ದೇವರನ್ನು ರೇಪಿಸ್ಟ್ ಎಂದು ಆರೋಪಿಸಿ, ಎರಡು ವರ್ಷ ಜೈಲಿಗೆ ತಳ್ಳಿದ RTE CHANNEL

ಐರ್ಲೆಂಡ್‌ನ ಸರ್ಕಾರಿ ಟಿವಿ ಚಾನೆಲ್ RTE ಹೊಸ ವರ್ಷದ ಮುನ್ನಾದಿನದಂದು ದೇವರನ್ನು ಅತ್ಯಾಚಾರಿ ಎಂದು ತೋರಿಸುವ ಮೂಲಕ ದೊಡ್ಡ ವಿವಾದ ಸೃಷ್ಟಿಸಿದೆ. ಇದರ ನಂತರ, ಚಾನೆಲ್ ವಿರುದ್ಧ ಸಾಕಷ್ಟು ದೂರುಗಳು ಬಂದಿವೆ.

Written by - Nitin Tabib | Last Updated : Jan 6, 2021, 10:09 PM IST
  • ಐರ್ಲೆಂಡ್ ಟಿವಿ ಚಾನೆಲ್ RTE ಕಾರ್ಯಕ್ರಮದ ಕುರಿತು ಕೋಲಾಹಲ.
  • ಕಾರ್ಯಕ್ರಮದಲ್ಲಿ ದೇವರನ್ನು ರೇಪಿಸ್ಟ್ ಎಂದು ಹೇಳಿದ RTE.
  • ವಿವಾದ ಸೃಷ್ಟಿಯಾಗುತ್ತಿದ್ದಂತೆ ಕ್ಷಮೆಯಾಚಿಸಿದ ಚಾನೆಲ್
ದೇವರನ್ನು ರೇಪಿಸ್ಟ್ ಎಂದು ಆರೋಪಿಸಿ, ಎರಡು ವರ್ಷ ಜೈಲಿಗೆ ತಳ್ಳಿದ RTE CHANNEL title=
TV Channel (Representational Image)

ಡಬಲಿನ್: ಐರ್ಲಾಂಡ್ ನ ಸರ್ಕಾರಿ ಟಿವಿ ಚಾನೆಲ್ RTE ವಿವಾದದಲ್ಲಿ ಸಿಲುಕಿದೆ. ಹೊಸ ವರ್ಷದ ಮುನ್ನಾದಿನದಂದು ವಾಹಿನಿ ದೇವರ ಅನೇಕ ತಮಾಷೆಯ ರೇಖಾಚಿತ್ರಗಳನ್ನು ಬಿತ್ತರಿಸಿದೆ. ಇವುಗಳಲ್ಲಿ ಒಂದರಲ್ಲಿ ದೇವರನ್ನು ಅತ್ಯಾಚಾರಿ ಎಂದು ತೋರಿಸಲಾಗಿದೆ. ಕಾರ್ಯಕ್ರಮದ ನಂತರ, ಟಿವಿ ಚಾನೆಲ್ ವಿರುದ್ಧ ದೂರುಗಳು ಪ್ರಾರಂಭಿಸಿವೆ . ಬಳಿಕ ಟಿವಿ ಚಾನೆಲ್ ಕ್ಷಮೆಯಾಚಿಸಬೇಕಾದ ಸಂದರ್ಭ ಬಂದೊದಗಿದೆ.

ಇದನ್ನು ಓದಿ- ಈಗ ಅಗ್ಗದ ದರದಲ್ಲಿ ವೀಕ್ಷಿಸಿ ನಿಮ್ಮ ನೆಚ್ಚಿನ TV ಚಾನೆಲ್

ಕ್ರಿಶ್ಚನ್ ಸಮುದಾಯದವರ ಅವಮಾನ ಎಂದ ಕ್ಯಾಥಲಿಕ್ ಚರ್ಚ್
ಹೊಸ ವರ್ಷದ ಮುನ್ನಾದಿನದಂದು RTE  ಕಾಮಿಡಿ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದೆ. ಈ ಕಾರ್ಯಕ್ರಮದಲ್ಲಿ ಚಾನೆಲ್ ದೇವರ ಕುರಿತು ಅಪಹಾಸ್ಯ ಮಾಡುತ್ತಾ ಪಶ್ಚಿಮ ಏಷ್ಯಾದಿಂದ ಬಂದ ಪ್ರವಾಸಿಯೋಬ್ಬರ ಮೇಲೆ ದೇವರು ಅತ್ಯಾಚಾರ ನಡೆಸಿ, ಪ್ರವಾಸಿಯ ಇಚ್ಛೆಗೆ ವಿರುದ್ಧವಾಗಿ ಗರ್ಭವತಿಯನ್ನಾಗಿಸಿದರು ಎಂದು ಆರೋಪಿಸಿದೆ. ಅಷ್ಟೇ ಅಲ್ಲ ಈ ಘಟನೆಯ ಬಳಿಕ GOD ನನ್ನು ಎರಡು ವರ್ಷಗಳ ಕಾಲ ಜೈಲಿಗಟ್ಟಲಾಯಿತು ಎಂದು ಅಪಹಾಸ್ಯ ಮಾಡಿದೆ. ಈ ಕಾರ್ಯಕ್ರಮವನ್ನು ವಿಕ್ಷೀಸಿದ ಐರ್ಲೆಂಡ್ ನ ಕ್ಯಾಥಲಿಕ್ ಚರ್ಚ್ ಆಕ್ರೋಶ ವ್ಯಕ್ತಪಡಿಸಿದೆ. ಚಾನೆಲ್ ಅನ್ನು ಟೀಕಿಸಿರುವ ಚರ್ಚ್ ಆಡಳಿತ ಇದು ಕ್ರೈಸ್ತರ ಅಪಮಾನ ಎಂದು ಹೇಳಿದೆ.

ಇದನ್ನು ಓದಿ- ಹೆಚ್ಚು ಹೊತ್ತು ಟಿವಿ ನೋಡಿದರೆ ಎಚ್ಚರ!

ಕ್ಷಮೆಯಾಚಿಸಿ ವಿಡಿಯೋ ಅಳಿಸಿ ಹಾಕಿದ ಚಾನೆಲ್
ಈ ಕಾರ್ಯಕ್ರಮದ ಪ್ರಸಾರದ ನಂತರ ಸರ್ಕಾರಕ್ಕೆ ಸಾಕಷ್ಟು ದೂರುಗಳು ಬಂದಿವೆ. ಚಾನೆಲ್  (TV) ವಿರುದ್ಧ ಸುಮಾರು 1100 ಜನರು ಸರ್ಕಾರಕ್ಕೆ ದೂರು ನೀಡಿದ್ದಾರೆ. ಜನರಲ್ಲಿ ಹೆಚ್ಚುತ್ತಿರುವ ಆಕ್ರೋಶವನ್ನು ನೋಡಿ, ಚಾನೆಲ್ ನಂತರ ಕ್ಷಮೆಯಾಚಿಸಿ ನಂತರ ವಿವಾದಾತ್ಮಕ ಕಾರ್ಯಕ್ರಮದ ವೀಡಿಯೊವನ್ನು ತೆಗೆದುಹಾಕಿತು. ಚಾನೆಲ್ ತನ್ನ ಹೇಳಿಕೆಯಲ್ಲಿ, 'ಈ ಪ್ರಕರಣದಲ್ಲಿ ವಿಭಿನ್ನ ಜನರ  ವಿಭಿನ್ನ ಅಪರಾಧಗಳಾಗಿವೆ ಎಂದು RTE ನಂಬುತ್ತದೆ. ಅದರಲ್ಲೂ ಜೋಕ್ ನೋಡಿ ನಗುವವರಿಗೆ. ನಾವು ಜನರಿಂದ ದೂರುಗಳನ್ನು ಸ್ವೀಕರಿಸಿದ್ದೇವೆ ಮತ್ತು ಅವರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ' ಎಂದಿದೆ.

ಇದನ್ನು ಓದಿ-ಟಿವಿ ಸೆಟ್ ಟಾಪ್ ಬಾಕ್ಸಿನಲ್ಲಿ ಚಿಪ್ ಅಳವಡಿಸಿ ಮೇಲ್ವಿಚಾರಣೆ ಮಾಡಲಿದೆ ಸರ್ಕಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News