Kabul Airport Attack: ಈ ಗಾಯವನ್ನು ನಾವು ಮರೆಯುವುದಿಲ್ಲ, ಇದಕ್ಕೆ ಕಾರಣರಾದವರನ್ನು ಹುಡುಕಿ ಕೊಲ್ಲುತ್ತೇವೆ- ಅಮೇರಿಕ ಅಧ್ಯಕ್ಷ ಜೋ ಬಿಡೆನ್

Kabul Airport Attack: ಕಾಬೂಲ್ ವಿಮಾನ ನಿಲ್ದಾಣದ ಮೇಲಿನ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳುವುದಾಗಿ ಅಮೆರಿಕ ಪ್ರತಿಜ್ಞೆ ಮಾಡಿದೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಅಧ್ಯಕ್ಷ ಜೋ ಬಿಡೆನ್ ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಇಂತಹ ದಾಳಿಯ ಸಾಧ್ಯತೆಯನ್ನು ಹೆದರಿಸಲಾಗುತ್ತಿದೆ. ಅದೇ ಸಮಯದಲ್ಲಿ, ಐಸಿಸ್ ದಾಳಿಯ ಹೊಣೆ ಹೊತ್ತುಕೊಂಡಿದೆ.

Written by - Yashaswini V | Last Updated : Aug 27, 2021, 07:29 AM IST
  • ದಾಳಿಯ ಹೊಣೆಯನ್ನು ಹೊತ್ತುಕೊಂಡ ಇಸ್ಲಾಮಿಕ್ ಸ್ಟೇಟ್
  • ವಿಮಾನ ನಿಲ್ದಾಣದಲ್ಲಿ ಅಮೆರಿಕದ ಸೈನಿಕರು ಈಗಲೂ ಇದ್ದಾರೆ
  • ರಕ್ಷಣಾ ಕಾರ್ಯಾಚರಣೆಗೆ ಆಗಸ್ಟ್ 31ರವರೆಗೆ ತಾಲಿಬಾನ್ ಗಡುವು ಎಂದು ನಿಗದಿಪಡಿಸಿದೆ
Kabul Airport Attack: ಈ ಗಾಯವನ್ನು ನಾವು ಮರೆಯುವುದಿಲ್ಲ, ಇದಕ್ಕೆ ಕಾರಣರಾದವರನ್ನು ಹುಡುಕಿ ಕೊಲ್ಲುತ್ತೇವೆ- ಅಮೇರಿಕ ಅಧ್ಯಕ್ಷ ಜೋ ಬಿಡೆನ್  title=
America has vowed to avenge the terrorist attack on Kabul airport

ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ಅಮೆರಿಕ ಕೆಂಡಾಮಂಡಲಗೊಂಡಿದೆ. ಭೀಕರ ಪರಿಣಾಮಗಳ ದಾಳಿಗೆ ಹೊಣೆಗಾರರಾಗಿರುವ ಇಸ್ಲಾಮಿಕ್ ಸ್ಟೇಟ್ (ISIS) ಗೆ ಅಮೇರಿಕ ಅಧ್ಯಕ್ಷ ಜೋ ಬಿಡೆನ್ (Joe Biden) ಎಚ್ಚರಿಕೆ ನೀಡಿದ್ದಾರೆ. ತನ್ನ ಸೈನಿಕರು ಮತ್ತು ಸಾಮಾನ್ಯ ಆಫ್ಘನ್ನರ ಸಾವಿಗೆ ಐಸಿಸ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿರುವ ಜೋ ಬಿಡೆನ್,  ಈ ಗಾಯವನ್ನು ನಾವು ಮರೆಯುವುದಿಲ್ಲ. ನಾವು ಪ್ರತಿಯೊಬ್ಬ ಭಯೋತ್ಪಾದನನ್ನು ಹುಡುಕಿ ಹುಡುಕಿ ಕೊಲ್ಲುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಭಾವುಕರಾದ ಅಧ್ಯಕ್ಷ ಬಿಡೆನ್ : 
'ಮಿರರ್' ವರದಿ ಪ್ರಕಾರ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ಒಂದರ ನಂತರ ಒಂದರಂತೆ ಮೂರು ಸ್ಫೋಟಗಳು ಸಂಭವಿಸಿವೆ. ಈ ದಾಳಿಯಲ್ಲಿ 10 ಅಮೆರಿಕನ್ ಕಮಾಂಡೋಗಳು ಸೇರಿದಂತೆ 64 ಜನರು ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿದ್ದಾರೆ. ಏತನ್ಮಧ್ಯೆ, ಭಯೋತ್ಪಾದಕ ಸಂಘಟನೆ ISIS-K ತನ್ನ ಟೆಲಿಗ್ರಾಂ ಖಾತೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣದ ಮೇಲಿನ ದಾಳಿಯ ಹೊಣೆ ಹೊತ್ತುಕೊಂಡಿದೆ.  ಕಾಬೂಲ್ ದಾಳಿಯ ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅಮೇರಿಕ ಅಧ್ಯಕ್ಷ ಜೋ ಬಿಡೆನ್ (Joe Biden), ಐಸಿಸ್ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು. ಈ ಸಮಯದಲ್ಲಿ, ಅವರು ಭಾವನಾತ್ಮಕವಾಗಿ ಕಾಣಿಸಿಕೊಂಡರು. ಮೊದಲಿಗೆ ಈ ಅನಾಹುತದಲ್ಲಿ ಹುತಾತ್ಮರಾದ  ಯೋಧರಿಗೆ ಗೌರವ ಸಲ್ಲಿಸಿದ ಬಿಡೆನ್ ನಂತರ ಭಯೋತ್ಪಾದಕ ಸಂಘಟನೆಯ ವಿರುದ್ಧ ಅಭಿಯಾನವನ್ನು ಘೋಷಿಸಿದರು.

ಇದನ್ನೂ ಓದಿ- Kabul Airport: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮೂರನೇ ಸ್ಫೋಟ, 10 ಯುಎಸ್ ಕಮಾಂಡೋಗಳು ಸೇರಿದಂತೆ 64 ಸಾವು

ಈ ಸಾವುಗಳಿಗೆ ಭಾರೀ ಬೆಲೆ ತೆರಬೇಕಾದೀತು: 
ಕಾಬೂಲ್ ವಿಮಾನ ನಿಲ್ದಾಣದ ಬಳಿ ದಾಳಿಯ (Kabul Airport Attack) ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅಮೇರಿಕ ಅಧ್ಯಕ್ಷ ಜೋ ಬಿಡೆನ್ (Joe Biden), 'ಇದನ್ನು ನಾವು ಕ್ಷಮಿಸುವುದಿಲ್ಲ. ಈ ಗಾಯವನ್ನು ನಾವು ಮರೆಯುವುದಿಲ್ಲ. ಇದಕ್ಕೆ ಕಾರಣರಾದವರನ್ನು ನಾವು ಹುಡುಕಿ ಹುಡುಕಿ ಬೇಟೆಯಾಡುತ್ತೇವೆ ಮತ್ತು ಈ ಸಾವುಗಳಿಗೆ ಅವರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕಾಬೂಲ್ ಬಾಂಬ್ ಸ್ಫೋಟದ ರುವಾರಿಯಾಗಿರುವ ಐಸಿಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯನ್ನು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಕೆಟ್ಟ ದಿನ ಎಂದು ಬಣ್ಣಿಸಿದ ಅಧ್ಯಕ್ಷರು, ಅಮಾಯಕ ಜನರನ್ನು ಕೊಂದವರು ಯಾವುದೇ ಸಂದರ್ಭದಲ್ಲಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಮತ್ತು ಬ್ರಿಟಿಷ್ ಸೈನಿಕರು ಈಗಲೂ ಇದ್ದಾರೆ. ತಾಲಿಬಾನ್ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಆಗಸ್ಟ್ 31 ರವರೆಗೆ ಗಡುವು ವಿಧಿಸಿದೆ. ಆಗಸ್ಟ್ 31 ರೊಳಗೆ ವಿದೇಶಿ ಸೈನಿಕರು ದೇಶವನ್ನು ತೊರೆಯದಿದ್ದರೆ, ಅದು ಒಳ್ಳೆಯದಲ್ಲ ಎಂದು ತಾಲಿಬಾನ್ ತಿಳಿಸಿದೆ.

ಇದನ್ನೂ ಓದಿ-  Afghanistan: ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಾಟರ್ ಬಾಟಲಿಗೆ 3000 ರೂ., ಒಂದು ಪ್ಲೇಟ್ ಅನ್ನಕ್ಕೆ 7500 ರೂ.!

ರಕ್ಷಣಾ ಕಾರ್ಯಾಚರಣೆ ನಿಲ್ಲುವುದಿಲ್ಲ: 
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನಡೆದ ದಾಳಿಯಲ್ಲಿ ಹುತಾತ್ಮರಾದ ಅಮೆರಿಕದ ಸೇವಾ ಸದಸ್ಯರು ವೀರರು. ಅವರು ಇತರರ ಜೀವಗಳನ್ನು ಉಳಿಸುವ ಅಪಾಯಕಾರಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಎಂದಿರುವ ಅಮೆರಿಕ, ತಾಲಿಬಾನ್ ಗಡುವು ನಿಗದಿಪಡಿಸಿರಬಹುದು, ಆದರೆ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ. ನಾವು ಅಫ್ಘಾನಿಸ್ತಾನದಿಂದ ಅಮೆರಿಕದ ನಾಗರಿಕರನ್ನು ರಕ್ಷಿಸುತ್ತೇವೆ. ನಾವು ನಮ್ಮ ಅಫ್ಘಾನ್ ಮಿತ್ರರನ್ನು ರಕ್ಷಿಸುತ್ತೇವೆ ಮತ್ತು ನಮ್ಮ ಮಿಷನ್ ಮುಂದುವರಿಯುತ್ತದೆ ಎಂದು ಬಿಡೆನ್ ಭರವಸೆ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News