ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಭಾರತೀಯರಿಗೆ ವಿಶೇಷವಾದ ಹಬ್ಬ, ಜಗತ್ತಿನ ವಿವಿಧ ಭಾಗಗಳಲ್ಲಿರುವ ಭಾರತೀಯರು ಸಂಭ್ರಮದಿಂದ ಪಟಾಕಿ ಹೊಡೆದು ಆಚರಿಸುತ್ತಾರೆ.
ಈ ಭಾರತೀಯರಲ್ಲಿ ಈ ಹಬ್ಬದ ಪ್ರಾಮುಖ್ಯತೆಯನ್ನು ಅರಿತುಕೊಂಡಿರುವ ಇಸ್ರೇಲ್ ಅಧ್ಯಕ್ಷ ಬೆಂಜಮೀನ್ ನೆತಾನ್ಯಾಹು ಈಗ ವಿಶೇಷವಾಗಿ ಪ್ರಧಾನಿ ಮೋದಿ ಅವರಿಗೆ ಹಿಂದಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶುಭಕೋರಿದ್ದಾರೆ. ಟ್ವೀಟ್ ಮೂಲಕ ಶುಭ ಕೋರಿರುವ ಇಸ್ರೇಲ್ ಅಧ್ಯಕ್ಷರು"ಇಸ್ರೇಲ್ ಜನರ ಪರವಾಗಿ ನನ್ನ ಆತ್ಮೀಯ ಸ್ನೇಹಿತ ನರೇಂದ್ರ ಮೋದಿ ಮತ್ತು ಭಾರತೀಯರಿಗೆ ನಾನು ಶುಭಕೊರುತ್ತೇನೆ.ಈ ಬೆಳಕಿನ ಹಬ್ಬ ಸಂತಸ ಮತ್ತು ಸಮೃದ್ದಿಯನ್ನು ತರಲಿ.ಈ ಟ್ವೀಟ್ ಗೆ ನೀವು ಆಚರಿಸುತ್ತಿರುವ ನಗರದ ಹೆಸರಿನ ಮೂಲಕ ಉತ್ತರಿಸಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
इज़राइल के लोगों की ओर से, मैं अपने प्यारे दोस्त @narendramodi और भारत के लोगों को दिवाली की शुभकामनाएँ देना चाहता हूं। रोशनी के इस चमकदार त्योहार से आपको खुशी और समृद्धि मिले।
हमें बेहद ख़ुशी होगी अगर आप इस ट्वीट का उत्तर, उस शहर के नाम से दें जहां आप यह त्योहार मना रहे हैं🇮🇱🇮🇳— Benjamin Netanyahu (@netanyahu) November 6, 2018
ಪ್ರಧಾನಿ ಮೋದಿ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇಸ್ರೇಲ್ ದೇಶದ ಜೊತೆ ಅವಿನಾಭಾವ ಸಂಭಂದವನ್ನು ಹೊಂದಿದ್ದಾರೆ.ಇದಕ್ಕೆ ಈಗ ಇಸ್ರೇಲ್ ಅಧ್ಯಕ್ಷ ಬೆಂಜಮೀನ್ ನೆತಾನ್ಯಾಹು ಅವರು ದೀಪಾವಳಿ ಹಬ್ಬದ ಪ್ರಯುಕ್ತ ಟ್ವೀಟ್ ಮಾಡಿರುವುದೇ ನಿದರ್ಶನ ಎಂದು ಹೇಳಬಹುದಾಗಿದೆ.