Highest Inflation: ಈ ದೇಶಗಳು ವಿಶ್ವದಲ್ಲೇ ಅತಿಹೆಚ್ಚು ಹಣದುಬ್ಬರವನ್ನು ಎದುರಿಸುತ್ತಿವೆ..!

Highest inflation in the world: ಹಣದುಬ್ಬರವು ದಾಖಲೆ ಮಟ್ಟದಲ್ಲಿ ಓಡುತ್ತಿರುವ ದೇಶಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ. ಇಲ್ಲಿ ಹಣದುಬ್ಬರ ದರ ಶೇ.318ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ವಿಶ್ವ ಅಂಕಿಅಂಶಗಳು ಅತಿಹೆಚ್ಚು ಮತ್ತು ಕಡಿಮೆ ಹಣದುಬ್ಬರ ದರವನ್ನು ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ.

Written by - Puttaraj K Alur | Last Updated : Dec 14, 2023, 07:50 PM IST
  • ಹಣದುಬ್ಬರವು ದಾಖಲೆ ಮಟ್ಟದಲ್ಲಿ ಓಡುತ್ತಿರುವ ದೇಶಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ
  • ಅತಿಹೆಚ್ಚು ಹಣದುಬ್ಬರ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಲೆಬನಾನ್ 2ನೇ ಸ್ಥಾನದಲ್ಲಿದೆ
  • ಪಾಕಿಸ್ತಾನವು ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ಇಲ್ಲಿ ಹಣದುಬ್ಬರ ದರವು ಶೇ.29.2ರಷ್ಟಿದೆ
Highest Inflation: ಈ ದೇಶಗಳು ವಿಶ್ವದಲ್ಲೇ ಅತಿಹೆಚ್ಚು ಹಣದುಬ್ಬರವನ್ನು ಎದುರಿಸುತ್ತಿವೆ..! title=
Highest Inflation

ನವದೆಹಲಿ: ಕೊರೊನಾ ಸಾಂಕ್ರಾಮಿಕದ ನಂತರ ಹಣದುಬ್ಬರವು ಅನೇಕ ದೇಶಗಳಲ್ಲಿ ದಾಖಲೆಯ ಮಟ್ಟವನ್ನು ತಲುಪಿದೆ. ಇತ್ತೀಚೆಗೆ ಹಣದುಬ್ಬರವು ಅಮೆರಿಕದಲ್ಲಿ ದಾಖಲೆಗಳನ್ನು ಮುರಿದಿದೆ. ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಹಣದುಬ್ಬರ ದರವು 3 ತಿಂಗಳ ದಾಖಲೆಯ ಮಟ್ಟವಾದ ಶೇ.5.55ಕ್ಕೆ ಏರಿದೆ. ನೆರೆಯ ರಾಷ್ಟ್ರ ಪಾಕಿಸ್ತಾನದ ಜನರು ಹಣದುಬ್ಬರದಿಂದ ಬಳಲುತ್ತಿದ್ದಾರೆ.

ಹಣದುಬ್ಬರವು ದಾಖಲೆ ಮಟ್ಟದಲ್ಲಿ ಓಡುತ್ತಿರುವ ದೇಶಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ. ಇಲ್ಲಿ ಹಣದುಬ್ಬರ ದರ ಶೇ.318ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ವಿಶ್ವ ಅಂಕಿಅಂಶಗಳು ಅತಿಹೆಚ್ಚು ಮತ್ತು ಕಡಿಮೆ ಹಣದುಬ್ಬರ ದರವನ್ನು ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: ಪಾಕಿಸ್ತಾನ ಸೇನಾ ನೆಲೆ ಮೇಲೆ ಆತ್ಮಾಹುತಿ ಬಾಂಬ್ ದಾಳಿ

ಅತಿಹೆಚ್ಚು ಹಣದುಬ್ಬರ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಲೆಬನಾನ್ 2ನೇ ಸ್ಥಾನದಲ್ಲಿದೆ. ಇಲ್ಲಿ ಹಣದುಬ್ಬರ ದರವು ಶೇ.215ಕ್ಕಿಂತ ಹೆಚ್ಚಾಗಿದೆ. ಈ ದೇಶಗಳಲ್ಲಿನ ಹಣದುಬ್ಬರವು ಜನರಿಗೆ ಜೀವನವನ್ನು ಕಷ್ಟಕರವಾಗಿಸಿದೆ. ಇಲ್ಲಿ ಆಹಾರ, ಬಟ್ಟೆ, ವಸತಿ ಮತ್ತು ಇತರ ಅಗತ್ಯ ವಸ್ತುಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುಗಿದೆ.

ಅರ್ಜೆಂಟೀನಾ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ ಮತ್ತು ಇಲ್ಲಿ ಹಣದುಬ್ಬರ ದರವು ಶೇ.143ರಷ್ಟಿದೆ. ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡದಿದ್ದರೆ ಭವಿಷ್ಯದಲ್ಲಿ ಇದು ಶೇ.15,000ಕ್ಕೆ ಹೆಚ್ಚಾಗಬಹುದು ಎಂದು ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮೆಲೈ ದೇಶವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹಣದುಬ್ಬರದಿಂದ ಬಳಲುತ್ತಿರುವ ದೇಶಗಳಲ್ಲಿ ಸಿರಿಯಾವು ಶೇ.79.1ರೊಂದಿಗೆ 4ನೇ ಸ್ಥಾನದಲ್ಲಿದೆ. ಇದಲ್ಲದೆ ಟರ್ಕಿ 5ನೇ ಸ್ಥಾನ(ಶೇ.61.98)ದಲ್ಲಿದೆ ಮತ್ತು ಇರಾನ್ ಶೇ.39.2ರೊಂದಿಗೆ 6ನೇ ಸ್ಥಾನದಲ್ಲಿದೆ. ಈ ದೇಶಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಮುಖ್ಯ ಕಾರಣಗಳು ಯುದ್ಧ ಅಥವಾ ಸಂಘರ್ಷ, ನೈಸರ್ಗಿಕ ವಿಕೋಪಗಳು, ಸರ್ಕಾರದ ನೀತಿಗಳಲ್ಲಿನ ಬದಲಾವಣೆಗಳು ಮತ್ತು ಆರ್ಥಿಕ ಹಿಂಜರಿತ ಇತ್ಯಾದಿ.

ಇದನ್ನೂ ಓದಿ: Viral Video: ಗಾಜಾ ಮೇಲಿನ ಇಸ್ರೇಲ್ ದಾಳಿ ಖಂಡಿಸಿದ ಟರ್ಕಿ ಸಂಸದನಿಗೆ ವೇದಿಕೆಯಲ್ಲೇ ಹೃದಯಾಘಾತ!

ಹಣದುಬ್ಬರದಿಂದ ಬಳಲುತ್ತಿರುವ ದೇಶಗಳಲ್ಲಿ ಈಜಿಪ್ಟ್ 7ನೇ ಸ್ಥಾನದಲ್ಲಿದೆ ಮತ್ತು ಇಲ್ಲಿ ಹಣದುಬ್ಬರ ದರವು ಶೇ.35.8ರಷ್ಟಕ್ಕೆ ತಲುಪಿದೆ. ಇದಲ್ಲದೆ ಪಾಕಿಸ್ತಾನವು ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ಇಲ್ಲಿ ಹಣದುಬ್ಬರ ದರವು ಶೇ.29.2ರಷ್ಟಿದೆ. ಹಣದುಬ್ಬರದ ವಿಷಯದಲ್ಲಿ ನೈಜೀರಿಯಾ 9ನೇ ಸ್ಥಾನದಲ್ಲಿದ್ದು, ಇಲ್ಲಿ ಹಣದುಬ್ಬರ ದರವು ಶೇ.27.33ರಷ್ಟಿದೆ. ಕಝಾಕಿಸ್ತಾನದಲ್ಲಿ ಇದು ಶೇ.10.3ರಷ್ಟಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News