ಬಾಲ್ಕನಿಗೆ ಬಂದು ನಿಂತ್ರೆ ಸಲ್ಮಾನ್ ಖಾನ್‌ ಕೊಲೆ ಮಾಡ್ತಾರೆ..! ರಾಖಿ ಸಾವಂತ್‌ ಶಾಕಿಂಗ್‌ ಹೇಳಿಕೆ

Rakhi Sawant on Salman Khan : ಸಲ್ಮಾನ ಭಾಯ್‌ ಅವರ ಮನೆ ಬಾಲ್ಕನಿಗೆ ಬಂದರೆ ಅವರನ್ನು ಕೊಲೆ ಮಾಡ್ತಾರೆ, ಅದಕ್ಕಾಗಿ ಭಾಯ್‌ ನೀವು ನಿಮ್ಮ ಮನೆ ಬಾಲ್ಕನಿಗೆ ಎಂದೂ ಬರಬೇಡಿ ಎಂದು ನಟಿ ರಾಖಿ ಸಾವಂತ್‌ ಮನವಿ ಮಾಡಿಕೊಂಡಿದ್ದಾರೆ.

Written by - Krishna N K | Last Updated : Apr 28, 2024, 09:11 PM IST
    • ನಟ ಸಲ್ಮಾನ್ ಖಾನ್ ಅವರ ಮನೆ ಹೊರಗಡೆ ನಡೆದ ಗುಂಡಿನ ದಾಳಿ ಪ್ರಕರಣ
    • ಪ್ರಕರಣ ಕುರಿತು ನಟಿ ರಾಖಿ ಸಾವಂತ್‌ ನೀಡಿರುವ ಹೇಳಿಕೆ ವೈರಲ್‌ ಆಗುತ್ತಿದೆ
    • ಮನೆಯ ಬಾಲ್ಕನಿಗೆ ಬಾರದಂತೆ ಸಲ್ಮಾನ್ ಖಾನ್ ಅವರಿಗೆ ಸಲಹೆ ನೀಡಿದ ರಾಖಿಅ
ಬಾಲ್ಕನಿಗೆ ಬಂದು ನಿಂತ್ರೆ ಸಲ್ಮಾನ್ ಖಾನ್‌ ಕೊಲೆ ಮಾಡ್ತಾರೆ..! ರಾಖಿ ಸಾವಂತ್‌ ಶಾಕಿಂಗ್‌ ಹೇಳಿಕೆ title=

Rakhi Sawant : ಬಾಲಿವುಡ್‌ ಭಾಯ್‌ ಜಾನ್‌, ನಟ ಸಲ್ಮಾನ್ ಖಾನ್ ಅವರ ಮನೆ ಹೊರಗಡೆ ನಡೆದ ಗುಂಡಿನ ದಾಳಿ ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸಿತ್ತು. ಈ ಪೈಕಿ ಆರೋಪಿಗಳನ್ನೂ ಸಹ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣ ಕುರಿತು ನಟಿ ರಾಖಿ ಸಾವಂತ್‌ ನೀಡಿರುವ ಹೇಳಿಕೆ ವೈರಲ್‌ ಆಗುತ್ತಿದೆ.

ಇದೇ ತಿಂಗಳು ಏಪ್ರಿಲ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಮುಂಬಾಗ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು. ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ದಾಳಿಯ ಹೊಣೆ ಹೊತ್ತು ಸಲ್ಲು ಭಾಯ್‌ಗೆ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ನಟ ರಮೇಶ್‌ ಅರವಿಂದ್‌ ಪತ್ನಿ, 2 ಮಕ್ಕಳು ಹೇಗಿದ್ದಾರೆ ನೋಡಿ!!

ಇದೀಗ ಈ ಕುರಿತು ಮಾತನಾಡಿರುವ ಬಿಟೌನ್‌ ಮಾದಕ ನಟಿ ರಾಖಿ ಸಾವಂತ್ ಮನೆಯ ಬಾಲ್ಕನಿಗೆ ಬರದಂತೆ ಸಲ್ಮಾನ್ ಖಾನ್ ಅವರಿಗೆ ಸಲಹೆ ನೀಡಿದ್ದಾರೆ. ಸಲ್ಮಾನ್‌ ಭಾಯ್‌ ಎಂದಿಗೂ ನೀವು ನಿಮ್ಮ ಮನೆಯ ಬಾಲ್ಕನಿಗೆ ಬರಬೇಡಿ, ಈದ್‌ ಮತ್ತು ಇತರ ಹಬ್ಬಗಳಲ್ಲಿಯೂ ಸಹ ಬಾಲ್ಕಾನಿಗೆ ಕಾಲಿಡಬೇಡಿ ಎಂದು ರಾಖಿ ಮನವಿ ಮಾಡಿಕೊಂಡಿದ್ದಾಳೆ.

ಅಷ್ಟೇ ಅಲ್ಲದೆ, ಕೊಹಿನೂರ್‌ ಗಿಂತ ಸಲ್ಮಾನ್ ಖಾನ್ ಹೆಚ್ಚು ಮುಖ್ಯ, ಅದಕ್ಕಾಗಿ ಅವರ ಮನೆ ಮತ್ತು ಸುತ್ತಮುತ್ತ ಭದ್ರತೆ ಹಾಗೂ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕಿದೆ ಎಂದು ರಾಖಿ ಒತ್ತಾಯಿಸಿದ್ದಾಳೆ. ದುಬೈನಲ್ಲಿದ್ದ ರಾಖಿ ಇಂದು ಮುಂಬೈಗೆ ಬಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News