನೋಡಿ, ಅವರು ಎಷ್ಟು ಒಳ್ಳೆಯವರು ಎಂದು ಒರೋಲಾ ಯೋಚಿಸುತ್ತಿದ್ದಳಂತೆ. ಅಂದರೆ ಒರೋಲಾ ಪ್ರಕಾರ ತಾಯಿಯ ಎರಡನೇ ಗಂಡ ಅವಳಿಗೆ ಇಷ್ಟವಾಗಿದ್ದ.

ಇದನ್ನೂ ಓದಿ-'Divide And Rule ಇದು ಕಾಂಗ್ರೆಸ್ ನೀತಿ, ತುಕಡೆ-ತುಕಡೆ ಗ್ಯಾಂಗ್ ಗೆ ಲೀಡರ್ ಕಾಂಗ್ರೆಸ್ ಪಕ್ಷ'

3ನೇ ವಯಸ್ಸಿನಲ್ಲಿ ಮದುವೆ ಮಾಡಿಸಲಾಯಿತು (Viral News)
'ನಾನು ಸ್ವಲ್ಪ ದೊಡ್ಡವಳಾದಾಗ, ನನ್ನ ತಂದೆ ಎಂದು ನಾನು ಭಾವಿಸುವ ನನ್ನ ತಾಯಿಯ ಎರಡನೇ ಗಂಡ ನಿಜವಾಗಿಯೂ ನನ್ನ ಪತಿ ಎಂದು ಯಾರೋ ಹೇಳಿದರು. ಈ ಸುದ್ದಿಯನ್ನು ಕೇಳಿದಾಗ ನನಗೆ ಮೊದಲ ಬಾರಿಗೆ ನಾನು ಕನಸು ಕಾಣುತ್ತಿದ್ದೇನೆ ಎಂದು ಭಾವಿಸಿದೆ ಆದರೆ ಅದು ಕನಸಾಗಿರಲಿಲ್ಲ ಮತ್ತು ಅದು ವಾಸ್ತವವಾಗಿತ್ತು 'ಎಂದು ಒರೋಲಾ ಹೇಳುತ್ತಾಳೆ, 'ನಾನು ಕೇವಲ 3 ವರ್ಷದವಳಿದ್ದಾಗ, ನನ್ನ ಇನ್ನೊಬ್ಬ ತಂದೆಯೊಂದಿಗೆ ನಾನು ಮದುವೆಯಾಗಿದ್ದೆ. ಈ ವರದಿ ಸ್ವಲ್ಪ ಹಳೆಯದಾದರೂ ಇಂದಿಗೂ ಈ ಪದ್ಧತಿ ಅಲ್ಲಿ ಚಾಲ್ತಿಯಲ್ಲಿದೆ.

ಇದನ್ನೂ ಓದಿ-Basavaraj Bommai: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5,030 ಕೋಟಿ ರೂ. ಅನುದಾನಕ್ಕೆ ಮನವಿ

ಏನೀ ವಿಚಿತ್ರ ಪರಂಪರೆ? (Trending News)
ಈ ವಿಚಿತ್ರ ಪದ್ಧತಿಯ ಪ್ರಕಾರ ಕಡಿಮೆ ವಯಸ್ಸಿನಲ್ಲಿ ವಿಧವೆಯರಾದ ಯುವತಿಯರನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಿಸಲಾಗುತ್ತದೆ. ಆದರೆ, ಯಾವಾಗ ಆ ಮಹಿಳೆ ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತಾಳೋ, ಅವಳ ಮದುವೆಯನ್ನು ಕೂಡ ಆ ವ್ಯಕ್ತಿಯೊಂದಿಗೆ ನೆರವೇರಿಸಲಾಗುತ್ತದೆ. ಕಡಿಮೆ ವಯಸ್ಸಿನ ಪತಿ ಹೊಸ ಪತ್ನಿಯ ಜೋತೆಗೆ ಆಕೆಯ ಮಗಳ ಪತಿಯಾಗಿ ಇಬ್ಬರನ್ನು ಕೂಡ ದೀರ್ಘಕಾಲದವರೆಗೆ ರಕ್ಷಿಸುತ್ತಾನೆ ಎಂಬುದು ಈ ಜನಾಂಗದ ಜನರ ನಂಬಿಕೆ. ವಿಚಿತ್ರ ಸಂಗತಿ ಎಂದರೆ ಈ ವಾಡಿಕೆ ಇಂದಿಗೂ ಕೂಡ ಆ ಜನಾಂಗದಲ್ಲಿದೆ.

ಇದನ್ನೂ ಓದಿ-ಏಪ್ರಿಲ್ 1 ರಿಂದ PF ಖಾತೆಗಳ ಮೇಲೂ ತೆರಿಗೆ! ನಿಮ್ಮ ಮೇಲೆ ಏನು ಪ್ರಭಾವ ಇಲ್ಲಿ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News