ಕಾರ್ ಬಾಂಬ್ ಸ್ಫೋಟ; ನಾಲ್ವರು ಸಾವು, 90 ಮಂದಿಗೆ ಗಾಯ

ಪೂರ್ವ ಕಾಬೂಲ್'ನ ಗ್ರೀನ್ ವಿಲೇಜ್ ಬಳಿಯ ಜಲಾಲಾಬಾದ್ ರಸ್ತೆಯಲ್ಲಿ ಸೋಮವಾರ ರಾತ್ರಿ 7 ಗಂಟೆ ಕಾರ್​ ಬಾಂಬ್​ ಸ್ಫೋಟ ಸಂಭವಿಸಿದೆ. 

Last Updated : Jan 15, 2019, 10:58 AM IST
ಕಾರ್ ಬಾಂಬ್ ಸ್ಫೋಟ; ನಾಲ್ವರು ಸಾವು, 90 ಮಂದಿಗೆ ಗಾಯ title=

ಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್'ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದು 90ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. 

ಹಲವಾರು ಅಂತಾರಾಷ್ಟ್ರೀಯ ಕಂಪನಿಗಳು ಮತ್ತು ಟ್ರಸ್ಟ್'ಗಳಿರುವ ಪೂರ್ವ ಕಾಬೂಲ್'ನ ಗ್ರೀನ್ ವಿಲೇಜ್ ಬಳಿಯ ಜಲಾಲಾಬಾದ್ ರಸ್ತೆಯಲ್ಲಿ ಸೋಮವಾರ ರಾತ್ರಿ 7 ಗಂಟೆ ಕಾರ್​ ಬಾಂಬ್​ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡವರಲ್ಲಿ ಹೆಚ್ಚು ಮಂದಿ ನಾಗರಿಕರಾಗಿದ್ದಾರೆ. ಇವರಲ್ಲಿ 23 ಮಕ್ಕಳಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ನಜೀಬ್ ಡ್ಯಾನಿಷ್ ಹೇಳಿದ್ದಾರೆ.

"ಸ್ಫೋಟಕಗಳನ್ನು ತುಂಬಿ ವಾಹನವನ್ನು ಸ್ಫೋಟಿಸಲಾಗಿದೆ. ಈಗಾಗಲೇ ಭದ್ರತಾ ಪಡೆ ದಾಳಿಕೋರರ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದು, ದಾಳಿ ನಡೆದ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳದಂತೆ ನಿಯಂತ್ರಣಕ್ಕೆ ತರಲಾಗಿದೆ. ಈವರೆಗೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪೋಲಿಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Trending News