ನವದೆಹಲಿ: ಕಳೆದ ವಾರ ಭಾರತಕ್ಕೆ ಹೆಚ್ಚುತ್ತಿರುವ ತೊಂದರೆಗಳಿಗೆ ದೂಷಿಸಿದ್ದ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ಮಂಗಳವಾರ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಉನ್ನತ ನಾಯಕರ ತೀವ್ರ ದಾಳಿಯನ್ನು ಎದುರಿಸಿದ್ದು, ಪ್ರಧಾನಿ ತಕ್ಷಣವೇ ಸ್ಥಾನದಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.
ಇದನ್ನೂ ಓದಿ: ಭಾರತದ ಬಗ್ಗೆ ನೇಪಾಳದ ವರ್ತನೆ ಬದಲಾವಣೆ ಹಿಂದೆ ಚೀನಾ-ಪಾಕ್ ಪಿತೂರಿ
ಸಹ-ಅಧ್ಯಕ್ಷ ಪುಷ್ಪಾ ಕಮಲ್ ದಹಲ್ ನೇತೃತ್ವದ ಪ್ರತಿಸ್ಪರ್ಧಿ ಬಣ ತಮ್ಮನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿ ಭಾರತ ಅವರನ್ನು ಬಳಸಿಕೊಳ್ಳುತ್ತಿದೆ ಎಂದು ಓಲಿ ಕಳೆದ ವಾರ ಆರೋಪಿಸಿದ್ದರು. ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಿಎಂ ಒಲಿ, ನೇಪಾಳವು ನೂತನ ರಾಜಕೀಯ ನಕ್ಷೆಯನ್ನು ತಂದಿದ್ದರಿಂದಾಗಿ ತಮ್ಮನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಭಾರತದ ವೈರಸ್ ಚೀನಿ, ಇಟಾಲಿಯನ್ ವೈರಸ್ ಗಿಂತ ಮಾರಕ- ನೇಪಾಳ ಪ್ರಧಾನಿ ಕೆ.ಪಿ. ಓಲಿ
ಮಂಗಳವಾರ ನಡೆದ ಪಕ್ಷದ 44 ಸದಸ್ಯರ ಸ್ಥಾಯಿ ಸಮಿತಿ ಸಭೆಯಲ್ಲಿ, ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಪುಷ್ಪಾ ಕಮಲ್ ದಹಲ್, ಮಾಧವ್ ನೇಪಾಳ, ಜೆಲಾ ನಾಥ್ ಖನಾಲ್ ಮತ್ತು ಬಾಂದೇವ್ ಗೌತಮ್ ಅವರನ್ನು ತೆಗೆದುಹಾಕಲು ಆಗ್ರಹಿಸಿದ್ದಾರೆ. ಒಲಿ ನೇತೃತ್ವದ ಸರ್ಕಾರವು ಮೂಲಭೂತ ಆಡಳಿತ ವಿಷಯಗಳ ಬಗ್ಗೆ ವಿಫಲವಾಗಿದೆ ಮತ್ತು ಗಮನವನ್ನು ಬೇರೆಡೆ ಸೆಳೆಯಲು ಭಾರತವನ್ನು ದೂಷಿಸುತ್ತಿದೆ ಎಂದು ಅವರು ವಾದಿಸಿದ್ದಾರೆ ಎಂದು ದಿ ಹಿಮಾಲಯನ್ ಟೈಮ್ಸ್ ಪತ್ರಿಕೆಯ ವೆಬ್ಸೈಟ್ನಲ್ಲಿ ವರದಿಯಾಗಿದೆ.