ಖ್ಯಾತ ಸೀರಿಯಲ್‌ ನಟಿ ಶಾಂಭವಿ ಅವಳಿ ಮಗುವಿಗೆ ಬ್ಲಡ್‌ ಕ್ಯಾನ್ಸರ್‌..?! ಸುಂದರವಾಗಿದ್ದ ಜೀವನ ಇದೀಗ ಅಲ್ಲೋಲ ಕಲ್ಲೋಲ!

Serial Actress Shambavi: ನಟಿ ಶಾಂಭವಿ ಕನ್ನಡ ಸಿನಿಮಾ ಹಾಗೂ ಕಿರುತೆರೆಗೆ ಚಿರಪರಿಚಿತರು. ನಟಿ ಕನ್ನಡದ ಹಲವಾರು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಿಟ್ಟಿಸಿಕೊಂಡಿದ್ದಾರೆ. ತಮ್ಮ ಅಭಿನಯದ ಮೂಲಕ ಬಣ್ಣದ ಲೋಕದಲ್ಲಿ ಸೈ ಎನಿಸಿಕೊಂಡಿದ್ದಾರೆ, ಆದರೆ ಸುಂದರವಾಗಿದ್ದ ಅವರ ಜೀವನದಲ್ಲಿ ಇದೀಗ ಬರ ಸಿಡಿಲು ಬಡಿದಿದೆ.  

Written by - Zee Kannada News Desk | Last Updated : Nov 14, 2024, 10:24 AM IST
  • ನಟಿ ಶಾಂಭವಿ ಕನ್ನಡ ಸಿನಿಮಾ ಹಾಗೂ ಕಿರುತೆರೆಗೆ ಚಿರಪರಿಚಿತರು.
  • ಅಭಿನಯದ ಮೂಲಕ ಬಣ್ಣದ ಲೋಕದಲ್ಲಿ ಸೈ ಎನಿಸಿಕೊಂಡಿದ್ದಾರೆ.
  • ಸುಂದರವಾಗಿದ್ದ ಅವರ ಜೀವನದಲ್ಲಿ ಇದೀಗ ಬರ ಸಿಡಿಲು ಬಡಿದಿದೆ.
ಖ್ಯಾತ ಸೀರಿಯಲ್‌ ನಟಿ ಶಾಂಭವಿ ಅವಳಿ ಮಗುವಿಗೆ ಬ್ಲಡ್‌ ಕ್ಯಾನ್ಸರ್‌..?! ಸುಂದರವಾಗಿದ್ದ ಜೀವನ ಇದೀಗ ಅಲ್ಲೋಲ ಕಲ್ಲೋಲ!  title=

Serial Actress Shambavi: ನಟಿ ಶಾಂಭವಿ ಕನ್ನಡ ಸಿನಿಮಾ ಹಾಗೂ ಕಿರುತೆರೆಗೆ ಚಿರಪರಿಚಿತರು. ನಟಿ ಕನ್ನಡದ ಹಲವಾರು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಿಟ್ಟಿಸಿಕೊಂಡಿದ್ದಾರೆ. ತಮ್ಮ ಅಭಿನಯದ ಮೂಲಕ ಬಣ್ಣದ ಲೋಕದಲ್ಲಿ ಸೈ ಎನಿಸಿಕೊಂಡಿದ್ದಾರೆ, ಆದರೆ ಸುಂದರವಾಗಿದ್ದ ಅವರ ಜೀವನದಲ್ಲಿ ಇದೀಗ ಬರ ಸಿಡಿಲು ಬಡಿದಿದೆ.

ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಸಕ್ರಿಯವಾಗಿರುವ ಶಾಂಭವಿ, ತಮ್ಮ ವೈಯಕ್ತಿಕ ಜೀವನದಲ್ಲಿಯೂ ತುಂಬಾ ಆಕ್ಟಿವ್‌, ನಟಿ ಮೂರು ವರ್ಷದ ಹಿಂದೆ ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು, ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ವಿಧಿಯ ಆಟ ಅವರ ಜೀವನಗಳನ್ನೆ ತಲೆ ಕೀಳಾಗಿ ಮಾಡಿ ಬಿಟ್ಟಿದೆ. ನಟಿ ಶಾಂಭವಿ ಅವರ ಅವಳಿ ಮಗುವೊಂದು ಮಾರಕ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿದ್ದಾನೆ. ಶಾಭವಿ ಅವರ ಮೂರು ವರ್ಷದ ಮಗ ಇದೀಗ ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಈ ವಿಷಯವನ್ನಯ ಸ್ವತಃ ನಟಿಯೇ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಇನ್ನೂ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ನಟಿ..."ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆ. 23ರಂದು ನಮ್ಮ ಪುಟ್ಟ ಮೂರು ವರ್ಷದ ಮಗನಿಗೆ "3rd stage ಬ್ಲಡ್ ಕ್ಯಾನ್ಸರ್" ಇರೋದು ಪತ್ತೆ ಆಗಿದೆ. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋ ವರೆಗೆ ಪ್ರತಿ ಕ್ಷಣವೂ "ಇದು ಕ್ಯಾನ್ಸರ್ ಆಗಿರದೆ ಇರಲಿ" ಅಂತಾ ಪ್ರಾರ್ಥಿಸ್ತಾ ಇದ್ವಿ. ಹಣೆಯಲಿ ಬರೆದಿರೋದನ್ನ ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರೆಗಳೆಲ್ಲ ಯಾಕೆ ಅನ್ಸತ್ತೆ!!! ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದೀವಿ ಇವಾಗ. ಬೇರೆ ಆಪ್ಷನ್ ಆದ್ರೂ ಏನಿದೆ?? ಇದು 95% curable ಅಂತಾ doctors ಭರವಸೆ ಕೊಟ್ಟಿದ್ದಾರೆ. ಆದ್ರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ. "ನಿನಗ ಹುಷಾರಿಲ್ಲ ಮಗನೇ, ತುಂಬಾ ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ" ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡ್ತಾ ಇರ್ತೀನಿ. Chemotherapy ಮೊದಲ ಹಂತ ಮುಗಿದು ಎರಡನೇ ಹಂತ ಶುರುವಾಗಿದೆ. ಸುಮಾರು 40 ದಿನಗಳ ಹಿಂದೆ therapy ಯ ಮೊದಲ ದಿನದಂದು ಕ್ಲಿಕ್ಕಿಸಿದ shots ಇದು." ಎಂದು ಬರೆದುಕೊಂಡಿದ್ದಾರೆ. 

2021ರ ಜೂನ್‌ 04ರಲ್ಲಿ ನಟಿ ಶಾಂಭವಿ ಇಬ್ಬರು ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದರು. ಈ ಇಬ್ಬರು ಮಕ್ಕಳಲ್ಲಿ ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಮಗು, ಹೆಣ್ಣು ಮಗುವಿಗೆ ʻದುರ್ಗಾʼ ಅಂತ ನಾಮಕಾರನ ಮಾಡಿದ್ದರೆ ಗಂಡು ಮಗುವಿಗೆ ʻದುಷ್ಯಂತ್‌ʼ ಎಂ ಹೆಸರಿಟ್ಟಿದ್ದು. ಇದೀಗ ಗಂಉ ಮುವಿಗೆ ಕ್ಯಾನ್ಸರ್‌ ರೋಗವರುವುದು ಕಂಡು ಬಂದಿದೆ.

ಇನ್ನೂ ನಟಿ ಶಾಂಭವಿ ಕೆಜಿಎಫ್‌ ಹಾಗೂ ಸೇರಿದಂತೆಹಲವು ಸಿನಿಮಗಳಲ್ಲ ನಟಿಸಿದ್ದಾರೆ. ಅಷ್ಟೆ ಅಲ್ಲದೆ ಕ್ನಡದ ಖ್ಯಾತ ಧಾರವಾಹಿಗಳಾದ ʻಅಮೃಧಾರೆʼ, ‘ನಿಗೂಢ ರಾತ್ರಿ’, ‘ಪಾರು’ ಧಾರಾವಾಗಳಲ್ಲಿ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News