ಕ್ರಿಸ್‌ಮಸ್‌ಗೆ ಪ್ರತಿ ನೌಕರನಿಗೆ ಈ ಕಂಪನಿ ಕೊಟ್ಟ ಬೋನಸ್ ಎಷ್ಟು ಗೊತ್ತಾ?

ಕಳೆದ 45 ವರ್ಷಗಳಿಂದ ಕ್ರಿಸ್ಮಸ್ ಸಂದರ್ಭದಲ್ಲಿ ಪ್ರತಿ ವರ್ಷ ನೌಕರರಿಗೆ ಬೋನಸ್ ನೀಡುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿರುವ ಫ್ಲೋರಾಕ್ರಾಫ್ಟ್ ಕಂಪನಿ ಈ ವರ್ಷವೂ ನೌಕರರಿಗೆ ಬೋನಸ್ ನೀಡಿದೆ.

Last Updated : Dec 29, 2018, 07:25 PM IST

Trending Photos

ಕ್ರಿಸ್‌ಮಸ್‌ಗೆ ಪ್ರತಿ ನೌಕರನಿಗೆ ಈ ಕಂಪನಿ ಕೊಟ್ಟ ಬೋನಸ್ ಎಷ್ಟು ಗೊತ್ತಾ? title=

ಮಿಚಿಗನ್: ಸಾಮಾನ್ಯವಾಗಿ ಎಲ್ಲಾ ಕಂಪನಿಗಳಲ್ಲೂ ಹಬ್ಬದ ಪ್ರಯುಕ್ತ ನೌಕರರಿಗೆ ತಿಂಗಳ ವೇತನದ ಮೂಲ ವೇತನ ಅಥವಾ ಕೆಲವು ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ ಅಮೆರಿಕಾದ ಈ ಕಂಪನಿ ಪ್ರತಿ ನೌಕರನಿಗೆ ನೀಡಿರುವ ಬೋನಸ್ ಮೊತ್ತ ಕೇಳಿದರೆ ಶಾಕ್ ಆಗುವುದ ಖಂಡಿತ!

ಅಮೇರಿಕಾದ ಮಿಚಿಗನ್ ನಲ್ಲಿರುವ 1946ರಲ್ಲಿ ಸ್ಥಾಪನೆಯಾದ ಕರಕುಶಲ ಮತ್ತು ಹೂವಿನ ಕಂಪೆನಿ ಫ್ಲೋರಾಕ್ರಾಫ್ಟ್ ತನ್ನ 200 ಉದ್ಯೋಗಿಗಳಿಗೆ ಕ್ರಿಸ್‌ಮಸ್‌ ಉಡುಗೊರೆಯಾಗಿ 4 ಮಿಲಿಯನ್ ಡಾಲರ್ ಬೋನಸ್ ನೀಡಿದೆ. ಇದರಿಂದ ಪ್ರತಿ ನೌಕರನಿಗೆ ತಲಾ 20,000 ಡಾಲರ್(ಸುಮಾರು 14 ಲಕ್ಷ ರೂ) ಬೋನಸ್ ದೊರೆತಂತಾಗಿದೆ. 

ಕಳೆದ 45 ವರ್ಷಗಳಿಂದ ಕ್ರಿಸ್ಮಸ್ ಸಂದರ್ಭದಲ್ಲಿ ಪ್ರತಿ ವರ್ಷ ನೌಕರರಿಗೆ ಬೋನಸ್ ನೀಡುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿರುವ ಫ್ಲೋರಾಕ್ರಾಫ್ಟ್ ಕಂಪನಿ ಈ ವರ್ಷವೂ ನೌಕರರಿಗೆ ಬೋನಸ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಿಯೋ ಶ್ಕೊನೆರ್, ನೌಕರರ ಕೆಲಸದ ಅವಧಿಯನ್ನು ಆಧರಿಸಿ ಕರ್ತವ್ಯನಿಷ್ಠೆಯಿಂದ ದುಡಿಯುವ ನೌಕರಿಗೆ ಉತ್ತೇಜನದ ರೂಪದಲ್ಲಿ ಬೋನಸ್ ನೀಡಲಾಗುತ್ತದೆ. ಈ ಮೂಲಕ ನೌಕರರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ. 
 

Trending News