Social Media Rumour: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಚೀನಾ ಸೇನೆ ಗೃಹಬಂಧನದಲ್ಲಿ ಇರಿಸಿದೆ ಎಂಬ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಚೀನಾದ ಕಮ್ಯುನಿಸ್ಟ್ ಪಕ್ಷದ ವರಿಷ್ಠರು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮುಖ್ಯಸ್ಥ ಸ್ಥಾನದಿಂದ ಜಿನ್ ಪಿಂಗ್ ಅವರನ್ನು ವಜಾಗೊಳಿಸಿದ ನಂತರ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಹಲವಾರು ಚೀನಾದ ಸಾಮಾಜಿಕ ಮಾಧ್ಯಮ ನಿರ್ವಾಹಕರು ಹೇಳಿದ್ದಾರೆ. ಈ ಕುರಿತು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಟ್ವೀಟ್ ಮಾಡಿದ್ದು, ಈ ವದಂತಿಯ ಹಿಂದಿನ ನಿಜಾಂಶ ಬೇಗನೆ ಬಹಿರಂಗಗೊಳಿಸಬೇಕು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿಜವಾಗಿಯೂ ಗೃಹಬಂಧನದಲ್ಲಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಟ್ವಿಟ್ಟರ್ ನಲ್ಲಿ #xijinping ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನ ಮಾಡುವ ಮೂಲಕ ಪಿಎಲ್‌ಎ ದಂಗೆಯನ್ನು ನಡೆಸಿದೆ ಎಂದು ಚೀನಾದಲ್ಲಿ ಚರ್ಚೆಗಳು ನಡೆಯುತ್ತಿವೆ. ನ್ಯೂಸ್ ಹೈಲ್ಯಾಂಡ್ ವಿಷನ್‌ನ ನಲ್ಲಿ ಪ್ರಕಟಗೊಂಡ ಮತ್ತೊಂದು ವರದಿಯ ಪ್ರಕಾರ, ಚೀನಾದ ಮಾಜಿ ಅಧ್ಯಕ್ಷ ಹು ಜಿಂಟಾವೊ ಮತ್ತು ಚೀನಾದ ಮಾಜಿ ಪ್ರಧಾನಿ ವೆನ್ ಜಿಯಾಬಾವೊ ಅವರ ಆದೇಶದ ಮೇರೆಗೆ ಚೀನಾದ ಅಧ್ಯಕ್ಷರು ಗೃಹಬಂಧನದಲ್ಲಿದ್ದಾರೆ ಎನ್ನಲಾಗಿದೆ, ಅವರು ಅಲ್ಲಿನ ಸ್ಥಾಯಿ ಸಮಿತಿಯ ಮಾಜಿ ಸದಸ್ಯ ಸಾಂಗ್ ಪಿಂಗ್ ಅವರನ್ನು ಚೀನಾದ ಸೆಂಟ್ರಲ್ ಗಾರ್ಡ್ ಬ್ಯೂರೋ(CGB) ನಿಯಂತ್ರಣವನ್ನು ಹಿಂದಕ್ಕೆ ಪಡೆಯಲು ಒಪ್ಪಿಸಿದ್ದಾರೆ ಎನ್ನಲಾಗಿದೆ.
New rumour to be checked out: Is Xi jingping under house arrest in Beijing ? When Xi was in Samarkand recently, the leaders of the Chinese Communist Party were supposed to have removed Xi from the Party’s in-charge of Army. Then House arrest followed. So goes the rumour.
— Subramanian Swamy (@Swamy39) September 24, 2022
ಇದನ್ನೂ ಓದಿ-Nostradamus : ನಾಸ್ಟ್ರಾಡಾಮಸ್‌ನ ಈ ಭಯಾನಕ ಭವಿಷ್ಯವಾಣಿ ನಿಜವಾಗುವುದೇ?
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಹಿನ್ನೆಲೆ ಇದೀಗ ಚರ್ಚೆಗಳು ಭಾರಿ ವೇಗ ಪಡೆದುಕೊಂಡಿವೆ, ಇದಕ್ಕೆ ಸಂಬಂಧಿಸಿದಂತೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಸ್ವಾಮಿ, "ಚೀನಾ ಕುರಿತು ಹೊಸ ವದಂತಿ ಇದೆ, ಕ್ಸಿ ಜಿನ್‌ಪಿಂಗ್ ಗೃಹಬಂಧನದಲ್ಲಿದ್ದಾರೆಯೇ ಎಂಬುದನ್ನು ತನಿಖೆ ಮಾಡಬೇಕು? ಜಿನ್‌ಪಿಂಗ್ ಸಮರ್‌ಕಂಡ್‌ನಲ್ಲಿದ್ದಾಗ, ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕರು ಅವರನ್ನು ಸೇನಾ ಮುಖ್ಯಸ್ಥ ಹುದ್ದೆಯಿಂದ ವಜಾಗೊಳಿಸಿದ್ದಾರೆ... ಬಳಿಕ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ವದಂತಿ ಹಬ್ಬಿದೆ’’ ಎಂದಿದ್ದಾರೆ. ಇದರ ಜೊತೆಗೆ ಸ್ವಾಮಿ ಅವರು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.
#PLA military vehicles heading to #Beijing on Sep 22. Starting from Huanlai County near Beijing & ending in Zhangjiakou City, Hebei Province, entire procession as long as 80 KM. Meanwhile, rumor has it that #XiJinping was under arrest after #CCP seniors removed him as head of PLA pic.twitter.com/hODcknQMhE
— Jennifer Zeng 曾錚 (@jenniferatntd) September 23, 2022
ಇದನ್ನೂ ಓದಿ-Pakistan : ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ ಪಾಕ್ ಪ್ರಧಾನಿ
ವರದಿ ಏನು?
ವಾಸ್ತವದಲ್ಲಿ, ಎಸ್ ಸಿ ಓ ಸಭೆಗಾಗಿ ಸಮರ್ಕಂಡ್ ಗೆ ತೆರಳಿದ್ದ ಕ್ಸಿ ಜಿನ್‌ಪಿಂಗ್ ಅವರನ್ನು ಸಮರ್‌ಕಂಡ್‌ನಿಂದ ಹಿಂದಿರುಗಿದ ಬಳಿಕ ಸೆಪ್ಟೆಂಬರ್ 16 ರಂದು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಮತ್ತು ಬಹುಶಃ ಪ್ರಸ್ತುತ ಅವರು ಗೃಹಬಂಧನದಲ್ಲಿದ್ದಾರೆ ಎಂದು ವರದಿಗಳು ಹೇಳಿವೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿವೆ. ಆದರೆ, ಈ ಹೇಳಿಕೆಗಳಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಇನ್ನಷ್ಟೇ ಬಯಲಾಗಬೇಕಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.