ನವದೆಹಲಿ : ಅಮೆರಿಕದ ಪ್ರಸಿದ್ಧ ಮಿಯಾಮಿ ಬೀಚ್ ಬಳಿ ಹೆಲಿಕಾಪ್ಟರ್ ಪತನಗೊಂಡ ಪ್ರಕರಣ ಬೆಳಕಿಗೆ ಬಂದಿದೆ (Helicopter Crash Video). ಘನೆಯ ವೇಳೆ ಸಾವಿರಾರು ಜನರು ಸಮುದ್ರ ತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social media)ಹರಿದಾಡುತ್ತಿದೆ. ಸಮುದ್ರ ತೀರದಲ್ಲಿ ಸಾವಿರಾರು ಜನರು ಮೋಜು ಮಸ್ತಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು (Helicopter Crash).ಇದೇ ವೇಳೆ ಹೆಲಿಕಾಪ್ಟರ್ ಹಠಾತ್ತನೆ ಬಂದು ನೆಲಕ್ಕಪ್ಪಳಿಸಿದೆ.
ಅಮೆರಿಕದ ಪ್ರಸಿದ್ಧ ಮಿಯಾಮಿ ಬೀಚ್‌ನಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ (Helicopter Crash).ಅಮೆರಿಕದ ಪ್ರಸಿದ್ಧ ಮಿಯಾಮಿ ಬೀಚ್ ನಲ್ಲಿ ನಡೆದ ಈ ಘಟನೆಯಿಂದ, ಒಂದು ಕ್ಷಣಕ್ಕೆ ಅಲ್ಲಿ ನೆರೆದಿದ್ದವರ ಉಸಿರೇ ನಿಂತು ಹೋದಂತಾಗಿತ್ತು. ಡೈಲಿ ಸ್ಟಾರ್ ವರದಿಯ ಪ್ರಕಾರ, ಫೆಬ್ರವರಿ 19 ರಂದು ಮಿಯಾಮಿಯ ಸೌತ್ ಬೀಚ್‌ನಲ್ಲಿ ಅಪಘಾತ ಸಂಭವಿಸಿದೆ. ಸಾವಿರಾರು ಜನರು ಬೀಚ್‌ನಲ್ಲಿ ಕುಟುಂಬ ಸಮೇತ ಮೋಜು ಮಸ್ತಿಯಲ್ಲಿ ನಿರತರಾಗಿದ್ದ ವೇಳೆ, ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡಿದೆ (Helicopter Crash Video).
ಇದನ್ನೂ ಓದಿ : 'Srivalli' ಸಿಗ್ನೇಚರ್ ಸ್ಟೆಪ್ ಗೆ ಕೊರಿಯನ್ ಯುವತಿಯ Swag Dance, ಫಿದಾ ಆಗಲಿದ್ದಾನೆಯೇ 'Pushpa'?
ಹೆಲಿಕಾಪ್ಟರ್ ಪತನದಿಂದ ಯಾರಿಗೂ ಪ್ರಾಣ ಹಾನಿಯಾಗಿಲ್ಲ ಎನ್ನುವುದು ಸಂತಸದ ವಿಚಾರ. ಹೆಲಿಕಾಪ್ಟರ್ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಮಿಯಾಮಿ ಬೀಚ್ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ (twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
This afternoon at 1:10 p.m., MBPD received a call of a helicopter crash in the ocean near 10 Street. Police and @MiamiBeachFire responded to the scene along with several partner agencies. Two occupants have been transported to Jackson Memorial Hospital in stable condition.
1/2 pic.twitter.com/heSIqnQtle
— Miami Beach Police (@MiamiBeachPD) February 19, 2022
ಹೆಲಿಕಾಪ್ಟರ್ ಪತನದ ವಿಡಿಯೋ :
ಹೆಲಿಕಾಪ್ಟರ್ ಪತನದ ನಂತರ ಸಮುದ್ರದಿಂದ ಹೊಗೆ ಏಳುತ್ತಿರುವುದನ್ನು ವಿಡಿಯೋದಲ್ಲಿ (Video) ಕಾಣಬಹುದು. ವರದಿಯ ಪ್ರಕಾರ, ಹೆಲಿಕಾಪ್ಟರ್ ಬಿದ್ದ ತಕ್ಷಣ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿ 3 ಜನರಿದ್ದರು, ಅದರಲ್ಲಿ 2 ಜನರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : WATCH: ರೈಲಿನ ಕೆಳಗೆ ಸಿಕ್ಕಿ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ ಭೂಪಾಲ್ ವ್ಯಕ್ತಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.