Video : ಇಸ್ಲಾಮಿಕ್ ಸೆಂಟರ್‌ನಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿ : ಅಗ್ನಿ ಕೆನ್ನಾಲಿಗೆಗೆ ಕುಸಿದ ಮಸೀದಿಯ ಗುಮ್ಮಟ

Fire in Indonesian Mosque:ಬೆಂಕಿಯ ತೀವ್ರತೆಗೆ ಮಸೀದಿಯ ಗುಮ್ಮಟ ಕುಸಿದು ಬಿದ್ದಿದೆ.  ಮಸೀದಿಯ ಗುಮ್ಮತ್ ಕುಸಿದು ಬಿದ್ದಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ.

Written by - Ranjitha R K | Last Updated : Oct 20, 2022, 12:13 PM IST
  • ಜಕಾರ್ತದಲ್ಲಿರುವ ಇಸ್ಲಾಮಿಕ್ ಸೆಂಟರ್‌ನ ಮಸೀದಿಯಲ್ಲಿ ಬೆಂಕಿ
  • ಬೆಂಕಿಯ ತೀವ್ರತೆಗೆ ಮಸೀದಿಯ ಗುಮ್ಮಟ ಕುಸಿದು ಬಿದ್ದಿದೆ.
  • ಮಸೀದಿಯಲ್ಲಿ ನಡೆಯುತ್ತಿತ್ತು ನವೀಕರಣ ಕಾರ್ಯ
Video : ಇಸ್ಲಾಮಿಕ್ ಸೆಂಟರ್‌ನಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿ : ಅಗ್ನಿ ಕೆನ್ನಾಲಿಗೆಗೆ  ಕುಸಿದ ಮಸೀದಿಯ ಗುಮ್ಮಟ  title=
Fire in Indonesia Mosque (photo twitter)

Fire in Indonesian Mosque : ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ಇಸ್ಲಾಮಿಕ್ ಸೆಂಟರ್‌ನ ಮಸೀದಿಯಲ್ಲಿ ಬುಧವಾರ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ಮಸೀದಿಯ ಗುಮ್ಮಟ ಕುಸಿದು ಬಿದ್ದಿದೆ.  ಮಸೀದಿಯ ಗುಮ್ಮತ್ ಕುಸಿದು ಬಿದ್ದಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ  ಅವಘಡ ಸಂಭವಿಸಿದ ಹಲವು ಗಂಟೆಗಳ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು.

ಮಸೀದಿಯಲ್ಲಿ ನಡೆಯುತ್ತಿತ್ತು ನವೀಕರಣ ಕಾರ್ಯ  :
ಮಸೀದಿಯ ಗುಮ್ಮಟ ಕುಸಿದು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವಘಡ ಸಂಭವಿಸಿದ ವೇಳೆ ಮಸೀದಿಯಲ್ಲಿ ನವೀಕರಣ ಕಾರ್ಯ ನಡೆಯುತ್ತಿತ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮಸೀದಿಯನ್ನು ಆವರಿಸಿತು. ಬೆಂಕಿಯ ತೀವ್ರತೆಗೆ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು. ಕೆಲವೇ ಕ್ಷಣಗಳಲ್ಲಿ ಮಸೀದಿಯ ಗುಮ್ಮಟವು  ತರೆಗೆಲೆಯಂತೆ ಕುಸಿದು ಬಿತ್ತು. ಈ ಭಯಾನಕ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ : ಉಕ್ರೇನ್ ತೊರೆಯಲು ಭಾರತೀಯ ಪ್ರಜೆಗಳಿಗೆ ಸೂಚನೆ

 

ಅಗ್ನಿಶಾಮಕ ದಳದ 18 ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ : 
ಮಸೀದಿಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ನೆಲೆಸಿದ್ದ ಎಲ್ಲರನ್ನೂ ಸ್ಥಳಾಂತರ ಮಾಡಲಾಯಿತು.  ಬೆಂಕಿ ನಂದಿಸಲು 18 ಅಗ್ನಿಶಾಮಕ ದಳದ ವಾಹನಗಳನ್ನು ಕರೆಸಬೇಕಾಯಿತು.  ಅಗ್ನಿಶಾಮಕ ದಳ ಸಿಬ್ಬಂದಿಯ ಹಲವು ಗಂಟೆಗಳ ಪರಿಶ್ರಮದ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಯಿತು. ಮಸೀದಿಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ :ಶ್ರೀಲಂಕಾದ ಲೇಖಕ ಶೆಹನ್ ಕರುಣಾತಿಲಕ ಅವರಿಗೆ 2022 ರ ಬೂಕರ್ ಪ್ರಶಸ್ತಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News