Viral Girl: ಯಾವಾಗಲು ಯುವಕರನ್ನು ಹನಿ ಟ್ರ್ಯಾಪ್ ಮಾಡುತ್ತಾಳಂತೆ ಈ ಯುವತಿ! ಕಾರಣ ದಂಗಾಗಿಸುವಂತಿದೆ

Honeytrap Cases: ಬ್ರಿಟನ್‌ನ ಈ ಹುಡುಗಿ ಮೊದಲು ಪುರುಷರಿಗೆ ಸಂದೇಶವನ್ನು ಕಳುಹಿಸುತ್ತಾಳೆ ಮತ್ತು ಅವರ ಸ್ನ್ಯಾಪ್‌ಚಾಟ್ ಅಥವಾ ಫೋನ್ ಸಂಖ್ಯೆಯನ್ನು ಸಂಪಾದಿಸುತ್ತಾಳೆ    

Written by - Nitin Tabib | Last Updated : Oct 23, 2022, 09:13 PM IST
  • ಪತ್ನಿಯರು ಮತ್ತು ಗರ್ಲ್ ಫ್ರೆಂಡ್ ಗಳು ತನ್ನ ಸಂಗಾತಿಯ ನಿಷ್ಠೆಯನ್ನು ಪರೀಕ್ಷಿಸುವ ವಿನಂತಿಯೊಂದಿಗೆ ಈ ಹುಡುಗಿಯನ್ನು ಸಂಪರ್ಕಿಸುತ್ತಾರೆ.
  • ಇದರ ನಂತರ, ಈ ಹುಡುಗಿ ಪುರುಷರನ್ನು ಸಂಪರ್ಕಿಸುತ್ತಾಳೆ ಮತ್ತು ಅವರನ್ನು ಮಾತಿನಲ್ಲಿ ಮರಳು ಮಾಡಿ ಅವರ ರಹಸ್ಯವನ್ನು ತಿಳಿದುಕೊಳ್ಳುತ್ತಾಳೆ.
Viral Girl: ಯಾವಾಗಲು ಯುವಕರನ್ನು ಹನಿ ಟ್ರ್ಯಾಪ್ ಮಾಡುತ್ತಾಳಂತೆ ಈ ಯುವತಿ! ಕಾರಣ ದಂಗಾಗಿಸುವಂತಿದೆ title=
Britain Honeytrap Girl

Viral Honey Trap Girl: ಇತ್ತೀಚಿನ ದಿನಗಳಲ್ಲಿ ಹುಡುಗಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯಳಾಗಿದ್ದಾಳೆ. ಆಕೆಯ ಜನಪ್ರಿಯತೆಗೆ ಕಾರಣ ಚಿತ್ರಗಳು ಅಥವಾ ಯಾವುದೇ ಪೋಸ್ಟ್‌ಗಳು ಅಲ್ಲ. ಬದಲಿಗೆ ಅವಳು ಇತರರಿಗಿಂತ ತುಂಬಾ ಭಿನ್ನವಾಗಿರುವ ತನ್ನ ಕೆಲಸಕ್ಕಾಗಿ ಪ್ರಸಿದ್ಧಳಾಗಿದ್ದಾಳೆ. ಈ ಹುಡುಗಿ ಪುರುಷರನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸುತ್ತಾಳೆ. #CheatersGetCaught ಇದುವರೆಗೆ ಟಿಕ್‌ಟಾಕ್‌ನಲ್ಲಿ 210 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವಾಸ್ತವದಲ್ಲಿ, ಪತ್ನಿಯರು ಮತ್ತು ಗರ್ಲ್ ಫ್ರೆಂಡ್ ಗಳು ತನ್ನ ಸಂಗಾತಿಯ ನಿಷ್ಠೆಯನ್ನು ಪರೀಕ್ಷಿಸುವ ವಿನಂತಿಯೊಂದಿಗೆ ಈ ಹುಡುಗಿಯನ್ನು ಸಂಪರ್ಕಿಸುತ್ತಾರೆ. ಇದರ ನಂತರ, ಈ ಹುಡುಗಿ ಪುರುಷರನ್ನು ಸಂಪರ್ಕಿಸುತ್ತಾಳೆ ಮತ್ತು ಅವರನ್ನು ಮಾತಿನಲ್ಲಿ ಮರಳು ಮಾಡಿ ಅವರ ರಹಸ್ಯವನ್ನು ತಿಳಿದುಕೊಳ್ಳುತ್ತಾಳೆ.

ಈಕೆಗೆ ಹನಿಟ್ರ್ಯಾಪ್ ಮಾಡುವ ಐಡಿಯಾ  ಬಂದಿದ್ದಾದರು ಹೇಗೆ?
ಈ ಹುಡುಗಿಯ ಹೆಸರು ಲಿವ್ ಶೆಲ್ಬಿ. 19 ವರ್ಷದ ಶೆಲ್ಬಿ ಬ್ರಿಟನ್ ಮೂಲದವಳು. ಶೆಲ್ಬಿ ಮಹಿಳೆಯರಿಂದ ವಾರಕ್ಕೆ ನೂರಾರು ವಿನಂತಿಗಳನ್ನು ಪಡೆಯುತ್ತಾಳೆ ಎಂದು ಹೇಳುತ್ತಾರೆ. ಶೆಲ್ಬಿ ವೀಡಿಯೊಗಳ ಮೂಲಕ ಪುರುಷರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಕಲ್ಪನೆಯನ್ನು ಅರಿತುಕೊಂಡಿದ್ದಾಳೆ. ‘ಹುಡುಗಿಯೊಬ್ಬಳು ಹನಿ ಟ್ರ್ಯಾಪ್ ಮಾಡುವ ವೀಡಿಯೋವನ್ನು ನೋಡಿದ್ದೇನೆ’ ಎನ್ನುವ ಅವಳು ನಂತರ ಮೋಜಿಗಾಗಿ ನಾನು ಅದನ್ನೇ ಮಾಡಲು ಆರಂಭಿಸಿದೆ ಎನ್ನುತ್ತಾಳೆ. 

ಇದನ್ನೂ ಓದಿ-Viral Video: ವ್ಯಕ್ತಿಯ ಅಂತ್ಯಕ್ರಿಯೆಗೆ ಬಂದ ಮಂಗ.. ಮುತ್ತು ಕೊಟ್ಟು ಭಾವುಕ ವಿದಾಯ

ಶೆಲ್ಬಿ ಪ್ರಕಾರ, ಅವಳು ಈ ಕೆಲಸಕ್ಕೆ ಹಣ ತೆಗೆದುಕೊಳ್ಳುವುದಿಲ್ಲ, ಬದಲಿಗೆ ಹೆಸರು ಮತ್ತು ಫೋಟೋಗಳನ್ನು ಬದಲಾಯಿಸುವ ಮೂಲಕ ತನ್ನ ಸಂಗಾತಿಯ ಚಾಟ್ ಅನ್ನು ಪೋಸ್ಟ್ ಮಾಡುವುದಾಗಿ ಮಹಿಳೆಯರ ಮುಂದೆ ಷರತ್ತು ಹಾಕುತ್ತಾಳೆ.

ಇದನ್ನೂ ಓದಿ-Video Viral : ಸಿಂಹಗಳ ಜೊತೆ ಫುಟ್ಬಾಲ್ ಆಡುವ ವ್ಯಕ್ತಿ.. ನೋಡಿದ್ರೆ ರೊನಾಲ್ಡೊ ಕೂಡ ಶಾಕ್ ಆಗ್ತಾರೆ!

ಈ ರೀತಿಯ ಪುರುಷರ ರಹಸ್ಯಗಳನ್ನು ತಿಳಿದುಕೊಳ್ಳುತ್ತಾಳೆ 
ಶೆಲ್ವಿ ಪ್ರಕಾರ, ಅವಳು ಮೊದಲು ಪುರುಷರಿಗೆ ಸಂದೇಶವನ್ನು ಕಳುಹಿಸುತ್ತಾಳೆ ಮತ್ತು ಅವರ ಸ್ನ್ಯಾಪ್‌ಚಾಟ್ ಅಥವಾ ಫೋನ್ ಸಂಖ್ಯೆಯನ್ನು ಕೇಳುತ್ತಾಳೆ. ನೇರ ಪುರುಷರನ್ನು ಆಫ್‌ಲೈನ್‌ನಲ್ಲಿ ಸಂಪರ್ಕಿಸಿದರೆ ಅವರು ನಿರಾಕರಿಸುತ್ತಾರೆ ಎಂದು ಶೆಲ್ವಿ ಹೇಳುತ್ತಾಳೆ, ಆದರೆ ಆನ್‌ಲೈನ್ ಚಾಟ್‌ಗಳಲ್ಲಿ ಅವರು ಆಗಾಗ್ಗೆ ಒಪ್ಪಿಕೊಳ್ಳುತ್ತಾರೆ ಎಂಬುದು ಶೆಲ್ವಿ ಅಭಿಮತ. ಏಕೆಂದರೆ ಚಾಟ್ ಅನ್ನು ಡಿಲೀಟ್ ಮಾಡುವ ಮೂಲಕ ಬಚಾವಾಗಬಹುದು ಎಂದು ಪುರುಷರು ಭಾವಿಸುತ್ತಾರೆ ಎನ್ನುತ್ತಾಳೆ ಶೆಲ್ವಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News